ಭಾರತಕ್ಕೆ ಕಿರಿಕಿರಿ ತಂದ ಚೀನಾ-ನೇಪಾಳ ಹೊಸ ಹೆದ್ದಾರಿ
ಬೀಜಿಂಗ್, ಸೆ. 19: ಚೀನಾ-ನೇಪಾಳ ನಡುವಿನ ಹೊಸ ಹೆದ್ದಾರಿ ನಿರ್ಮಾಣ ಭಾರತಕ್ಕೆ ಕಿರಿಕಿರಿಯುಂಟು ಮಾಡಿದೆ. ಟಿಬೆಟ್ ನಲ್ಲಿ ನಿರ್ಮಿಸಲಾಗಿರುವ ಈ ಹೆದ್ದಾರಿಯನ್ನು ಸೇನಾ ಉದ್ದೇಶಕ್ಕೆ ಬಳಸಲು ಚೀನಾ ಚಿಂತಿಸಿರುವುದು ಭಾರತದ ತಲೆನೋವಿಗೆ ಕಾರಣ.
ಸುಮಾರು 25 ಮೀಟರ್ ಅಗಲ, 40.4 ಕಿ.ಮೀ ಉದ್ದದ ಈ ಹೆದ್ದಾರಿಯಲ್ಲಿ ಮಿಲಿಟರಿ ವಾಹನಗಳು, ಸೇನಾ ವಿಮಾನಗಳು ಬಳಸಬಹುದಾಗಿದೆ. ಚೀನಾ-ನೇಪಾಳದ ನಡುವೆ ರೈಲ್ವೆ ಸಂಪರ್ಕ ಸಾಧಿಸಲು ಈ ಹೆದ್ದಾರಿ ಅನುಕೂಲಕರ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

ವಾಯುವ್ಯ ಚೀನಾ ಭಾಗದ ಟಿಬೆಟ್ ಗೆ ಸೇರಿರುವ ಝಂಗ್ಮು ಪಟ್ಟಣದಿಂದ ನೇಪಾಳದ ಗಡಿ ಭಾಗಕ್ಕೆ ಈ ರಸ್ತೆ ಸಂಪರ್ಕ ಹೊಂದಿದೆ ಎಂದು ಶಾಂಘೈನ ಇನ್ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ನ ಏಷ್ಯಾ ಪೆಸಿಫಿಕ್ ಅಧ್ಯಯನ ಕೇಂದ್ರದ ನಿರ್ದೇಶಕ ಝಾವೋ ಗಂಗ್ಚೆಂಗ್ ಹೇಳಿದ್ದಾರೆ.












Click it and Unblock the Notifications