Jensen Huang: ಎನ್ವಿಡಿಯಾ ಕಂಪನಿ ವಿವಾದ! 33 ವರ್ಷದ ಬಳಿಕ ಸಿಇಒ ಹುದ್ದೆಗೆ ಜೆನ್ಸನ್ ಹುವಾಂಗ್ ದಿಢೀರ್ ರಾಜೀನಾಮೆ!

ಜಾಗತಿಕ ಬಹುದೊಡ್ಡ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ 'ಎನ್ವಿಡಿಯಾ' ದೊಡ್ಡ ವಿವಾದಕ್ಕೆ ಸಿಲುಕಿದೆ. ಇದೆಲ್ಲ ವಿವಾದಗಳು ಕಂಪನಿ ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಡಾಚಾರಿಣಿ ಜತೆಗಿನ ಸಂಬಂಧ, ವಿಚ್ಛೇದನ ಸುದ್ದಿ ಹರಿದಾಡಿದ ಬೆನ್ನಲ್ಲೆ ಅವರು ತಮ್ಮ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 33 ವರ್ಷಗಳಿಂದ ಕಂಪನಿಗಾಗಿ ಶ್ರಮಿಸಿದ್ದ ಅವರು ಇದೀಗ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ವರದಿ ಆಗಿದೆ.

ಸಿಇಒ ಹುದ್ದೆಗೇರಿ ಕೃತಕ ಬುದ್ಧಿಮತ್ತೆಯ (AI) ಉತ್ಕರ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದರು. 4 ಟ್ರಿಲಿಯನ್ ಕಂಪನಿಯಾಗಿ ಬೆಳೆಸುವಲ್ಲಿ ಶ್ರಮಿಸಿದ ಅವರು ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತೆರವಾದ ಅವರ ಸ್ಥಾನಕ್ಕೆ ಸಿಎಫ್‌ಒ ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ ಸಿಇಒ ಎಂದು ಕಂಪನಿ ಹೆಸರಿಸಿದೆ.

Nvidia CEO Jensen Huang Resined

63 ವರ್ಷ ವಯಸ್ಸಿನ ಜೆನ್ಸೆನ್ ಹುವಾಂಗ್ ಅವರು ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಎನ್ವಿಡಿಯಾ ಕಂಪನಿ ಮುನ್ನಡೆಸಿದ್ದಾರೆ. ಅವರ ಅಧಿಕಾರವಧಿಯಲ್ಲಿ ಗೇಮಿಂಗ್ ಗ್ರಾಫಿಕ್ಸ್ ಕಾರ್ಡ್ ತಯಾರಿಸುವ ಸಾಮಾನ್ಯ ಕಂಪನಿ ಇದೀಗ ವಿಶ್ವದ ಪ್ರಮುಖ ಕೃತಕ ಬುದ್ಧಿಮತ್ತೆ (AI) ಚಿಪ್ ತಯಾರಕ ಕಂಪನಿಯಾಗಿ ಉತ್ತುಂಗಕ್ಕೇರಿದೆ. ನಾಲ್ಕು ಟ್ರಿಲಿಯನ್ ಆರ್ಥಿಕತೆಯ ಕಂಪನಿಯಾಗಲು ಶ್ರಮಿಸಿದ್ದಾರೆ. ಇತ್ತೀಚೆಗೆ ಅವರು ಮಹಿಳೆಯೊಂದಿಗಿನ ಪ್ರಣಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನಾಟಕೀಯ ಬೆಳವಣಿಗೆ ನಡೆದು, ಕೊನೆಗೆ ಅವರು ತಮ್ಮ ಹುದ್ದೆ ತ್ಯೆಜಿಸುವಂತಾಗಿದೆ.

ಹಲವು ಆರೋಪ ಎದುರಿಸಿದ ಬಳಿಕ ರಾಜೀನಾಮೆ ನಿರ್ಧಾರ

ವಿಶ್ವದ ಪ್ರಮುಖ AI ಚಿಪ್ ತಯಾರಿಕಾ ಕಂಪನಿ ಎನ್ವಿಡಿಯಾ ಸಹಸಂಸ್ಥಾಪಕ ಮತ್ತು ಸಿಇಓ ಚೀನಾದ ಗೂಢಚಾರ ಮಹಿಳೆ ಜತೆ ಸಂಬಂಧದಲ್ಲಿದ್ದಾಗ ಕಂಪನಿಯ ಎಲ್ಲ ಗುಟ್ಟು, ಪ್ರಮುಖ ಮಾಹಿತಿ ಬಿಟ್ಟು ಕೊಟ್ಟಿದ್ದಾರೆ ಎಂಬ ಆರೋಪ ಎದುರಿಸಿದರು. ಮಹಿಳೆ ತಬ್ಬಿಕೊಂಡು ನಿಂತ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಶ್ವದಾದ್ಯಂತ ಎನ್ವಿಡಿಯಾ ಮತ್ತು ಸಿಇಓ ಕುರಿತು ಸಾಕಷ್ಟು ವಿಚಾರಗಳು ಮುನ್ನೇಲೆ ಬಂದವು. ಮಹಿಳೆ ನಂಟಿನಿಂದಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ, ಅದೇ ಪ್ರಮುಖ ಕಾರಣ ಎನ್ನಲಾಗಿದೆ.

ತಮ್ಮ ಹೆಂಡತಿಗೆ ವಿಶ್ವಾಸದ್ರೋಹ ಬಗೆದಿದ್ದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ. ಇದರ ಹೊರತು ಚೀನಾದ ಕಂಪನಿಯಲ್ಲಿ ಕೆಲಸ ಮಾಡಿದ ಉದ್ಯಮಿ ಆಲಿಸ್ ಹುವಾಂಗ್ ಮತ್ತು ಮೆಗಾಸ್ಪೀಡ್ ಎಂಬ ಎನ್ವಿಡಿಯಾ ಗ್ರಾಹಕರೊಂದಿಗಿನ ಸಂಬಂಧ ಕುರಿತು ಹುವಾಂಗ್ ಹೆಚ್ಚಿನ ಮಾಹಿತಿ ನೀಡಲಿಲ್ಲ. ಗೂಢಾಚಾರಿಣಿ ಜೊತೆಗೆ ಅಷ್ಟೇ ಅಲ್ಲದೇ, ಚಿಪ್‌ಮೇಕರ್‌ನಲ್ಲಿ ಆರೋಗ್ಯ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗೂ ಸಂಬಂಧ ಹೊಂದಿದ್ದಾರೆ ಎಂದು ದಿ ಟೈಮ್ಸ್ ಮತ್ತು ಇತರ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.

ಆರೋಪ ನಿರಾಕರಿಸಿದ ಸಿಇಓ ಹುವಾಂಗ್

ಕಂಪನಿ ಮಾಹಿತಿ ಸೋರಿಕೆಗೆ ಜೆನ್ಸೆನ್ ಹುವಾಂಗ್ ಕಾರಣವಾಗಿದ್ದಾರೆ ಎಂಬುದರ ಜೊತೆಗೆ ಅವರ ವೈಯಕ್ತಿಕ ಬದುಕಿನ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿವೆ. ಆದರೆ ತಾವು ತಮ್ಮ ಸಂಬಂಧದೊಂದಿಗೆ ಕಂಪನಿಯ ವೈಯಕ್ತಿ ಮಾಹಿತಿ ಹಂಚಿಕೊಂಡಿರುವ ಆರೋಪ, ರಾಷ್ಟ್ರೀಯ ಭದ್ರತೆ ಅಥವಾ ಎನ್ವಿಡಿಯಾ ರಹಸ್ಯಗಳನ್ನು ರಾಜಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. ಆಕೆಯೊಂದಿಗೆ ವೈಯಕ್ತಿಕ ಸಂಬಂಧ ಹೊಂದಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.

ಇನ್ನು ಇದೇ ಸಿಇಒ ಜೊತೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಬಂಧ ಕುರಿತು ಒಂದಷ್ಟು ವಿಷಯಗಳು ಮುನ್ನೆಲೆ ಬರುತ್ತಿವೆ. ಓಪನ್-ಸೋರ್ಸ್ ಎಐಗೆ ಪ್ರವೇಶವನ್ನು ಸಂರಕ್ಷಿಸುವುದು, ಚೀನಾಕ್ಕೆ ಚಿಪ್ ರಫ್ತುಗಳನ್ನು ಅನುಮತಿಸಲು ಲಾಬಿ ಮಾಡುವಂತಹ ಎನ್ವಿಡಿಯಾದ ಆಸಕ್ತಿಯ ವಿಷಯಗಳ ಕುರಿತು ಟ್ರಂಪ್ ಹೆಚ್ಚಿನ ಆಸಕ್ತಿ ಹೊಂದಿದ್ದರು ಎನ್ನಲಾಗಿದೆ. ರಾಜೀನಾಮೆ ಬಳಿಕ ತಾವು ನಿಮ್ಮೊಂದಿಗೆ ಇದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+