ಏಷ್ಯಾ ನಾಯಕರ ಬಾಂಧವ್ಯಕ್ಕೆ ಸಾಕ್ಷಿಯಾದ ರಷ್ಯಾ
ಉಫಾ, ಜು. 10: ಮಧ್ಯ ಏಷ್ಯಾ ಪ್ರವಾಸದಲ್ಲಿರುವ ನರೇಂದ್ರ ಮೋದಿ ಎಸ್ ಪಿಒ ಶೃಂಗ ಸಭೆಯಲ್ಲಿ ಪಾಲ್ಗೊಂಡು ಏಷ್ಯಾದ ಪ್ರಮುಖ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಿದರು.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆ ಒಂದು ಗಂಟೆಗೂ ಅಧಿಕ ಕಾಲ ನಡೆದ ಮಾತುಕತೆ ಶುಕ್ರವಾರದ ಹೈಲೈಟ್. ಪಾಕಿಸ್ತಾನದ ಸೈನಿಕರು ಪದೇ ಪದೇ ಗಡಿ ನಿಯಮ ಉಲ್ಲಂಘನೆ ಮಾಡುತ್ತಿರುವುದು ಹಾಗೂ ಭಯೋತ್ಪಾದಕರು ಭಾರತದೊಳಗೆ ನುಸುಳುತ್ತಿರುವುದನ್ನು ಪಾಕ್ ಸರ್ಕಾರ ಗಮನಿಸುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.[ಮೋದಿ-ನವಾಜ್ ರಿಂದ ವ್ಯಾಪಾರ ಕುದುರಿಸುವ ಮಾತುಕತೆ]
ಭಯೋತ್ಪಾದನೆ ನಿರ್ಮೂಲನೆ ಕೇವಲ ಒಂದು ದೇಶದಿಂದ ಸಾಧ್ಯವಿಲ್ಲ. ಗಡಿ ತಂಟೆ ಮುಂತಾದ ವಿಚಾರಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಯತ್ನ ಮಾಡಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ. (ಪಿಟಿಐ ಚಿತ್ರಗಳು)

ಮಾತುಕತೆ ಫಲ ನೀಡುವುದೆ?
ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಆಯೋಜಿಸಿದ್ದ ಡಿನ್ನರ್ ನಲ್ಲಿ ಉಭಯ ನಾಯಕರು ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳು ಹಾಗೂ ಎಸ್ ಸಿಒ ದೇಶಗಳ ಮುಖ್ಯಸ್ಥರು ಭಾಗವಹಿಸಿದ್ದರು. ಶಾಂಘೈ ಸಹಕಾರ ಸಂಘ (ಎಸ್ ಸಿಒ) ಸಭೆಯಲ್ಲಿ ಪಾಲ್ಗೊಂಡಿರುವ ಮೋದಿ ಹಾಗೂ ಷರೀಫ್ ಅವರು ಒಂದು ಗಂಟೆಗಳ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಮೀನುಗಾರರ ಬಿಡುಗಡೆಗೆ ಒಪ್ಪಿಗೆ
ಉಭಯ ದೇಶದ ನಾಯಕರ ಮಾತುಕತೆಯಲ್ಲಿ ಮೀನುಗಾರರನ್ನು ಬಿಡುಗಡೆ ಮಾಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಉಭಯ ದೇಶಗಳಲ್ಲೂ ಸೌಲಭ್ಯ ಒದಗಿಸುವುದರ ಬಗ್ಗೆ ಚರ್ಚೆ ನಡೆಸಲಾಗಿದೆ.

ಏಷ್ಯಾ ಮುಖಂಡರ ಸಮಾಗಮ
ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಡುಲ್ಮಾ ರಿಸೆಫ್, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಜತೆಯಾಗಿ ಕಾಣಿಸಿಕೊಂಡರು.

ಗಹನವಾದ ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ ಎಸ್ ಎ ಅಜೀತ್ ದೋವಲ್ ಶಾಂಘೈ ಕಾರ್ಪೋರೇಶನ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

ಮಳೆಗೆ ನಲುಗಿದ ಪಶ್ಷಿಮ ಬಂಗಾಳ
ಪಶ್ಷಿಮ ಬಂಗಾಳದಲ್ಲಿ ಕಳೆದ ಎರಡು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ರಸ್ತೆಗೆ ನೀರು ನುಗ್ಗಿದೆ. ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡುಬಂದಿದ್ದು ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ದಾರಿ ಯಾವುದಯ್ಯಾ?
ಮಣ್ಣು ಕುಸಿತದ ಪರಿಣಾಮ ಜಮ್ಮು ಮತ್ತು ಶ್ರೀನಗರ ನಡುವಿನ ರಸ್ತೆ ಸಂಚಾರ ಬಂದ್ ಆಗಿದ್ದು ವಾಹನಗಳು ಸರತಿ ಸಾಲಿನಲ್ಲಿ ನಿಂತಿದ್ದಾಗ ಕಂಡುಬಂದ ದೃಶ್ಯ.












Click it and Unblock the Notifications