ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರಿಗೆ ಆರ್ಥಿಕ ನೆರವು : ಜನವರಿ 18ರೊಳಗೆ ಮಸೂದ್‌ ಅಜರ್‌ ಬಂಧಿಸುವಂತೆ ಪಾಕ್‌ ಕೋರ್ಟ್ ಆದೇಶ

|
Google Oneindia Kannada News

ಇಸ್ಲಮಾಬಾದ್, ಜನವರಿ 09: ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 18 ರೊಳಗೆ ನಿಷೇಧಿತ ಜೈಶ್-ಎ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಮಸೂದ್ ಅಜರ್ ಅವರನ್ನು ಬಂಧಿಸುವಂತೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಪಂಜಾಬ್ ಪೊಲೀಸ್ ಭಯೋತ್ಪಾದನಾ ಇಲಾಖೆಗೆ ಸೂಚಿಸಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಮಸೂದ್‌ ಅಜರ್‌ ನನ್ನು ಬಂಧಿಸಲು ಪೊಲೀಸರು ಆದೇಶಿಸಿದ್ದಾರೆ. ಗುಜ್ರಾನ್‌ವಾಲಾ ನಗರದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ(ಎಟಿಸಿ) ತಕ್ಷಣವೇ ಮಸೂದ್‌ ಅಜರ್‌ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಕಳೆದ ಗುರುವಾರ ಬಂಧನ ವಾರಂಟ್ ಜಾರಿ ಮಾಡಿತ್ತು. ಆದರೆ ಇದುವರೆಗೂ ಬಂಧಿಸಿದ ಪೊಲೀಸರಿಗೆ ಈಗ ಜನವರಿ 18ರೊಳಗೆ ಬಂಧಿಸುವಂತೆ ನ್ಯಾಯಾಧೀಶ ನತಾಶಾ ನಸೀಮ್ ಸುಪ್ರಾ ಅವರು ಪಂಜಾಬ್ ಭಯೋತ್ಪಾದನೆ ನಿಗ್ರಹ ಪೊಲೀಸರಿಗೆ ಸೂಚಿಸಿದ್ದಾರೆ.

Masood azar

ಒಂದು ವೇಳೆ ಮಸೂದ್ ಅಜರ್ ನನ್ನು ಬಂಧಿಸಲು ವಿಫಲವಾದರೆ ನ್ಯಾಯಾಲಯವು ಆತನನ್ನು ಘೋಷಿತ ಅಪರಾಧಿ ಎಂದು ಘೋಷಿಸುತ್ತದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಜೆಇಎಂ ಮುಖ್ಯಸ್ಥರು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಮತ್ತು ಜಿಹಾದಿ ಪುಸ್ತಕಗಳ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಟಿಡಿ ನ್ಯಾಯಾಧೀಶರಿಗೆ ಮಾಹಿತಿ ನೀಡಿದೆ.

English summary
An anti-terrorism court in Pakistan has asked the Counter Terrorism Department of Punjab Police
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X