ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀನ್ ಕಾರ್ಡ್: ಭಾರತೀಯರಿಗೆ ಡೊನಾಲ್ಡ್ ಟ್ರಂಪ್ ನೀಡಿದ ಶಾಕ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 27: ಆಹಾರ ಮತ್ತು ನಗದು ನೆರವು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಿರುವ ವಲಸಿಗರಿಗೆ ಗ್ರೀನ್ ಕಾರ್ಡ್ ನಿರಾಕರಿಸಲು ಅಮೆರಿಕ ಸರ್ಕಾರ ಮುಂದಾಗಿದೆ.

ಜತೆಗೆ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಸಂಗಾತಿಗಳಿಗೆ ನೀಡಲಾಗುವ ಎಚ್ 4 ವೀಸಾವನ್ನು ರದ್ದು ಮಾಡುವ ಪ್ರಸ್ತಾವ ಸಹ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಮುಂದಿದೆ.

ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!ಎಚ್1ಬಿ ವೀಸಾ ಹೊಸ ನಿಯಮ, ಭಾರತದ ಐಟಿ ಕ್ಷೇತ್ರಕ್ಕೆ ಆಘಾತ!

ಇದರಿಂದ ಅಮೆರಿಕದಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಭಾರತೀಯರು ಮತ್ತು ತಾತ್ಕಾಲಿಕವಾಗಿ ನೆಲೆಸಿರುವ ಭಾರತೀಯರ ಸಂಗಾತಿಗಳಿಗೆ ತೊಂದರೆಯಾಗಲಿದೆ.

ಪ್ರಸ್ತುತ ಅಮೆರಿದಲ್ಲಿರುವ ವಲಸಿಗರು, ಅಲ್ಲಿನ ವಾಸ್ತವ್ಯದ ಅವಧಿಯನ್ನು ವಿಸ್ತರಿಸಲು ಬಯಸಿರುವವರು, ತಾವು ಸರ್ಕಾರದ ಯಾವುದೇ ನೆರವು ಸ್ವೀಕರಿಸಿಲ್ಲ ಮತ್ತು ಸ್ವೀಕರಿಸುವುದಿಲ್ಲ ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಹೊಸ ನಿಯಮ ಹೇಳಿದೆ.

no green cards to aide recepeints donald trump administration us

ಅಲ್ಲದೆ, ಇನ್ನು ಮುಂದೆ ಅಮೆರಿಕಕ್ಕೆ ವಲಸೆ ಹೋಗುವವರು ತಾವು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದು, ತಮಗೆ ಸರ್ಕಾರದ ಸೌಲಭ್ಯದ ನೆರವು ಬೇಕಿಲ್ಲ ಎಂದು ತೋರಿಸಿಕೊಳ್ಳಬೇಕು.

ಒಂದು ವೇಳೆ ಸಾರ್ವಜನಿಕ ಸೇವೆಗಳನ್ನು ಬಳಸಿಕೊಂಡಿದ್ದರೆ ಅವರಿಗೆ ಗ್ರೀನ್ ಕಾರ್ಡ್ ನಿರಾಕರಿಸುವ ನಿಯಮವನ್ನು ಟ್ರಂಪ್ ಆಡಳಿತ ಪ್ರಸ್ತಾಪಿಸಿದೆ.

ಬ್ರಿಟನ್ ವೀಸಾ ನಿಯಮ ಕಠಿಣ: ಭಾರತದ ವಿದ್ಯಾರ್ಥಿಗಳಲ್ಲಿ ತಳಮಳ ಬ್ರಿಟನ್ ವೀಸಾ ನಿಯಮ ಕಠಿಣ: ಭಾರತದ ವಿದ್ಯಾರ್ಥಿಗಳಲ್ಲಿ ತಳಮಳ

ಗರಿಷ್ಠ ಮಿತಿಗಿಂತ ಹೆಚ್ಚು ನಿರ್ದಿಷ್ಟ ಸಾರ್ವಜನಿಕ ಸೌಲಭ್ಯ ಪಡೆದುಕೊಂಡಿರುವುದು ಮತ್ತು ಮುಂದೆ ಪಡೆದುಕೊಳ್ಳುವುದನ್ನು ಗ್ರೀನ್ ಕಾರ್ಡ್ ಹೊಂದಲು ಇರುವ ನಕಾರಾತ್ಮಕ ಅಂಶ ಎಂದು ಪರಿಗಣಿಸಲು ಅದು ನಿರ್ಧರಿಸಿದೆ.

ಪ್ರಸ್ತಾವಿತ ಕಾಯ್ದೆಗೆ ಸೆ. 21ರಂದು ಗೃಹ ಕಾರ್ಯದರ್ಶಿ ಸಹಿ ಹಾಕಿದ್ದು, ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದು ಸಂಸತ್‌ನಲ್ಲಿ ಚರ್ಚೆಗೆ ಒಳಗಾಗಿ ಅನುಮೋದನೆ ಪಡೆದುಕೊಳ್ಳಬೇಕಿದೆ.

English summary
Donald Trump administration proposed a rule to deny green cards to the immigrants who have availed or may availed benifits from government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X