ಅಣ್ವಸ್ತ್ರ ಬಳಕೆ: ಪಾಕ್ ರಕ್ಷಣಾ ಸಚಿವನಿಂದ ಎರಡನೇ ಬಾರಿ ಬೆದರಿಕೆ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 29: ಉರಿ ಮೇಲಿನ ಉಗ್ರರ ದಾಳಿ ನಂತರ ಭಾರತ-ಪಾಕಿಸ್ತಾನದ ಮಧ್ಯೆ ಪರಿಸ್ಥಿತಿ ಬಿಗಡಾಯಿಸಿದ್ದು, ಇಂಥ ಸನ್ನಿವೇಶದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಮುಹಮ್ಮದ್ ಆಸೀಫ್, ಭಾರತದ ವಿರುದ್ಧ 'ಅಣ್ವಸ್ತ್ರ ಬಳಕೆ' ಬಗ್ಗೆ ಎರಡನೇ ಬಾರಿಗೆ ಮಾತನಾಡಿ, ಕೆಣಕುವ ಯತ್ನ ನಡೆಸಿದ್ದಾರೆ.

ಅಣ್ವಸ್ತ್ರ ಬಳಕೆ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಪಾಕಿಸ್ತಾನದ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಣ್ವಸ್ತ್ರವನ್ನು ಅಭಿವೃದ್ಧಿ ಪಡಿಸಿರುವುದು ನಮ್ಮ ರಕ್ಷಣೆಗಾಗಿ. ಅವುಗಳನ್ನು ಶೋ ಪೀಸ್ ಗಳಾಗಿ ಇಡುವುದಕ್ಕಲ್ಲ. ನಮ್ಮ ಸುರಕ್ಷತೆಗೆ ಧಕ್ಕೆ ಬಂದರೆ ಬಳಕೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದಿದ್ದಾರೆ.[ದೇಶದ ಪ್ರಮುಖ ನಗರಗಳಲ್ಲಿ ಪಾಕಿಸ್ತಾನದಿಂದ ಉಗ್ರರ ದಾಳಿ ಸಾಧ್ಯತೆ!]

Pak defence minister has threatened to use nuclear weapon

ಉರಿ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿದ ಮರುದಿನ ಕೂಡ ಇಂಥದ್ದೇ ಹೇಳಿಕೆ ನೀಡಿದ್ದ ಆಸಿಫ್, ಪಾಕಿಸ್ತಾನದ ರಕ್ಷಣೆಗೆ ಧಕ್ಕೆ ಬಂದರೆ ನಾವು ಅಣ್ವಸ್ತ್ರ ಬಳಸುವುದಕ್ಕೆ ಹಿಂಜರಿಯೋದಿಲ್ಲ. ನಮ್ಮ ಅಣು ಶಕ್ತಿ ಭಾರತಕ್ಕಿಂತ ಉತ್ತಮವಾಗಿದೆ ಎಂದು ಹೇಳಿದ್ದರು. ಉರಿ ದಾಳಿ ನಂತರ ಪಾಕಿಸ್ತಾನವನ್ನು ಏಕಾಂಗಿ ಮಾಡಲು ಭಾರತ ಪ್ರಯತ್ನವನ್ನು ಆರಂಭಿಸಿದೆ. ಅದರೆ ಉರಿ ಉಗ್ರರ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ ಎಂದೇ ಹೇಳುತ್ತಲೇ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nuclear weapons have been developed for our protection. We haven't kept the devices that we have just as showpieces. Pakistani Defence Minister Khawaja Muhammad Asif said in an interview to Pakistani TV Channel
Please Wait while comments are loading...