ಫೇಸ್ ಬುಕ್ ನಲ್ಲಿ 'ಗುಡ್ ಮಾರ್ನಿಂಗ್' ಎಂದವನನ್ನು ಬಂಧಿಸಿದ ಪೊಲೀಸರು!

Posted By:
Subscribe to Oneindia Kannada

ಅತ್ಯಂತ ಪ್ರಭಾವಶಾಲಿ ಸಾಮಾಜಿಕ ಮಾಧ್ಯಮಗಳಲ್ಲಿ ಅಗ್ರಸ್ಥಾನದಲ್ಲಿರುವ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದವರನ್ನು ಬಂಧಿಸಿದ ಹಲವು ಸುದ್ದಿಗಳನ್ನು ಓದಿದ್ದೇವೆ. ಆದರೆ ಪ್ಯಾಲೆಸ್ತೇನ್ ನ ಹಲಾವಿಮ್ ಹಲಾವಿ ಎಂಬ ಬಿಲ್ಡರ್ ವೊಬ್ಬರು ಫೇಸ್ ಬುಕ್ ನಲ್ಲಿ ಗುಡ್ ಮಾರ್ನಿಂಗ್ ಎಂದು ಪೋಸ್ಟ್ ಮಾಡಿದ್ದಕ್ಕೆ ಇಸ್ರೇಲಿ ಪೊಲೀಸರು ಅವರನ್ನು ಬಂಧಿಸಿದ ವಿಚಿತ್ರ ಘಟನೆ ನಡೆದಿದೆ.

ಕಾರಿನ ಫೋಟೋ ತೆರಿಗೆಗೆ ಆಹ್ವಾನ, ಸಾಮಾಜಿಕ ಜಾಲತಾಣಗಳ ಮೇಲೆ ಐಟಿ ಕಣ್ಣು

'ಗುಡ್ ಮಾರ್ನಿಂಗ್' ಅನ್ನೋದು ವಿವಾದಾತ್ಮಕ ಹೇಳಿಕೆಯೇ? ಅದರಲ್ಲಿ ಬಂಧಿಸುವಂಥದ್ದು ಏನಿದೆ ಎಂದರೆ ನಡೆದಿದ್ದು ಇಷ್ಟೆ, ಅರಾಬಿಕ್ ಭಾಷೆಯಲ್ಲಿ ಗುಡ್ ಮಾರ್ನಿಂಗ್ ಎಂದು ಪೋಸ್ಟ್ ಮಾಡಿದ್ದ ಇವರ ಪೋಸ್ಟ್ ಅನ್ನು ಟ್ರಾನ್ಸ್ ಲೇಟರ್ ಸಾಫ್ಟವೇರ್ ವೊಂದು, 'attack them' ಎಂದು ಅನುವಾದಿಸಿದೆ!

Palestin man jailed for posting 'Good Morning' messege in Facebook!

ಈ Attack Them ಎಂಬ ಅನುವಾದದೊಂದಿಗೆ ಬುಲ್ಡೋಜರ್ ನ ಚಿತ್ರವೂ ಇದ್ದಿದ್ದರಿಂದ ಏನೇನನ್ನೋ ಕಲ್ಪಿಸಿಕೊಂಡ ಪೊಲೀಸರು, ಅನುಮಾನಾಸ್ಪದ ನಡವಳಿಕೆ ಎಂಬ ನಿರ್ಧಾರಕ್ಕೆ ಬಂದು ಆತನನ್ನು ಬಂಧಿಸಿದ್ದಾರೆ! ಆದರೆ ಕೆಲವೇ ಹೊತ್ತುಗಳಲ್ಲಿ ಇದು ಟ್ರಾನ್ಸ್ ಲೇಟರ್ ಸಾಫ್ಟವೇರ್ ನ ಎಡವಟ್ಟು ಎಂಬುದು ತಿಳಿಯುತ್ತಿದ್ದಂತೆಯೇ ವ್ಯಕ್ತಿಯನ್ನು ಬಿಡುಗಡೆ ಮಾಡಲಾಗಿದೆ.
ಯಾವುದಕ್ಕೂ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಹುಷಾರಾಗಿರಿ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Palestinian builder named Halawim Halawi is arrested by Israeli police for posting Good Morning on social media website Facebook. A software translated his 'Good Morning' post as 'attack them'. This is the reason for his arrest!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ