• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬುಧಾಬಿ : ಪ್ರಧಾನಿ ಮೋದಿ ಅವರಿಗೆ ಭರ್ಜರಿ ಸ್ವಾಗತ

By Mahesh
|

ನವದೆಹಲಿ, ಆಗಸ್ಟ್ 16: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದಿಂದ ಎರಡು ದಿನಗಳ ಕಾಲ ಯುನೈಟೆಡ್ ಅರಬ್ ಎಮಿರೈಟ್ಸ್ (ಯುಎಇ) ಪ್ರವಾಸ ನಿರತರಾಗಿದ್ದಾರೆ. ಮೋದಿ ಅವರ ಚೊಚ್ಚಲ ಪ್ರವಾಸದ ಮೇಲೆ ಯುಎಇಯಲ್ಲಿರುವ ಶೇ 30ರಷ್ಟು ಭಾರತೀಯ ಮೂಲದವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಭಾನುವಾರ ಸಂಜೆ ಅಬುಧಾಬಿ ತಲುಪಿದ ಮೋದಿ ಅವರಿಗೆ ಅಲ್ಲಿನ ರಾಜ ಪರಿವಾರದಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ಆಗಸ್ಟ್ 16 ಹಾಗೂ 17ರಂದು ಯುಎಇಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರು ಅಬುಧಾಬಿ, ದುಬೈಗೆ ಭೇಟಿ ನೀಡಲಿದ್ದಾರೆ. 34 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಯುಎಇಗೆ ಭೇಟಿ ನೀಡುತ್ತಿದ್ದಾರೆ. 1981ರಲ್ಲಿ ಆಗಿನ ಭಾರತದ ಪ್ರಧಾನಿ ಇಂದಿರಾಗಾಂಧಿ ಯುಎಇಗೆ ಭೇಟಿ ನೀಡಿದ ಬಳಿಕ ಮೋದಿ ಅವರು ಆಗಮಿಸುತ್ತಿದ್ದಾರೆ.

ನರೇಂದ್ರ ಮೋದಿ ರವಿವಾರ ಮಧ್ಯಾಹ್ನ ಆಗಮಿಸಲಿದ್ದು, ಅಬುದಾಬಿಯ ಶೇಖ್ ಝಾಯೆದ್ ಮಸೀದಿಗೆ ಭೇಟಿ ನೀಡಲಿದ್ದಾರೆ.

PM Narendra Modi visit to United Arab Emirates (UAE)

ಮುಸಾಫ್ಹದಲ್ಲಿರುವ ಕಾರ್ಮಿಕ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ ಅಬುದಾಬಿ ಹೂಡಿಕೆ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆಗಸ್ಟ್ 17ರಂದು ಮೋದಿಯವರು ಯುಎಇ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಹಾಗೂ ದುಬೈಯ ಆಡಳಿತಗಾರ, ಯುಎಇಯ ಉಪಪ್ರಧಾನಿಯೂ ಆಗಿರುವ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಅನಂತರ ಮೋದಿಯವರು ದುಬೈಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯ ದವರನ್ನುದ್ದೇಶಿಸಿ ಮಾತನಾಡಲಿದ್ದು, ಈ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಯುಎಇಯಲ್ಲಿರುವ ಭಾರತೀಯ ಮೂಲದ ಹೆಸರಾಂತ ಉದ್ದಿಮೆದಾರರಾದ ಬಿಆರ್ ಶೆಟ್ಟಿ ಸೇರಿದಂತೆ ಹಲವು ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ.

ಉಭಯ ರಾಷ್ಟ್ರಗಳ ಮಧ್ಯೆ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಜೊತೆಗೆ ಸಹಕಾರ ಹಾಗೂ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ಮಹತ್ವದ ಮಾತುಕತೆ ನಡೆಯಲಿದೆ.

ವ್ಯಾಪಾರ ಹಾಗೂ ಭದ್ರತೆಯ ಕುರಿತು ಇಲ್ಲಿನ ಆಡಳಿತಗಾರರೊಂದಿಗೆ ಮಾತುಕತೆ ನಡೆಸಲಿರುವ ಮೋದಿ, ಆಗಸ್ಟ್ 17ರಂದು ದುಬೈಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತೀಯ ಸಮುದಾಯ ವನ್ನುದ್ದೇಶಿಸಿ ಮಾತನಾಡಲಿದ್ದಾರೆ.

'ನಮೋ ಇನ್ ಇಂಡಿಯಾ' ಎಂಬ ಹೆಸರಿನ ಈ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾಡಲಿರುವ ಮೋದಿಯವರ ಭಾಷಣ ಕೇಳಲು, ನೋಡಲು ದುಬೈಗರು ಕಾತುರದಲ್ಲಿದ್ದಾರೆ.

ಸೋಮವಾರ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರಿಗಾಗಿ ‘ನಮೋ ಇನ್ ಇಂಡಿಯಾ' ಎಂಬ ವೆಬ್‌ಸೈಟ್ ಆರಂಭಿಸಿ, ಅದರಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈ ವೆಬ್‌ಸೈಟ್‌ನಲ್ಲಿ ಸುಮಾರು 50 ಸಾವಿರ ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು narendra modi ಸುದ್ದಿಗಳುView All

English summary
PM Narendra Modi begins his two-day visit to United Arab Emirates (UAE) today Aug 16. The visit to the UAE is an important one in a lot of respects and the leaders would have a host of issues to discuss.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more