ನೌಕರನಿಂದ ಪಿಜ್ಜಾ ಹಟ್ ಒಳಗೇ ಮೂತ್ರ ವಿಸರ್ಜನೆ!
ಕೆರ್ಮಿಟ್ (ವರ್ಜಿನಿಯಾ), ಫೆ. 20: ನೌಕರನೊಬ್ಬ ತಾನು ಕೆಲಸ ಮಾಡುವ ಪಿಜ್ಜಾ ಹಟ್ ಒಳಗಿರುವ ಅಡುಗೆ ಕೋಣೆಯ ಸಿಂಕ್ ನಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಸುದ್ದಿ ಕೇಳಿಬಂದಿದೆ. ಇದರ ವಿಡಿಯೋ ತುಣುಕು ಇಂಟರ್ನೆಟ್ ಮೂಲಕ ಇಡೀ ಜಗತ್ತಿನಲ್ಲಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪಿಜ್ಜಾ ಹಟ್ ಅಂಗಡಿ ಮಾಲೀಕರು ಉದ್ಯೋಗಿಯನ್ನು ಮನೆಗೆ ಕಳಿಸಿದ್ದಾರೆ.
ನೌಕರ Kitchen Sinkನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿ, ಬಹಿರಂಗವಾಗುತ್ತಿದ್ದಂತೆ ಮಿಂಗೋ ಕೌಂಟಿ ಆರೋಗ್ಯ ಅಧಿಕಾರಿಗಳು ಪಿಜ್ಜಾ ಹಟ್ ಅಂಗಡಿಗೂ ಬಾಗಿಲು ಹಾಕಿಸಿದ್ದಾರೆ. ಅಂದಹಾಗೆ ಈ ನೌಕರ ಇಡೀ ಮಿಂಗೋ ಜಿಲ್ಲೆಯ ಪಿಜ್ಜಾ ಹಟ್ ಸರಣಿಯ ಮ್ಯಾನೇಜರ್.

ಕುಕೃತ್ಯವೆಸಗಿದ ಮ್ಯಾನೇಜರ್ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲವಾದರೂ ಅಂತರ್ಜಾಲದಲ್ಲಿ ಇದೇ ಮನುಷ್ಯ ವಾಷ್ ಬೇಸಿನ್ ನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ತುಣುಕು ಹರಿದಾಡುತ್ತಿದೆ.
ಆದರೆ ಹೀಗೆ ಪಿಜ್ಜಾ ಹಟ್ ಮುಂತಾದ ಫಾಸ್ಟ್ ಫುಡ್ ಕೇಂದ್ರಗಳಲ್ಲಿ ನೌಕರರು ಇಂತಹ ಅಮಾನವೀಯ ಕೃತ್ಯಗಳನ್ನು ಎಸಗುವುದು ಸಾಮಾನ್ಯ ಎಂದು ಘಟನೆ ಬೆಳಕಿಗೆ ಬರುತ್ತಿದ್ದಂತೆ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ನೌಕರ ಈ ಹೇಯ ಕೃತ್ಯ ಎಸಗುತ್ತಿರುವುದು ಸಿಸಿಟಿವಿ ಬೆಳಕಿಗೆ ಬರುತ್ತಿದ್ದಂತೆ ಅವನನ್ನು ಕೆಲಸದಿಂದ ತೆಗೆದುಹಾಕುವ ಮೂಲಕ Pizza Hut ಅಂಗಡಿಗಳು ಸ್ವಲ್ಪವಾದರೂ ವಿಶ್ವಾಸ ಉಳಿಸಿಕೊಳ್ಳುವಂತಾಗಿದೆ ಎಂದು ಗ್ರಾಹಕರು ನೆಮ್ಮದಿ ಹೊಂದಿದ್ದಾರೆ.
'ಸದ್ಯಕ್ಕೆ ಸಾರ್ವಜನಿಕ ಆರೋಗ್ಯಕ್ಕೆ ತುಂಬಾ ಹಾನಿಕರವಾಗಿರುವುದರಿಂದ Pizza Hut ಕೇಂದ್ರವನ್ನು ಮುಚ್ಚಲಾಗಿದೆ. ಇನ್ನೂ ಕೆಲ ವಾರಗಳ ಕಾಲ ಕೇಂದ್ರವನ್ನು ಮುಚ್ಚಲಾಗುವುದು' ಎಂದು ಮಿಂಗೋ ಕೌಂಟಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications