India Vs Pakistan: ಪಹಲ್ಗಾಮ್ ದಾಳಿ ಬಗ್ಗೆ ಅಂತಾರಾಷ್ಟ್ರೀಯ ತನಿಖೆಗೆ ಪಾಕ್ ಒತ್ತಾಯ
ಪಾಕಿಸ್ತಾನಕ್ಕೆ ಎಷ್ಟೇ ಹೇಳಿದರೂ ಬುದ್ಧಿ ಬರಲ್ಲ ಅನ್ನೋದು ಮತ್ತೆ ಮತ್ತೆ ಕನ್ಫರ್ಮ್ ಆಗುತ್ತಿದೆ. ಒಂದು ಕಡೆ ಪಾಕಿಸ್ತಾನದ ಮೂಲಕ ಬಂದಿರುವ ಉಗ್ರರೇ ಕಾಶ್ಮೀರದಲ್ಲಿ ದಾಳಿ ಮಾಡಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿದ್ದರೂ, ಇನ್ನೊಂದು ಕಡೆ ಪಾಕಿಸ್ತಾನ ಮಾತ್ರ ತನ್ನ ಕಿರಿಕ್ ಬಿಡ್ತಾನೇ ಇಲ್ಲ. ಹೀಗಿದ್ದಾಗಲೇ ಮತ್ತೊಂದು ಡಿಮ್ಯಾಂಡ್ ಇಟ್ಟಿರುವ ಪಾಕಿಸ್ತಾನ, ಭಾರತದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವನ್ನು ಎತ್ತಿ ಕಟ್ಟಲು ಮುಂದಾಗಿದೆ.
ಪಾಕಿಸ್ತಾನ ಉಗ್ರರ ಕಾರ್ಖಾನೆ ಆಗಿದ್ದು, ಪದೇ ಪದೇ ಅಲ್ಲಿಂದಲೇ ಉಗ್ರರು ನುಸುಳಿ ಬರ್ತಾ ಇದ್ದಾರೆ. ಈಗಲೂ ಪಾಕಿಸ್ತಾನದ ಮೂಲಕ ನುಗ್ಗಿ ಬಂದಿದ್ದ ಉಗ್ರರು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ದಾಳಿ ನಡೆಸಿ 26 ಜನರನ್ನ ಕೊಲೆ ಮಾಡಿದ್ದಾರೆ. ಪ್ರವಾಸಕ್ಕೆ ಎಂದು ಪಹಲ್ಗಾಮ್ ಪ್ರದೇಶಕ್ಕೆ ಹೋಗಿದ್ದ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಪ್ರಜೆಗಳು, ಕಾಶ್ಮೀರದ ಸುಂದರ ವಾತಾವರಣದಲ್ಲಿ ಸುತ್ತಾಡುವ ಸಮಯದಲ್ಲೇ ಪಾಪಿ ಉಗ್ರರು ದಿಢೀರ್ ಗನ್ ಹಿಡಿದು ನುಗ್ಗಿ ಅಮಾಯಕರ ಮೇಲೆ ಶೂಟ್ ಮಾಡಿ ಹತ್ಯೆಯನ್ನು ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಪಾಕಿಸ್ತಾನ ಹೊಸ ಕಿರಿಕ್ ತೆಗೆದಿದೆ.

ಅಂತಾರಾಷ್ಟ್ರೀಯ ಸಮುದಾಯಕ್ಕೆ ಪಾಕ್ ಕರೆ!
ಹೌದು, ಅಮೆರಿಕ, ಚೀನಾ, ರಷ್ಯಾ ರೀತಿಯ ದೊಡ್ಡ ದೊಡ್ಡ ದೇಶಗಳ ಸಾಲಿನಲ್ಲಿ ಭಾರತೀಯ ಸೇನೆ ಕೂಡ ಇದ್ದು, ಭಾರತದ ಸೇನೆ ಸಾಕಷ್ಟು ಶಕ್ತಿಶಾಲಿ ಆಗಿದೆ. ಹೀಗಿದ್ದಾಗ ಶತ್ರುಗಳ ನೆಲವನ್ನ ಕ್ಷಣಮಾತ್ರದಲ್ಲಿ ಉಡಾಯಿಸುವ ಶಕ್ತಿ ಭಾರತೀಯ ಸೇನೆಗೆ ಇದೆ. ಪಾಕಿಸ್ತಾನಕ್ಕೆ ಭರ್ಜರಿ 4 ಬಾರಿ ನಮ್ಮ ತಾಕತ್ ಏನು ಅನ್ನೋದನ್ನ ತೋರಿಸಿದೆ ಭಾರತ. ಇಷ್ಟಾದ್ರೂ ಪಾಕಿಸ್ತಾನ ಮಾತ್ರ ಚೇಂಜ್ ಆಗಲೇ ಇಲ್ಲ, ಉಗ್ರರ ಮೂಲಕ ಭಾರತಕ್ಕೆ ತೊಂದರೆ ಕೊಡುತ್ತಲೇ ಬಂದಿರುವ ಈ ಪಾಕಿಸ್ತಾನ ಮತ್ತೆ ಬಾಲ ಬಿಚ್ಚಿದೆ. ಹೀಗಿದ್ದಾಗಲೇ ಪಾಕಿಸ್ತಾನ ಸರ್ಕಾರದ ಕಡೆಯಿಂದ ಅಂತಾರಾಷ್ಟ್ರೀಯ ಸಮುದಾಯವನ್ನು ಕೆಣಕುವ ಕೆಲಸ ಆಗುತ್ತಿದೆ.
ಅಂದಹಾಗೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಇದೀಗ ಭಾರತದ ವಿರುದ್ಧ ಮತ್ತೆ ವಿಷ ಕಾರಿದ್ದು, ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬಂದು ಕಾಶ್ಮೀರ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ. ಅಂತಾರಾಷ್ಟ್ರೀಯ ತನಿಖೆಗೆ ಈಗ ಎಲ್ಲಾ ರೀತಿಯಲ್ಲೂ ಪಾಕಿಸ್ತಾನ ಸಹಕರಿಸಲು ಸಿದ್ಧ ಎಂದಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್, ಪರೋಕ್ಷವಾಗಿ ಭಾರತ & ಪಾಕ್ ವಿಚಾರದಲ್ಲಿ 3ನೇ ದೇಶವನ್ನು ಎಳೆದು ತರುತ್ತಿದ್ದಾರೆ. ಹೀಗಾಗಿ ಖವಾಜಾ ಮುಹಮ್ಮದ್ ಆಸಿಫ್ ಹೇಳಿಕೆ ಮತ್ತಷ್ಟು ಸಂಚಲನ ಸೃಷ್ಟಿ ಮಾಡಿದೆ.
ಗಡಿಯಲ್ಲಿ ಯುದ್ಧಕ್ಕೆ ಶುರುವಾಯ್ತಾ ಸಿದ್ಧತೆ?
ಭಾರತವು ಜಲ ಒಪ್ಪಂದ ಸ್ಥಗಿತಗೊಳಿಸಿದ್ದು ರಾಜಕೀಯ ಉದ್ದೇಶಗಳಿಗೆ ಅಂತಾ ಭಾರಿ ಗಂಭೀರ ಆರೋಪ ಕೂಡ ಮಾಡಿರುವ ಖವಾಜಾ ಮುಹಮ್ಮದ್ ಆಸಿಫ್, ಯಾವುದೇ ಪುರಾವೆಗಳಿಲ್ಲದೆ ಹಾಗೂ ಯಾವುದೇ ತನಿಖೆಯಿಲ್ಲದೆ ಪಾಕಿಸ್ತಾನವನ್ನ ಶಿಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಮತ್ತೊಂದು ಕಡೆ ಪಾಕಿಸ್ತಾನ & ಭಾರತದ ಗಡಿಯಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣ ಆಗಿದೆ. ಎರಡೂ ದೇಶಗಳ ಸೈನಿಕರ ನಡುವೆ ಪದೇ ಪದೇ ಗುಂಡಿನ ದಾಳಿ ನಡೆಯುತ್ತಿದ್ದು, ಹೀಗೆ ಮುಂದುವರಿದರೆ ಮುಂದೆ ಕಷ್ಟ ಕಷ್ಟ.












Click it and Unblock the Notifications