Get Updates
Get notified of breaking news, exclusive insights, and must-see stories!

Oh My God: ಅಮೆರಿಕಾದ ಈ ಮಹಿಳೆಗೆ ಎರಡು ಗರ್ಭಾಶಯ- ಎರಡರಲ್ಲೂ ಒಂದೊಂದು ಮಗು ಬೇಕಂತೆ!

ಅಮೆರಿಕಾದಲ್ಲಿ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಮಹಿಳೆಗೆ ಎರಡು ಗರ್ಭಾಶಯವಿದೆ. ಅವರು ಎರಡರಲ್ಲೂ ಒಂದೊಂದು ಮಗು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಸಾಮಾನ್ಯವಾಗಿ ಒಬ್ಬ ಮಹಿಳೆಗೆ ಒಂದು ಗರ್ಭಾಶಯವಿರುತ್ತದೆ. ಆದರೆ ಅಮೆರಿಕಾದ ಈ ಮಹಿಳೆಗೆ ಎರಡು ಗರ್ಭಾಶವಿದ್ದು ಆಕೆ ಎರಡರಲ್ಲೂ ಒಂದೊಂದು ಮಗುವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

OMG: This American Woman Has Two Wombs: Couple Expecting 2 Kids!

ಅಲಬಾಮಾದ 32 ವರ್ಷದ ಕೆಲ್ಸಿ ಹ್ಯಾಚರ್ ಅವರು ಎರಡು ಗರ್ಭಾಶಯಗಳನ್ನು ಹೊಂದಿದ ಮಹಿಳೆ. ಪತಿ ಕ್ಯಾಲೆಬ್ ಹ್ಯಾಚರ್ ಹಾಗೂ ಪತ್ನಿ ಕೆಲ್ಸಿ ಹ್ಯಾಚರ್ ದಂಪತಿಗೆ ಈಗಾಗಲೇ ಮೂರು ಮಕ್ಕಳಿದ್ದಾರೆ. ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿರುವ ಕೆಲ್ಸಿ ಅವರಿಗೆ ಎರಡು ಗರ್ಭಾಶವಿದ್ದು ಸದ್ಯ ಎರಡರಲ್ಲೂ ಒಂದೊಂದು ಭ್ರೂಣಗಳು ಇವೆ. ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಸ್ವತ: ಹಂಚಿಕೊಂಡಿದ್ದಾರೆ.

ಪ್ರತಿ ಗರ್ಭಾಶಯವು ಮುಲ್ಲೆರಿಯನ್ ನಾಳಗಳೆಂದು ಕರೆಯಲ್ಪಡುವ ಎರಡು ಸಣ್ಣ ಕೊಳವೆಗಳಾಗಿ ಪ್ರಾರಂಭವಾಗುತ್ತದೆ. ಅವು ಅಭಿವೃದ್ಧಿಗೊಳ್ಳಲು ಪ್ರಾರಂಭಿಸಿದಾಗ ಅವು ಒಂದು ಗರ್ಭಾಶಯವನ್ನು ರೂಪಿಸಲು ಒಟ್ಟಿಗೆ ಬೆಸೆಯುತ್ತವೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಟ್ಯೂಬ್ಗಳು ಪ್ರತ್ಯೇಕವಾಗಿ ಉಳಿದು ಎರಡು ಗರ್ಭಾಶಯವಾಗುತ್ತವೆ. ಕೆಲವೊಮ್ಮೆ ಎರಡೂ ಗರ್ಭಾಶಯಗಳಿಗೆ ಒಂದೇ ಗರ್ಭಾಶಯವಿರುತ್ತದೆ, ಕೆಲವೊಮ್ಮೆ ಪ್ರತಿ ಗರ್ಭಾಶಯವು ಒಂದೊಂದು ಗರ್ಭಾಶಯವನ್ನು ಹೊಂದಿರುತ್ತದೆ. ಹೀಗೆ ಕೆಲ್ಸಿ ಹ್ಯಾಚರ್ ಎರಡು ಗರ್ಭಾಶಯವನ್ನು ಹೊಂದಿದ ಅಪರೂಪದ ಮಹಿಳೆಯಾಗಿದ್ದಾರೆ.

ಅಪರೂಪದ ಸ್ಥಿತಿಯು ಸುಮಾರು 0.3 ಪ್ರತಿಶತದಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾವಿಸಲಾಗಿದೆ. ಅಸಲಿಗೆ ಕೆಲ್ಸಿ ಹ್ಯಾಚರ್ ಅವರಿಗೆ 17ನೇ ವಯಸ್ಸು ಇರುವಾಗ ತಮಗೆ ಎರಡು ಗರ್ಭಾಶಯ ಇರುವುದು ತಿಳಿದಿದೆ. ಮೇ ತಿಂಗಳಲ್ಲಿ ಕೆಲ್ಸಿ ಹ್ಯಾಚರ್ ಅವರು ಎರಡುವರೆ ತಿಂಗಳ ಗರ್ಭಿಣಿಯಾಗಿದ್ದರು. ಈ ಸಮಯದಲ್ಲಿ ಅವರು ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗ ಅವರಿಗೆ ಎರಡು ಗರ್ಭಾಶಯದಲ್ಲಿ ಎರಡು ಭ್ರೂಣ ಇರುವುದು ತಿಳಿಯಿತು.

ಇದನ್ನು ತಿಳಿದ ಕೆಲ್ಸಿ ಹ್ಯಾಚರ್ ಅಕ್ಷರಶ: ಗಾಬರಿಯಾಗಿದ್ದರು. ಅಲ್ಟ್ರಾಸೌಂಡ್ ಸಮಯದಲ್ಲಿ ಎರಡು ಭ್ರೂಣಗಳು ಆರೋಗ್ಯವಾಗಿರುವುದು ತಿಳಿದು ನಮಗೆ ಸಂತೋಷವಾಯಿತು ಎಂದು ಅವರು Instagram ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಗರ್ಭಾಶಯದ ಪ್ರತಿಯೊಂದು ಬದಿಯಲ್ಲಿಯೂ ಭ್ರೂಣ ಆರೋಗ್ಯವಾಗಿದೆ. ಪ್ರತಿ ಗರ್ಭಾಶದಿಂದ ಪ್ರತ್ಯೇಕವಾಗಿ ಮಗು ಜನಿಸುತ್ತದೆ ಎಂದು ಬರ್ಮಿಂಗ್‌ಹ್ಯಾಮ್‌ನ ಮಹಿಳಾ ಮತ್ತು ಶಿಶುಗಳ ಕೇಂದ್ರದಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಹ್ಯಾಚರ್‌ಗಾಗಿ ಕಾಳಜಿ ವಹಿಸುತ್ತಿರುವ ಸ್ತ್ರೀರೋಗತಜ್ಞರಾದ ಹಾಗೂ ಪ್ರಸೂತಿ ತಜ್ಞ ಶ್ವೇತಾ ಪಟೇಲ್ ವಿವರಿಸಿದ್ದಾರೆ.

"ಎರಡು ಗರ್ಭಾಶಯವನ್ನು ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಕೆಲ್ಸಿ ಹ್ಯಾಚರ್ ಅವರಿಗೆ ಹಿಂದಿನ ಎಲ್ಲಾ ಮೂರು ಮಕ್ಕಳು ಪೂರ್ಣಾವಧಿಯಲ್ಲಿ ಆರೋಗ್ಯಕರವಾಗಿ ಜನಿಸಿವೆ. ಈಗಲೂ ಅವರಲ್ಲಿರುವ ಎರಡು ಗರ್ಭಾಶದಲ್ಲಿರುವ ಎರಡು ಮಕ್ಕಳು ಆರೋಗ್ಯವಾಗಿ ಯಾವುದೇ ಸಮಸ್ಯೆ ಇಲ್ಲದೆ ಜನಿಸುತ್ತವೆ ಎನ್ನುವ ನಂಬಿಕೆ ಇದೆ'' ಎಂದು ಹ್ಯಾಚರ್ ಗೆ ಚಿಕಿತ್ಸೆ ನೀಡುವ ವೈದ್ಯರು ಹೇಳುತ್ತಾರೆ.

ಈ ಬಗ್ಗೆ ಕ್ಯಾಲೆಬ್ ಹ್ಯಾಚರ್, ನಾನು ಪ್ರತಿ ವೈದ್ಯರನ್ನು ಭೇಟಿಯಾದಗಲೆಲ್ಲ ಅವರು ನನಗೆ ಹೇಳುವುದು ಇಷ್ಟೇ-'ನಾವು ಹಿಂದೆಂದೂ ಈ ರೀತಿಯ ಕೇಸ್ ನೋಡಿಲ್ಲ, ಇದು ಒಟ್ಟಾರೆಯಾಗಿ ನಮಗೆ ಹೊಸ ಪ್ರಕರಣವಾಗಿದೆ. ಆದರೆ ಈ ಪರಿಸ್ಥಿತಿಗೆ ನಾನು ಅತ್ಯುತ್ತಮ ತಂಡವನ್ನು ಹೊಂದಿದ್ದೇವೆ. ಏನಾಗುತ್ತಿದೆ ಎಂಬುದಕ್ಕೆ ನಾವು ಕುತೂಹಲಕಾರಿಯಾಗಿದ್ದೇವೆ' ಎಂದು ಅಲಬಾಮಾದ ಅತ್ಯುತ್ತಮ ಆಸ್ಪತ್ರೆಯ ವೈದ್ಯರು ಹೇಳುತ್ತಾರೆಂದು ಕ್ಯಾಲೆಬ್ ಹೇಳುತ್ತಾರೆ.

ಎರಡೂ ಗರ್ಭಾಶಯಗಳಲ್ಲಿನ ಗರ್ಭಧಾರಣೆಗಳು ತುಂಬಾ ಅಪರೂಪ. 50 ಮಿಲಿಯನ್‌ಗೆ 1 ಇದು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. 2019 ರಲ್ಲಿ ಬಾಂಗ್ಲಾದೇಶದಲ್ಲಿ ಇಂಥಹ ಘಟನೆ ನಡೆದಿತ್ತು. ಆಗ 20 ವರ್ಷ ವಯಸ್ಸಿನ ಆರಿಫಾ ಸುಲ್ತಾನಾ 26 ದಿನಗಳ ಅಂತರದಲ್ಲಿ ಆರೋಗ್ಯಕರ ಅವಳಿಗಳಿಗೆ ಜನ್ಮ ನೀಡಿದರು.

ಅಲ್ಲಿಗೂ ಕೆಲ್ಸಿ ಹ್ಯಾಚರ್ ಕ್ರಿಸ್‌ಮಸ್‌ನ ನಿಗದಿತ ದಿನಾಂಕದಂದು ತಮ್ಮ ಎರಡು ಮಕ್ಕಳಿಗೂ ಜನ್ಮ ನೀಡಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ವೇಳೆ ಕೆಲ್ಸಿ ಯಾವುದೇ ಸಮಸ್ಯೆಗಳಿಲ್ಲದೆ ಎರಡು ಮಕ್ಕಳಿಗೆ ಜನ್ಮ ನೀಡಿದರೆ ಅಪರೂಪದ ಘಟನೆಯಲ್ಲಿ ಕೆಲ್ಸಿ ಹೆಸರು ಸೇರಿಕೊಳ್ಳಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+