ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NeoCov: ಕೊರೊನಾವೈರಸ್ ಹೊಸ ರೂಪಾಂತರ: ನಿಯೋಕೋವ್ ಅಂಟಿದ ಮೂವರಲ್ಲಿ ಒಬ್ಬರ ಸಾವು ಪಕ್ಕಾ!

|
Google Oneindia Kannada News

ವುಹಾನ್, ಜನವರಿ 28: ಚೀನಾದ ವುಹಾನ್ ನಗರದಲ್ಲಿ 2019ರಲ್ಲಿ ಮೊದಲ ಬಾರಿಗೆ ಕೊರೊನಾವೈರಸ್ ಕಾಣಿಸಿಕೊಂಡಿತ್ತು. ಅಂದು ವೈರಸ್ ಪತ್ತೆ ಮಾಡಿದ ವುಹಾನ್ ವಿಜ್ಞಾನಿಗಳು ಇಂದು ದಕ್ಷಿಣ ಆಫ್ರಿಕಾದಲ್ಲಿ ಹೊಸ ರೀತಿಯ ಕೊರೊನಾವೈರಸ್ ರೂಪಾಂತರಿ ನಿಯೋಕೋವ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಹೊಸ ಕೊವಿಡ್-19 ರೂಪಾಂತರಿ ನಿಯೋಕೋವ್ ಸೋಂಕು ಅಂಟಿಕೊಂಡ ಮೂವರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ, ಸೋಂಕು ದೀರ್ಘವಾಗಿ ಹರಡುತ್ತದೆ ಎಂಬ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ತಿಳಿಸಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.

ಸಲಹೆ: ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ನೀಡುವ ಶುಂಠಿ ಕಷಾಯಸಲಹೆ: ವೈರಸ್ ವಿರುದ್ಧ ಪ್ರತಿರೋಧಕ ಶಕ್ತಿ ನೀಡುವ ಶುಂಠಿ ಕಷಾಯ

ಆದಾಗ್ಯೂ, ವರದಿಯ ಪ್ರಕಾರ, ನಿಯೋಕೋವ್ ವೈರಸ್ ಹೊಸದಲ್ಲ. MERS-CoV ವೈರಸ್‌ನೊಂದಿಗೆ ಸಂಯೋಜಿತವಾಗಿದೆ. ಇದು 2012 ಮತ್ತು 2015 ರಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ಏಕಾಏಕಿ ಪತ್ತೆ ಆಗಿತ್ತು. ಇದು ಮಾನವರಲ್ಲಿ ಕೊರೊನಾವೈರಸ್ ಸೋಂಕಿಗೆ ಕಾರಣವಾಗುವ SARS-CoV-2 ಅನ್ನು ಹೋಲುತ್ತದೆ.

ನಿಯೋಕೋವ್ ರೂಪಾಂತರಿ ಬ್ಯಾಟ್ ಸಂಖ್ಯೆಯಲ್ಲಿ ಪತ್ತೆ

ನಿಯೋಕೋವ್ ರೂಪಾಂತರಿ ಬ್ಯಾಟ್ ಸಂಖ್ಯೆಯಲ್ಲಿ ಪತ್ತೆ

ದಕ್ಷಿಣ ಆಫ್ರಿಕಾದ ಬ್ಯಾಟ್ ಜನಸಂಖ್ಯೆಯಲ್ಲಿ ನಿಯೋಕೋವ್ ರೂಪಾಂತರಿಯು ಪತ್ತೆಯಾಗಿದೆ. ನಿಯೋಕೋವ್ ಸೋಂಕು ಈ ಪ್ರಾಣಿಗಳಲ್ಲಿ ಮಾತ್ರ ಹರಡುತ್ತದೆ ಎಂದು ತಿಳಿದುಬಂದಿದೆ. bioRxiv ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುವ ಹೊಸ ಅನ್‌ಪೀರ್ಡ್ ಅಧ್ಯಯನದಲ್ಲಿ ನಿಯೋಕೋವ್ ವೈರಸ್ ಮತ್ತು ಅದರೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ PDF-2180-CoV ಮಾನವರಿಗೆ ಸೋಂಕು ತರುತ್ತದೆ ಎಂಬುದನ್ನು ಪತ್ತೆ ಮಾಡಲಾಗಿದೆ.

ಕೊರೊನಾವೈರಸ್ ಲಸಿಕೆ ಪಡೆದವರಲ್ಲಿ ಪ್ರತಿರಕ್ಷಣೆ

ಕೊರೊನಾವೈರಸ್ ಲಸಿಕೆ ಪಡೆದವರಲ್ಲಿ ಪ್ರತಿರಕ್ಷಣೆ

ಚೀನಾದ ವುಹಾನ್ ವಿಶ್ವವಿದ್ಯಾನಿಲಯ ಮತ್ತು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಬಯೋಫಿಸಿಕ್ಸ್‌ನ ಸಂಶೋಧಕರ ಪ್ರಕಾರ, ಮಾನವ ಜೀವಕೋಶಗಳಿಗೆ ನುಸುಳಲು ವೈರಸ್‌ಗೆ ಕೇವಲ ಒಂದು ರೂಪಾಂತರದ ಅಗತ್ಯವಿದೆ. ಕೊರೊನಾವೈರಸ್ ರೋಗಕಾರಕಕ್ಕಿಂತ ವಿಭಿನ್ನವಾಗಿರುವ ಎಸಿಇ 2, ಕೊರೊನಾವೈರಸ್ ಅಪಾಯವನ್ನು ಉಂಟು ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಇದರ ಪರಿಣಾಮವಾಗಿ ಪ್ರತಿಕಾಯಗಳು ಅಥವಾ ಪ್ರೋಟೀನ್ ಅಣುಗಳು ಉತ್ಪತ್ತಿಯಾಗುವುದಿಲ್ಲ. ಆದರೆ ಉಸಿರಾಟದ ಕಾಯಿಲೆಗಳಿರುವ ಜನರು ಅಥವಾ ಪ್ರತಿರಕ್ಷಣೆ ಪಡೆದವರು ನಿಯೋಕೋವ್ ವೈರಸ್ ವಿರುದ್ಧ ಸುರಕ್ಷಿತಾಗಿರಬಹುದು ಎಂದು ತಿಳಿದು ಬಂದಿದೆ.

ನಿಯೋಕೋವ್ ರೂಪಾಂತರಿ ಸಾವಿಗೆ ಕಾರಣ

ನಿಯೋಕೋವ್ ರೂಪಾಂತರಿ ಸಾವಿಗೆ ಕಾರಣ

ಚೀನಾದ ಸಂಶೋಧಕರ ಪ್ರಕಾರ, ನಿಯೋಕೋವ್ MERS-High CoV ಮರಣ ಪ್ರಮಾಣ ಹೆಚ್ಚಾಗಿದೆ. ನಿಯೋಕೋವ್ ರೂಪಾಂತರಿ ಸೋಂಕು ತಗುಲಿದ ಮೂವರಲ್ಲಿ ಒಬ್ಬರು ಸಾವನ್ನಪ್ಪುತ್ತಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಭಯ ಹುಟ್ಟಿಸಿರುವ SARS-CoV-2 ಕೊರೊನಾವೈರಸ್ ಸೋಂಕು ಹೆಚ್ಚು ಹರಡುವಿಕೆ ಶಕ್ತಿಯನ್ನು ಹೊಂದಿರುತ್ತದೆ. SARS-CoV-2 ಹರಡುವಿಕೆ ಹೆಚ್ಚಾದರೆ, ನಿಯೋಕೋವ್ MERS-High CoV ಹೆಚ್ಚು ಸಾವಿನ ಅಪಾಯವನ್ನು ಉಂಟು ಮಾಡುತ್ತದೆ. ರಷ್ಯಾದ ರಾಜ್ಯ ವೈರಾಲಜಿ ಮತ್ತು ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರದ ತಜ್ಞರು ಹೇಳಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ನಿಯೋಕೋವ್ ಕೊರೊನಾವೈರಸ್ ಕುರಿತು ಅಧ್ಯಯನ

ನಿಯೋಕೋವ್ ಕೊರೊನಾವೈರಸ್ ಕುರಿತು ಅಧ್ಯಯನ

"ನಿಯೋಕೋವ್ ಕೊರೊನಾವೈರಸ್ ಕುರಿತು ಚೀನಾದ ಸಂಶೋಧಕರು ಪಡೆದ ಡೇಟಾವನ್ನು ವೆಕ್ಟರ್ ಸಂಶೋಧನಾ ಕೇಂದ್ರವು ತಿಳಿದಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ರೂಪಾಂತರಿಯು ಜನರಲ್ಲಿ ತೀವ್ರವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆಯೇ ಇಲ್ಲವೇ ಎಂಬುದನ್ನು ಮತ್ತಷ್ಟು ಅಧ್ಯಯನ ಮಾಡಬೇಕಿದೆ. ಮನುಷ್ಯದಲ್ಲಿ ರೋಗಾಣು ಎಷ್ಟು ಕಾಲದವರೆಗೂ ಸಕ್ರಿಯವಾಗಿರುತ್ತದೆ ಎಂಬ ಬಗ್ಗೆ ಬಗ್ಗೆ ತನಿಖೆ ಮುಂದುವರಿಸಲಾಗುವುದು ಎಂದು ಚೀನಾ ಸಂಶೋಧಕರು ತಿಳಿಸಿದ್ದಾರೆ.

English summary
NeoCov Coronavirus Variant: Scientists in Wuhan have warned of a new variant of coronavirus—NeoCov, currently circulating in South Africa. It has High Death and Infection Rate says Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X