ಪಾಕಿಸ್ತಾನಿ ಮೂಲದ ಬಸ್ ಡ್ರೈವರ್ ಮಗ ಯು.ಕೆ. ಪ್ರಧಾನಿ ಹುದ್ದೆ ರೇಸ್ ನಲ್ಲಿ

ಸಾಜಿದ್ ಜಾವಿದ್ ಯು.ಕೆ. ಪ್ರಧಾನಿ ರೇಸಿನಲ್ಲಿ ಫೇವರಿಟ್ ಅಭ್ಯರ್ಥಿಗಳಲ್ಲಿ ಒಬ್ಬರು. 2009ರಲ್ಲಿ ಅವರು ರಾಜಕಾರಣಕ್ಕೆ ಪ್ರವೇಶಿಸಿದರು. ಅದಕ್ಕೂ ಮುನ್ನ ಅವರಿಗೆ ಅತ್ಯಾಕರ್ಷಕವಾದ ವೃತ್ತಿ ಬದುಕಿತ್ತು. ಆದರೆ ಆ ನಂತರ ಯು.ಕೆ.ನಲ್ಲಿ ಕನ್ಸರ್ವೆಟಿವ್ ಪಕ್ಷದಲ್ಲಿ ಅವರು ಬೆಳೆದ ಪರಿ ಅಗಾಧವಾದದ್ದು. ಸೋಮವಾರದಂದು ತಮ್ಮ ಪಕ್ಷದ ನಾಯಕ ಸ್ಥಾನಕ್ಕೆ ಹಾಗೂ ಸಾಜಿದ್ ಜಾವಿದ್ ರ ಅಭ್ಯರ್ಥಿತನವನ್ನು ಪ್ರಧಾನಿ ಹುದ್ದೆಗೆ ಘೋಷಿಸಲಾಯಿತು. ಇತರ ಎಂಟು ಅಭ್ಯರ್ಥಿಗಳು ಈ ರೇಸ್ ನಲ್ಲಿ ಇದ್ದಾರೆ.

ಪಾಕಿಸ್ತಾನ ಮೂಲದ ಬಸ್ ಡ್ರೈವರ್ ರ ಮಗನಾದ, ಸದ್ಯಕ್ಕೆ 49 ವರ್ಷದ ಜಾವಿದ್ ತೆರೆಸಾ ಮೇ ಅವರ ಸರಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿದ್ದರು. ಅದಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯದರ್ಶಿ ಹುದ್ದೆ ನಿಭಾಯಿಸಿದ್ದರು. ಆ ನಂತರ ವಾಣಿಜ್ಯ ಕಾರ್ಯದರ್ಶಿಯಾಗಿ ಭಾರತದ ಟಾಟಾ ಸಮೂಹದ ಕಂಪೆನಿ ಸೇರಿ ಇತರ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದರು.

ಟ್ವಿಟ್ಟರ್ ನಲ್ಲಿ ತಮ್ಮ ಪ್ರಧಾನಿ ಹುದ್ದೆ ಸ್ಪರ್ಧೆಯ ಬಗ್ಗೆ ಘೋಷಿಸಿದ ಜಾವಿದ್, ಯುರೋಪಿಯನ್ ಚುನಾವಣೆಯಲ್ಲಿ ಪಕ್ಷದ ಕೆಟ್ಟ ಪ್ರದರ್ಶನದ ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ನಂಬಿಕೆ ಮರು ಸ್ಥಾಪಿಸಬೇಕು ಅಂದರೆ ಬ್ರೆಕ್ಸಿಟ್ ನ ಭರವಸೆ ಈಡೇರಿಸಬೇಕು ಎಂದಿದ್ದಾರೆ.

Pakistan based driver son Sajid Javid in UK prime minister race

ನಮ್ಮ ಸಮಾಜ ಹಾಗೂ ಆರ್ಥಿಕತೆಯನ್ನು ಬಲಗೊಳಿಸಬೇಕು. ಆಗಷ್ಟೇ ಸಂಪದ್ಬರಿತ ರಾಷ್ಟ್ರ ಒದಗಿಸುವ ಅವಕಾಶದಿಂದ ಪ್ರತಿಯೊಬ್ಬರು ಅನುಕೂಲ ಪಡೆಯಲು ಸಾಧ್ಯ ಎಂದಿದ್ದಾರೆ. ಅಂದ ಹಾಗೆ ಚುನಾವಣೆಯಲ್ಲಿ ಗೆಲ್ಲುವ ಫೇವರಿಟ್ ಅಂತ ಇರುವವರು ಬೋರಿಸ್ ಜಾನ್ಸನ್. ಅವರನ್ನು ಬಿಟ್ಟರೆ ಜಾವಿದ್ ಹಾಗೂ ಜಾನ್ಸನ್ ಇದ್ದಾರೆ. ಇವರನ್ನು ಹೊರತುಪಡಿಸಿ ಇತರ ಏಳು ಆಕಾಂಕ್ಷಿಗಳು ಇದ್ದಾರೆ. ಎಲ್ಲರೂ ಸದ್ಯಕ್ಕೆ ಸಂಪುಟ ಸಚಿವರಾಗಿದ್ದಾರೆ.

ಆಕಾಂಕ್ಷಿಗಳು ತಮ್ಮ ಅಭ್ಯರ್ಥಿತನವನ್ನು ಅಧಿಕೃತವಾಗಿ ಘೋಷಿಸಲು ಜೂನ್ ಹತ್ತನೇ ತಾರೀಕಿನ ತನಕ ಅವಕಾಶ ಇದೆ. ಮೊದಲ ಸುತ್ತಿನಲ್ಲಿ ಮುನ್ನೂರಾ ಹದಿಮೂರು ಕನ್ಸರ್ವೆಟಿವ್ ಸಂಸದರು ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಅತಿ ಹೆಚ್ಚು ಮತ ಪಡೆದ ಇಬ್ಬರು ಕಣದಲ್ಲಿ ಉಳಿಯುತ್ತಾರೆ. ಅ ನಂತರ ಇಬ್ಬರ ಪೈಕಿ ಒಬ್ಬರನ್ನು ಒಂದೂಕಾಲು ಲಕ್ಷ ಪಕ್ಷದ ಸದಸ್ಯರ ಮತದಾನದಲ್ಲಿ ಆಯ್ಕೆ ಆಗುತ್ತಾರೆ.

ಈ ಪ್ರಕ್ರಿಯೆಯು ಮುಂದಿನ ಪ್ರಧಾನಿ ಆಯ್ಕೆಯಾಗುವ ಜುಲೈ ತನಕ ನಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+