ಆಸ್ಟ್ರೇಲಿಯಾ ನೆಲದಲ್ಲೂ ಪ್ರಧಾನಿ ಮೋದಿಯದ್ದೇ ಭರ್ಜರಿ ಹವಾ!

ಸಿಡ್ನಿ: ಪ್ರಧಾನಿ ಮೋದಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಫೇಮಸ್ ಅನ್ನೋ ವಿಚಾರ ಮತ್ತೆ ಮತ್ತೆ ಕನ್ಫರ್ಮ್ ಆಗುತ್ತಿದೆ. ಇದೀಗ ಆಸ್ಟ್ರೇಲಿಯಾ ನೆಲದಲ್ಲೂ ಪ್ರಧಾನಿ ಮೋದಿಯದ್ದೇ ಹವಾ ಜೋರಾಗಿದ್ದು, ಪಿಎಂ ಮೋದಿ ಹವಾ ನೋಡಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಕೂಡ ಶಾಕ್ ಆಗಿದ್ದಾರೆ. ಅಲ್ಲದೆ ಭಾರತದ ನಾಯಕನಿಗೆ ಬಹುಪರಾಕ್ ಹೇಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ (Modi in Australia) ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಪ್ರಮುಖವಾಗಿ ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾ ಪ್ರದೇಶದಲ್ಲಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪಿಎಂ ಮೋದಿ ಹವಾ ಹೇಗಿತ್ತು ಅಂತಾ ಜಗತ್ತಿಗೇ ಇಂದು ಕಣ್ತುಂಬಿಕೊಂಡಿದೆ. ಪಿಎಂ ಮೋದಿ (Narendra Modi) ಸ್ಟೇಜ್ ಹತ್ತಿದ್ದೇ ತಡ, ಅನಿವಾಸಿ ಭಾರತೀಯರು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ರು. ಆಗ ಖುದ್ದು ಆಸ್ಟ್ರೇಲಿಯ ಪ್ರಧಾನಿ ಕೂಡ ಶಾಕ್ ಆದರು.

Prime Minister Modi Australia visit become key event of the world now

'ಪ್ರಧಾನಿ ಮೋದಿಯೇ ಬಾಸ್'

ಬರೋಬ್ಬರಿ 9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಪ್ರಧಾನಿ ಮೋದಿ ವಿಸಿಟ್ ಕೊಟ್ಟಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಆದಾಗ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದರು ಪಿಎಂ ಮೋದಿ. ಈಗ ಮತ್ತೆ 9 ವರ್ಷಗಳ ನಂತರ ಆಸ್ಟ್ರೇಲಿಯಾಗೆ ಬಂದ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರು ಭರ್ಜರಿ ಸ್ವಾಗತ ಕೋರಿದರು. ಅದ್ರಲ್ಲೂ ಪಿಎಂ ಮೋದಿಗೆ ಇರುವ ಫ್ಯಾನ್ಸ್ ನೋಡಿ ಖುದ್ದು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ 'ಪ್ರಧಾನಿ ಮೋದಿಯೇ ಬಾಸ್' ಎಂದು ಹೊಗಳುವ ಮೂಲಕ ಮೋದಿಯವರನ್ನ ವೆಲ್‌ಕಂ ಮಾಡಿದರು.

ಭಾರತ & ಆಸ್ಟ್ರೇಲಿಯಾ ಸಂಬಂಧ ವೃದ್ಧಿ

ಜಾಗತಿಕವಾಗಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದ್ದರೆ, ಮತ್ತೊಂದ್ಕಡೆ ಆಸ್ಟ್ರೇಲಿಯಾ ಕೂಡ ಭಾರತದ ಸ್ನೇಹಿತ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅದರಲ್ಲೂ ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧವೂ ವೃದ್ಧಿಯಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಕೂಡ ಆಸ್ಟ್ರೇಲಿಯಾಗೆ ಭೇಟಿ ನೀಡುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ಕೂಡ ಪ್ರಧಾನಿ ಮೋದಿ ಅವರನ್ನ ಅದ್ಧೂರಿಯಾಗಿ ವೆಲ್‌ಕಂ ಮಾಡಿದ್ದು, ಭಾರತದ ಶತ್ರು ರಾಷ್ಟ್ರಗಳ ಕಿಚ್ಚಿಗೆ ತುಪ್ಪ ಸುರಿದಿದೆ.

Prime Minister Modi Australia visit become key event of the world now

ಪ್ರಧಾನಿ ಕಾರ್ಯಕ್ರಮದಲ್ಲಿ ಜನಸಾಗರ!

ಸಿಡ್ನಿಯ ಖುಡೋಸ್ ಬ್ಯಾಂಕ್ ಅರೆನಾದಲ್ಲಿ ಮೋದಿ ಅವರನ್ನ ಅಭಿನಂದಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಸುಮಾರು 20,000 ಜನ ಭಾಗವಹಿಸಿದ್ದರು ಎನ್ನಲಾಗಿದೆ. ಸಭೆಯಲ್ಲಿ ಭಾರತೀಯರನ್ನ ಮತ್ತು ಆಸ್ಟ್ರೇಲಿಯಾದ ನಾಗರಿಕರನ್ನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಮ್ಮ ಜೀವನಶೈಲಿ ಭಿನ್ನವಾದ್ರೂ ಯೋಗ ನಮ್ಮನ್ನ ಬೆಸೆಯುತ್ತಿದೆ. ಹಿಂದೆ ನಾವು ಕ್ರಿಕೆಟ್‌ ನಿಂದಾಗಿ ಹತ್ತಿರವಾಗಿದ್ದೆವು, ಈಗ ಟೆನಿಸ್ ಮತ್ತು ಸಿನಿಮಾ ಕೂಡಾ ನಮ್ಮನ್ನ ಪರಸ್ಪರ ಬೆಸೆಯುವ ಕೊಂಡಿಗಳಾಗಿವೆ ಎಂದು ಪ್ರತಿಪಾದಿಸಿದರು.

ಜಗತ್ತಿಗೇ ಸಹಾಯ ಮಾಡುತ್ತಿದೆ ಭಾರತ

ತಮ್ಮ ಭಾಷಣದಲ್ಲಿ ಕೊರೊನಾ ಸಂದರ್ಭವನ್ನ ನೆನಪು ಮಾಡಿಕೊಂಡರು ಪ್ರಧಾನಿ. ಆ ಸಮಯದಲ್ಲಿ ಭಾರತ ಒಟ್ಟು 159 ದೇಶಕ್ಕೆ ಔಷಧಿ ರಫ್ತು ಮಾಡಿದೆ. ಹೀಗೆ ಸಾಂಕ್ರಾಮಿಕ ಸಮಯದಲ್ಲೂ ಭಾರತ ಹಲವು ದೇಶಗಳಿಗೆ ಉಚಿತ ಲಸಿಕೆ ರಫ್ತು ಮಾಡಿದೆ. ವಿಪತ್ತು ಸಂಭವಿಸಿದಾಗ ಜಗತ್ತಿಗೆ ಸಹಾಯ ಮಾಡಲು ಭಾರತ ಸದಾ ಮುಂದೆ ಬರುತ್ತದೆ ಎಂದರು ಪ್ರಧಾನಿ ಮೋದಿ. ಅಲ್ಲದೆ ಡಿಜಿಟಲ್ ಲೋಕದಲ್ಲಿ ಭಾರತ ಮಾಡಿರುವ ಸಾಧನೆಯನ್ನೂ ಇದೇ ವೇಳೆ ಪ್ರಸ್ತಾಪ ಮಾಡಿದರು.

Prime Minister Modi Australia visit become key event of the world now

ಒಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ಟ್ರೇಲಿಯಾ ಭೇಟಿ ಭಾರತ ಮತ್ತು ಆಸ್ಟ್ರೇಲಿಯಾ ಮಾತ್ರವಲ್ಲ ಇಡೀ ಜಗತ್ತಿನ ಗಮನ ಸೆಳೆದಿದೆ. ಅದರಲ್ಲೂ ಭಾರತ ಜಾಗತಿಕವಾಗಿ ಬೆಳೆಯುತ್ತಿರುವ ರೀತಿ ಭಾರತದ ಶತ್ರು ರಾಷ್ಟ್ರಗಳಿಗೆ ತಲ್ಲಣ ಸೃಷ್ಟಿಸಿದೆ. ಆದರೆ ಬಲಿಷ್ಠ ರಾಷ್ಟ್ರಗಳು ಭಾರತದ ಜೊತೆಗಿನ ಸಂಬಂಧವನ್ನ ಇನ್ನಷ್ಟು ವೃದ್ಧಿಸಿಕೊಳ್ಳಲು ಯತ್ನಿಸುತ್ತಿವೆ. ಅದೇ ರೀತಿ ಆಸ್ಟ್ರೇಲಿಯಾ ಕೂಡ ಭಾರತದ ಜೊತೆಗಿನ ವ್ಯಾಪಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಬಂಧ ವೃದ್ಧಿಗೆ ಮುಂದಾಗಿರುವುದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+