BRICS Summit: ದಕ್ಷಿಣ ಆಫ್ರಿಕಾಗೆ ಪ್ರಧಾನಿ ಮೋದಿ ಭರ್ಜರಿ ಎಂಟ್ರಿ

ಜೋಹಾನ್ಸ್‌ಬರ್ಗ್: ಜಗತ್ತಿನ ಅತ್ಯಂತ ಶಕ್ತಿಶಾಲಿ ಸಂಘಟನೆಗಳಲ್ಲಿ ಬ್ರಿಕ್ಸ್ (BRICS) ಕೂಡ ಒಂದು. ಭಾರತದ ರೀತಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆ ಸೇರಿ ಕಟ್ಟಿರುವ ಸಂಘಟನೆ ಇದು. ಹೀಗಾಗಿ ಬ್ರಿಕ್ಸ್ ಬಗ್ಗೆ ಜಗತ್ತಿನಾದ್ಯಂತ ಒಂದು ಸಂಚಲನ ಇದೆ. ಇದೀಗ 15ನೇ ಬ್ರಿಕ್ಸ್ ಶೃಂಗಸಭೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ಪ್ರಧಾನಿ ಮೋದಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಹಾಗಾದರೆ ಬ್ರಿಕ್ಸ್ ಸಭೆ ಭಾರತಕ್ಕೆ ಅದೆಷ್ಟು ಮುಖ್ಯ? ಬನ್ನಿ ತಿಳಿಯೋಣ.

ಹೌದು, ವಾಟರ್‌ಕ್ಲೂಫ್ ಏರ್ ಫೋರ್ಸ್ ಬೇಸ್‌ಗೆ ಇಂದು ಪ್ರಧಾನಿ ಮೋದಿ ಬಂದು ಇಳಿದರು. ಆಗ ದಕ್ಷಿಣ ಆಫ್ರಿಕಾದ ಉಪಾಧ್ಯಕ್ಷ ಪೌಲ್ ಮಶಾತಿಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಂಡರು. ಆಗಸ್ಟ್ 22ರಿಂದ 24ರ ವರೆಗೆ 15ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಈ ಸಭೆ ನೇತೃತ್ವವನ್ನು ದಕ್ಷಿಣ ಆಫ್ರಿಕಾ ವಹಿಸಿಕೊಂಡಿದೆ. ಇನ್ನು ಸಭೆಯಲ್ಲಿ ಬ್ರಿಕ್ಸ್ (BRICS) ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಗತ್ತಿನ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಹೀಗೆ ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಾ? ಎಂಬ ಕುತೂಹಲ ಕೂಡ ಮೂಡಿದೆ.

PM Narendra Modi arrived in Johannesburg to attend BRICS Summit

ಚೀನಾ ಜೊತೆ ಭಾರತದ ಮೀಟಿಂಗ್?

ಭಾರತ ಹಾಗೂ ಚೀನಾ ನಡುವೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅದರಲ್ಲೂ ಗಡಿ ವಿಚಾರದಲ್ಲಿ ಫೈಟ್ ಜೋರಾಗಿದೆ. ಇದೇ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಜೊತೆಗೆ ಭಾರತದ ಪ್ರಧಾನಿ ಮೋದಿ ಮೀಟಿಂಗ್ ಮಾಡ್ತಾರಾ? ಅನ್ನೋ ಪ್ರಶ್ನೆ ಮೂಡಿದೆ. ಮತ್ತೊಂದ್ಕಡೆ ಬ್ರಿಕ್ಸ್​ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು, ಪಿಎಂ ಮೋದಿ ಇಂದಿನಿಂದ ಒಟ್ಟಾರೆ 3 ದಿನ ಕಾಲ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ, ದಕ್ಷಿಣ ಆಫ್ರಿಕಾಗೆ ಒಟ್ಟು 3ನೇ ಬಾರಿ ಭೇಟಿ ನೀಡಿದಂತೆ ಆಗಿದೆ.

ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಪರ್ಯಾಯ ಶಕ್ತಿ?

ರಷ್ಯಾ & ಉಕ್ರೇನ್ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ, ಬ್ರಿಕ್ಸ್ ಒಕ್ಕೂಟದ 15ನೇ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಏಕೆಂದರೆ ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳನ್ನು ಹೊರತುಪಡಿಸಿ, ಕಟ್ಟಿಕೊಂಡ ಸಂಘಟನೆ ಇದಾಗಿದೆ. ಅದರಲ್ಲೂ ಬ್ರಿಕ್ಸ್ ಒಕ್ಕೂಟದಲ್ಲಿ ಅಮೆರಿಕದ ದೊಡ್ಡ ಶತ್ರು ರಷ್ಯಾ ಇದೆ. ಇದರ ಜೊತೆಗೆ ಚೀನಾ ಕೂಡ ಕೈಜೋಡಿಸಿದೆ. ಹೀಗಾಗಿ ಬ್ರಿಕ್ಸ್ ಸಭೆಯಲ್ಲಿ ಉಕ್ರೇನ್ & ರಷ್ಯಾ ಯುದ್ಧದ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಬಹುದು? ಎಂಬ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳಲಿದೆ.

ಬ್ರಿಕ್ಸ್ ಬಗ್ಗೆ ಪ್ರಧಾನಿ ಮೋದಿ ಮಾತು

ದಕ್ಷಿಣ ಆಫ್ರಿಕಾ ರಾಜಧಾನಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು, ಪ್ರಧಾನಿ ಮೋದಿ ಜೋಹಾನಸ್‌ಬರ್ಗ್‌ಗೆ ತೆರಳುವ ಮೊದಲು ಮಹತ್ವದ ಹೇಳಿಕೆ ನೀಡಿದ್ದರು. ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಸುಧಾರಣಾ ಕ್ರಮ ಒಳಗೊಂಡು ಜಗತ್ತಿನ ದಕ್ಷಿಣ ಭಾಗಕ್ಕೆ ಅನ್ವಯಿಸುವ ವಿವಿಧ ವಿಷಯದ ಚರ್ಚೆಗೆ ಬ್ರಿಕ್ಸ್ ವೇದಿಕೆಯಾಗಿದೆ ಎಂದಿದ್ದರು ಪ್ರಧಾನಿ. ಈ ಶೃಂಗಸಭೆಯು ವಿಶ್ವದ ಶೇ 41ರಷ್ಟು ಜನಸಂಖ್ಯೆ & ಶೇ 16ರಷ್ಟು ಜಿಡಿಪಿ ಹೊಂದಿರುವ ಜಗತ್ತಿನ 5 ದೊಡ್ಡ ಅಭಿವೃದ್ಧಿಶೀಲ ದೇಶಗಳನ್ನ ಒಂದೇ ವೇದಿಕೆಯಡಿ ತರಲಿದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದರು. ಈಗ ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾಗೆ ಬಂದು ಇಳಿದಿದ್ದು, ಭರ್ಜರಿ ಸ್ವಾಗತ ಸಿಕ್ಕಿದೆ.

PM Narendra Modi arrived in Johannesburg to attend BRICS Summit

ಒಟ್ನಲ್ಲಿ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ಮೊದಲಿನಿಂದಲು ಬ್ರಿಕ್ಸ್ ಉತ್ತಮ ಗೌರವ ನೀಡುತ್ತಿದೆ. ಅದರಲ್ಲೂ ಉಕ್ರೇನ್ ಮತ್ತು ರಷ್ಯಾ ಯುದ್ಧ ನಡೆಯುವಾಗ ಭಾರತದ ಪಾತ್ರ ಮಹತ್ವದ್ದು. ಹೀಗಾಗಿ ಭಾರತದ ಬೆನ್ನಿಗೆ ಬ್ರಿಕ್ಸ್ ನಿಲ್ಲುವ ನಿರೀಕ್ಷೆ ಇದೆ. ಇದೆಲ್ಲಕ್ಕೂ ಮೀರಿ ಚೀನಾ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಮಾತುಕತೆ ಕಡೆಗೂ ಇಡೀ ಪ್ರಪಂಚ ಕಣ್ಣಿಟ್ಟು ಕೂತಿದೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇನ್ನೆರಡು ದಿನದಲ್ಲಿ ಸಿಗೋದು ಪಕ್ಕಾ. ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಬ್ರಿಕ್ಸ್ ಒಕ್ಕೂಟದ ಪ್ರಮುಖ ದೇಶಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+