ಹಣ.. ಹಣ.. ಈ ಪದ ಕೇಳಿದ್ರೆ ನಿದ್ದೆಯಲ್ಲೂ ಎದ್ದು ಬಿಡುತ್ತೆ ಪಾಕ್: ಮತ್ತೆ ಐಎಂಎಫ್ ಕದ ತಟ್ಟಿದ ನೆರೆಯ ರಾಷ್ಟ್ರ
ಪಾಕಿಸ್ತಾನದ ಆರ್ಥಿಕ ಸ್ಥಿತಿ ಕಳಪೆಯಾಗಿದೆ ಮತ್ತು ಹಣದುಬ್ಬರ ತನ್ನ ಟ್ರ್ಯಾಕ್ ಬಿಟ್ಟು ಬಹು ದಿನಗಳೇ ಆಗಿವೆ. ಸದ್ಯ ನೆರೆಯ ರಾಷ್ಟ್ರ ಸಾಲದ ಸುಳಿಗೆ ಸಿಲುಕಿ ವಿಲಿ ವಿಲಿ ಒದ್ದಾಡುತ್ತಿದೆ. ಎಲ್ಲಿ ಸಾಧ್ಯವೋ ಅಲ್ಲಿಂದ ಹಣವನ್ನು ತರಲು ಪಾಕ್ ಎಲ್ಲಿಲ್ಲದ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಹಣ ಎಂಬ ಪದವನ್ನು ಕೆಳೆದರೆ, ಪಾಕಿಸ್ತನಾ ಸರ್ಕಾರದ ಕಿವಿ ನೆಟ್ಟಗಾಗುತ್ತದೆ. ಎಲ್ಲಿ ಸಾಲ ನೀಡುತ್ತಾರೆ ಎಂದು ದಿನವೂ ಒಂದೊಂದು ದೇಶಕ್ಕೆ ಅಲೆದಾಡುವುದೇ ಪಾಕ್ ಕೆಲಸವಾಗಿದೆ. ಇದರ ಮುಂದು ವರೆದ ಭಾಗವಾಗಿ ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಅವರು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಅವರನ್ನು ಭೇಟಿ ಮಾಡಿದ್ದಾರೆ.
ಶೆಹಬಾಜ್ ಷರೀಫ್ ಅವರು ಕ್ರಿಸ್ಟಲಿನಾ ಜಾರ್ಜೀವಾ ಅವರೊಂದಿಗೆ ತಮ್ಮ ದೇಶದಲ್ಲಿ ಆಗುತ್ತಿರುವ ಸಮಸ್ಯೆ ಹಾಗೂ ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರಲು ಹೊಸ ಸಾಲ ನೀಡಬಹುದಾದ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದಾರೆ. ಕ್ರಿಸ್ಟಲಿನಾ ಜಾರ್ಜೀವಾ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐಎಂಎಫ್ ಮುಖ್ಯಸ್ಥರ ಭೇಟಿ
ರಿಯಾದ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯ ಹಿನ್ನೆಲೆಯಲ್ಲಿ ಶೆಹಬಾಜ್ ಷರೀಫ್ ಐಎಂಎಫ್ ಮುಖ್ಯಸ್ಥರನ್ನು ಭೇಟಿಯಾದರು. ಕಳೆದ ವರ್ಷದಲ್ಲಿ ಗಳಿಸಿದ ಲಾಭಗಳನ್ನು ಕ್ರೋಢೀಕರಿಸಲು ಮತ್ತು ಆರ್ಥಿಕ ಬೆಳವಣಿಗೆಯ ಪಥವು ಧನಾತ್ಮಕವಾಗಿ ಉಳಿಯಲು ಎರಡೂ ಕಡೆಯವರು ಪಾಕಿಸ್ತಾನಕ್ಕಾಗಿ ಸಹಯಾ ಮಾಡುವಂತೆ ಕೇಳಿಕೊಳ್ಳಲಾಗಿದೆ ಎಂದು ಭಾನುವಾರದಂದು ಪಾಕಿಸ್ತಾನದ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ತಮ್ಮ ಸರ್ಕಾರ ಬದ್ಧರಾಗಿರುವುದಾಗಿ ಷರೀಫ್ ತಿಳಿಸಿದ್ದಾರೆ. ಹಣಕಾಸು ಸಚಿವ ಮೊಹಮ್ಮದ್ ಔರಂಗಜೇಬ್ ಅವರು ಜುಲೈ ಆರಂಭದ ವೇಳೆಗೆ ಇಸ್ಲಾಮಾಬಾದ್ ಹೊಸ ಕಾರ್ಯಕ್ರಮದ ಕುರಿತು ಸಿಬ್ಬಂದಿ ಮಟ್ಟದ ಸಭೆ ನಡೆಸಿ, ಹಲವು ಒಪ್ಪಂದವನ್ನು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಈ ನೆರವು ಸಿಕ್ಕರೆ ಅದು ಐಎಂಎಫ್‌ನಿಂದ 24ನೇ ಸಹಾಯವಾಗಲಿದೆ.
ಸಾಲದ ಸುಳಿಯಲ್ಲಿ ಪಾಕ್
ಪಾಕಿಸ್ತಾನದ ಜನರು ಪ್ರಸ್ತುತ ಹೆಚ್ಚಿನ ಹಣದುಬ್ಬರದಿಂದ ಬಳಲುತ್ತಿದ್ದಾರೆ ಮತ್ತು ಅವರ ದೈನಂದಿನ ಅಗತ್ಯಗಳಿಗಾಗಿಯೂ ಸಹ ಹೆಣಗಾಡಬೇಕಾಗಿದೆ. ಇಲ್ಲಿ ಸಿಲಿಂಡರ್ ನಿಂದ ಹಿಡಿದು ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಆಹಾರ ಪದಾರ್ಥಗಳಿಗೂ ಭಾರಿ ಬೆಲೆ ತೆರಬೇಕಾಗಿದೆ.

ಕಳೆದ ಹಲವು ವರ್ಷಗಳಿಂದ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಈ ಅವಧಿಯಲ್ಲಿ, ಪಾಕಿಸ್ತಾನವು IMF ಮತ್ತು ಅದರ ಅನೇಕ ಸ್ನೇಹ ದೇಶಗಳಿಂದ ಸಹಾಯವನ್ನು ಕೋರಿದೆ. ಆದಾಗ್ಯೂ, ಏತನ್ಮಧ್ಯೆ, ಪಾಕಿಸ್ತಾನದ ಪ್ರಧಾನಿ ಯುಎಇಯಿಂದ ಸಹಾಯಕ್ಕಾಗಿ ವಿನಂತಿಸಿದ್ದಾರೆ ಎಂದು ತಿಳಿದುಬಂದಿತ್ತು.
ಸದ್ಯ ಪಾಕ್ $350 ಶತಕೋಟಿ ಆರ್ಥಿಕತೆಯು ದೀರ್ಘಾವಧಿಯ ಪಾವತಿಗಳ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸುಮಾರು $24 ಶತಕೋಟಿ ಸಾಲ ಮತ್ತು ಬಡ್ಡಿಯನ್ನು ಮರುಪಾವತಿಸಬೇಕಾಗುತ್ತದೆ. ಪಾಕಿಸ್ತಾನದ ಹಣಕಾಸು ಸಚಿವಾಲಯವು ಜೂನ್‌ನಲ್ಲಿ ಕೊನೆಗೊಳ್ಳುವ ಹಣಕಾಸಿನ ವರ್ಷದಲ್ಲಿ ಆರ್ಥಿಕತೆಯು 2.6% ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಆದರೆ ವರ್ಷದ ಸರಾಸರಿ ಹಣದುಬ್ಬರವು ಹಿಂದಿನ ಹಣಕಾಸು ವರ್ಷಕ್ಕಿಂತ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications