ಭಾರತದ ಟಿವಿ ವಾಹಿನಿಗಳಿಗೆ ಪಾಕಿಸ್ತಾನದಲ್ಲಿ ನಿಷೇಧ!

Posted By:
Subscribe to Oneindia Kannada

ಇಸ್ಲಾಮಾಬಾದ್, ಅಕ್ಟೋಬರ್ 01: ಭಾರತ ಮೂಲದ ಟಿವಿ ವಾಹಿನಿಗಳು ನಿಮಯ ಉಲ್ಲಂಘಿಸಿ ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಆಕ್ಟೋಬರ್ 15ರಿಂದ ಎಲ್ಲಾ ವಾಹಿನಿಗಳ ಮೇಲೆ ನಿಷೇಧ ಹೇರಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಭಾರತದ ವಾಹಿನಿಗಳ ಮೇಲೆ ನಿಷೇಧ ಹೇರಲು ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಕ ಪ್ರಾಧಿಕಾರ(ಪಿಇಎಂಆರ್ ಎ) ನಿರ್ಧರಿಸಿದೆ ಎಂದು ಶನಿವಾರ ಪ್ರಕಟಿಸಲಾಗಿದೆ. ಅಕ್ಟೋಬರ್ 15ರ ನಂತರ ಭಾರತ ಮೂಲದ ಟಿವಿ ವಾಹಿನಿಗಳು ಆದೇಶವನ್ನು ಪಾಲಿಸದಿದ್ದರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಪಿಇಎಂ ಆರ್ ಎ ಎಚ್ಚರಿಸಿದೆ.[ಹಬ್ಬದ ಸಮಯ ದೇಶಾದ್ಯಂತ ಕಟ್ಟೆಚ್ಚರದಿಂದಿರುವಂತೆ ಸೂಚನೆ]

Pakistan to ban all Indian TV channels from Oct 15

ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿರುವ ಉದ್ವಿಗ್ನ ಪರಿಸ್ಥಿತಿಯನ್ನು ಮನಗಂಡು ಈ ನಿರ್ಣಯ ಕೈಗೊಳ್ಳಲಾಗಿದೆ. ಭಾರತೀಯ ಮೂಲದ ಟಿವಿ ವಾಹಿನಿಗಳಲ್ಲಿ ಅಕ್ರಮ, ಅಶ್ಲೀಲ, ಅಸಭ್ಯ ಹಾಗೂ ಪ್ರಚೋದನಕಾರಿ ಸಂಗತಿಗಳು ಪ್ರಸಾರವಾಗುತ್ತಿವೆ ಎಂದು ದೂರಲಾಗಿದೆ. ಈ ಮೂಲಕ ಡಿಟಿಎಚ್ ಮೂಲಕ ಪ್ರಸಾರವಾಗುವ ಎಲ್ಲಾ ಭಾರತೀಯ ವಾಹಿನಿಗಳು ಬಂದ್ ಆಗಲಿವೆ.

ಪಠಾಣ್ ಕೋಟ್ ಹಾಗೂ ಉರಿಯಲ್ಲಿನ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ಇತ್ತೀಚೆಗೆ ಗಡಿ ನಿಯಂತ್ರಣ ರೇಖೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಳಿ ಇದ್ದ ಏಳು ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿ, 38 ಮಂದಿಯನ್ನು ಕೊಂದು ಹಾಕಿದ್ದರು. ನಂತರದ ಬೆಳವಣಿಗೆಯಲ್ಲಿ ಪಂಜಾಬ್, ರಾಜಸ್ಥಾನ ಗಡಿಭಾಗದ ಗ್ರಾಮಸ್ಥರನ್ನು ಸ್ಥಳಾಂತರಿಸಲು ಭಾರತದ ಗೃಹ ಸಚಿವ ರಾಜನಾಥ್ ಸಿಂಗ್ ಸೂಚಿಸಿದ್ದರು. (ಎಎನ್ಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Pakistan Electronic Media Regulatory Authority (PEMRA) today announced its decision to ban all Indian TV channels in Pakistan from October 15 while terming their operation 'illegal'. The PEMRA has also warned that if TV channels and distribution networks failed to follow its directions, a strict action would be taken according to law after October 15.
Please Wait while comments are loading...