ಪಾಕ್ ಬಣ್ಣ ಬಯಲು: ಲಾಡೆನ್ ನಮ್ಮ ಹೀರೋ ಎಂದ ಮುಷರಫ್

ಕರಾಚಿ, ಅ.28: ಪಾಕಿಸ್ತಾನದ ನಿಜ ಬಣ್ಣ ಬಯಲಾಗಿದೆ. ವಿಧ್ವಂಸಕ ಕೃತ್ಯಗಳಿಗೆ ಪಾಕಿಸ್ತಾನ ಪರೋಕ್ಷವಾಗಿ ನೆರವು ನೀಡುತ್ತಿರುವ ಬಗ್ಗೆ ಇರುವ ಸುದ್ದಿಗಳಿಗೆ ಈಗ ಮತ್ತೊಮ್ಮೆ ಜೀವ ಬಂದಿದೆ.ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಪರ್ವೆಜ್ ಮುಷರಫ್ ಅವರ ಹೇಳಿಕೆ ಎಲ್ಲರ ಹುಬ್ಬೇರಿಸಿದೆ.

ಪಾಕಿಸ್ತಾನ ಸರ್ಕಾರದ ಪ್ರಾಯೋಜಕತ್ವದಲ್ಲೇ ಭಯೋತ್ಪಾದಕರಿಗೆ ತರಬೇತಿ ನೀಡಿ, ಆರ್ಥಿಕ ನೆರವನ್ನು ಒದಗಿಸಲಾಗುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಪರ್ವೆಜ್ ಮುಷರಫ್ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

Pervez Musharraf

ಲಷ್ಕರ್ ಭಯೋತ್ಪಾದನೆ ಸಂಘಟನೆ ಪಾಲನೆ ಪೋಷಣೆ ಎಲ್ಲಕ್ಕೂ ಪಾಕಿಸ್ತಾನವೇ ಕಾರಣ ಎಂಬುದು ಜಗತ್ತಿಗೆ ಸಾರಲಾಗಿದೆ. ಉಗ್ರರನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಕಳ್ಳ ಯುದ್ಧವನ್ನು ಮುಂದುವರೆಸಲಾಗುತ್ತಿತ್ತು. ಕಾಶ್ಮೀರದಲ್ಲಿ ಶಾಂತಿ ಕದಡಲು ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು ಎಂದಿದ್ದಾರೆ.

ಲಾಡೆನ್ ನಮ್ಮ ಹೀರೋ: ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ನಮ್ಮ ಹೀರೋ. ನಮ್ಮಿಂದ ತರಬೇತಿ ಪಡೆದಿದ್ದ ಒಸಾಮಾ ಬಿನ್ ಲಾಡೆನ್ ಕೂಡ ನಿಜವಾದ ಹೀರೋ.ಲಷ್ಕರ್ ಇ ತೋಯ್ಬಾ ಹಾಗೂ ಹಕಾನಿ ಜಾಲದ ಜತೆಯೂ ಪಾಕ್ ಸೇನೆಗೆ ಪರ್ಕವಿತ್ತು. ಧಾರ್ವಿುಕ ಭಯೋತ್ಪಾದನೆಯಿಂದಲೇ ಅಫ್ಘಾನಿಸ್ತಾನದಿಂದ ರಷ್ಯನ್ನರನ್ನು ಓಡಿಸಲು ಸಾಧ್ಯವಾಯಿತು ಎಂದು ಮುಷರಫ್ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+