ಅಕ್ರಮ ವಲಸೆ: ಅಮೆರಿಕ ಗಡಿಯಲ್ಲಿ ನೂರಾರು ಭಾರತೀಯರು ವಶಕ್ಕೆ
ಬೆಂಗಳೂರು, ಜೂನ್ 22: ಅಮೆರಿಕ- ಮೆಕ್ಸಿಕೋದ ಗಡಿ ಪ್ರದೇಶದ ಮೂಲಕ ಅನಧಿಕೃತವಾಗಿ ಪ್ರವೇಶಿಸಿರುವ ಕಾರಣಕ್ಕೆ ನೂರಾರು ಭಾರತೀಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಮಾರು ಒಂದು ತಿಂಗಳಿನಿಂದ ಹತ್ತಕ್ಕೂ ಹೆಚ್ಚು ಪಂಜಾಬ್ ಮೂಲದ ಮಂದಿಯನ್ನು ನ್ಯೂ ಮೆಕ್ಸಿಕೋದಲ್ಲಿ ಬಂಧಿಸಲಾಗಿತ್ತು. ಇದೀಗ ಇನ್ನಷ್ಟು ಭಾರತೀಯರು ಸೇರ್ಪಡೆಯಾಗಿದ್ದಾರೆ.

2013 ರಿಂದ 2015ರ ಅವಧಿಯಲ್ಲಿ ಸುಮಾರು 27 ಸಾವಿರ ಭಾರತೀಯರು ಈ ರೀತಿಯ ಬಂಧನಕ್ಕೆ ಒಳಗಾಗಿದ್ದಾರೆ. ಇವರಲ್ಲಿ 4 ಸಾವಿರ ಮಂದಿ ಮಹಿಳೆಯರು ಮತ್ತು 350 ಮಕ್ಕಳು ಸೇರಿದ್ದಾರೆ ಎಂದು ಉತ್ತರ ಅಮೆರಿಕದ ಪಂಜಾಬಿ ಅಸೋಸಿಯೇಷನ್‌ನ ಸತ್ನಂ ಸಿಂಗ್ ಚಾಹಲ್ ಅವರು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಮಾನವ ಕಳ್ಳ ಸಾಗಣೆ ಹೆಚ್ಚಾಗಿ ನಡೆಯುತ್ತಿದ್ದು, ಅಲ್ಲಿನ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪಂಜಾಬಿಯರನ್ನು ಮನೆ ಬಿಡುವಂತೆ ಪ್ರೋತ್ಸಾಹಿಸುತ್ತಾರೆ ಮತ್ತು ಮನೆ ಬಿಟ್ಟ ಪ್ರತಿಯೊಬ್ಬರಿಗೂ ತಲಾ 35 ರಿಂದ 50 ಲಕ್ಷ ನೀಡುತ್ತಾರೆ ಎಂದು ಹೇಳಿದರು.(ಪಿಟಿಐ)











Click it and Unblock the Notifications