ಒಸಾಮಾ ಬಿನ್ ಲಾಡೆನ್ 'ಸೆಕ್ಸ್ ಫೈಲ್ಸ್' ಬಚ್ಚಿಟ್ಟ ಅಮೆರಿಕ
ವಾಷಿಂಗ್ಟನ್, ಮೇ.21: ಅಲ್ ಖೈದಾ ಒಸಾಮಾ ಬಿನ್ ಲಾಡೆನ್ ಗೆ ಸಂಬಂಧಿಸಿದ ನೂರಾರು ಕಡತಗಳನ್ನು ಒಟ್ಟು ಮಾಡಿಕೊಂಡು ಅಮೆರಿಕ ಒಂದೊಂದಾಗಿ ಹೊರಕ್ಕೆ ಬಿಡುತ್ತಿದೆ. ಅದರೆ, ಪೋರ್ನೊಗ್ರಾಫಿ ನೋಡುವ ಹುಚ್ಚು ಹೊಂದಿದ್ದ ಲಾಡೆನ್ ಸಂಗ್ರಹದಲ್ಲಿದ್ದ ಚಿತ್ರಗಳು, ವಿಡಿಯೋಗಳನ್ನು ಸದ್ಯಕ್ಕೆ ಪ್ರಕಟಿಸದಿರಲು ಸಿಐಎ ನಿರ್ಧರಿಸಿದೆ. [ಅವರು ವಯಾಗ್ರ ಬಳಸುತ್ತಿದ್ದರು ಎಂದಳು ಲಾಡೆನ್ ಪತ್ನಿ]
ಅಬೊಟ್ಟಾಬಾದ್ ನಲ್ಲಿ ದಾಳಿ ನಡೆದಾಗ ಲಾಡೆನ್ ಇದ್ದ ತಾಣದಲ್ಲಿ ಅನೇಕ ಅಶ್ಲೀಲ ಚಿತ್ರಗಳು, ವಿಡಿಯೋಗಳು ಪತ್ತೆಯಾಗಿತ್ತು. ಲಾಡೆನ್ ಬಳಸುತ್ತಿದ್ದ ಕಂಪ್ಯೂಟರ್ ನಲ್ಲಿದ್ದ ಈ ಸರಕನ್ನು ಜೋಪಾನವಾಗಿ ಅಮೆರಿಕ ಸೇನೆ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅದರೆ, ಇದನ್ನೆಲ್ಲ ಲಾಡೆನ್ ನೋಡುತ್ತಿದ್ನಾ? ಅಥವಾ ಆತನ ಬಲಗೈ ಬಂಟರಿಗೆ ಸೇರಿದ ಸರಕ್ಕಾಗಿತ್ತಾ? ಎಂಬುದು ಮಾತ್ರ ಇನ್ನೂ ಗುಟ್ಟಾಗಿದೆ. [ಸನ್ನಿ ಲಿಯೋನ್ ಹುಚ್ಚಿನಲ್ಲಿ ಮುಳುಗಿದ್ದ ಜಗತ್ತಿನ ಅತ್ಯುಗ್ರ]

ಒಸಾಮಾ ಬಿನ್ ಲಾಡೆನ್ ಗೆ ಸೇರಿದ ಸುಮಾರು 100೦ ಫೈಲ್ಸ್ [ಇಲ್ಲಿದೆ ಓದಿ] ಗಳನ್ನು ಯುಎಸ್ ಆರ್ಮಿ ವಶಪಡಿಸಿಕೊಂಡು ಆತನನ್ನು ಹತ್ಯೆಗೈಯ್ದಿತ್ತು. ಈ ಪೈಕಿ 100 ಫೈಲ್ಸ್ ಗಳನ್ನು ವರ್ಗೀಕರಿಸಲಾಗಿದೆ. ಮಿಕ್ಕ ಫೈಲ್ಸ್ ಪೈಕಿ ಇರುವ ಅಶ್ಲೀಲ ಚಿತ್ರ, ವಿಡಿಯೋ ಸಂಗ್ರಹವನ್ನು ಸದ್ಯಕ್ಕೆ ವರ್ಗೀಕರಿಸುವುದಿಲ್ಲ ಎಂದು ಯುಎಸ್ಎ ಹೇಳಿದೆ. [ಗಡಾಫಿ ಯುಗ ಅಂತ್ಯ, ಸೆಕ್ಸ್ ಸೀಕ್ರೇಟ್ಸ್ ಜೀವಂತ]ಅಮೆರಿಕ ವಿರುದ್ಧ ಕೊನೆಯುಸಿರಿರುವವರೆಗೂ ಹೋರಾಟ ಮಾಡಲು ಲಾಡೆನ್ ಹೇಗೆ ಯೋಜನೆ ರೂಪಿಸಿದ್ದ ಎಂಬುದು ಈ ಫೈಲ್ಸ್ ಮೂಲಕ ತಿಳಿದು ಬಂದಿದೆ.












Click it and Unblock the Notifications