ಪಾಕಿಸ್ತಾನ ವಿಮಾನ ದುರಂತ 47 ಮಂದಿ ಸಾವು?
ಚಿತ್ರಾಲ್ ನಿಂದ ಇಸ್ಲಾಮಾಬಾದಿಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಅಬೋಟಾಬಾದ್ ಬಳಿ ಬುಧವಾರ ಸಂಜೆ ಪತನಗೊಂಡಿದೆ.
ಇಸ್ಲಾಮಾಬಾದ್, ಡಿಸೆಂಬರ್ 07: ಚಿತ್ರಾಲ್ ನಿಂದ ಇಸ್ಲಾಮಾಬಾದಿಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಅಬಟೋಬಾದ್ ಬಳಿ ಬುಧವಾರ ಸಂಜೆ ಪತನಗೊಂಡಿದೆ.
ಸುಮಾರು 47 ಮಂದಿ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಚಿತ್ರಾಲ್ ನಿಂದ ಇಸ್ಲಾಮಾಬಾದ್ ಕಡೆಗೆ ಪ್ರಯಾಣ ಬೆಳೆಸಿತ್ತು ಆದರೆ 4.30ರ ಸುಮಾರಿಗೆ ಸಂಪರ್ಕ ಕಡಿತಗೊಂಡಿತು. ಪಿಐಎ ವಿಮಾನ ಪಿಕೆ 661 ವಿಮಾನ ಎಟಿಆರ್ 42 ಏರ್ ಕ್ರಾಫ್ಟ್ ಆಗಿದ್ದು 40 ಮಂದಿ ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿಯನ್ನು ಹೊಂದಿತ್ತು.

ಹವೆಲಿಯಾನ್ ಬಳಿಯ ಪರ್ವತಕ್ಕೆ ಡಿಕ್ಕಿ ಹೊಡೆದಿರುವ ಬಗ್ಗೆ ಸುದ್ದಿ ಬಂದಿದೆ. ಆದರೆ, ಇನ್ನೂ ಖಚಿತಗೊಂಡಿಲ್ಲ. ಸಹಾಯವಾಣಿ ಸಂಖ್ಯೆಗಳು ಇಲ್ಲಿದೆ: 0092-21-99044890, 0092-21-99044376, ಹಾಗೂ 0092-21-99044394 (ಒನ್ಇಂಡಿಯಾ ಸುದ್ದಿ)












Click it and Unblock the Notifications