ಆಗಸ್ಟ್ 21ರ ಖಗ್ರಾಸ ಸೂರ್ಯಗ್ರಹಣಕ್ಕೆ ನಾಸಾ ಭರದ ಸಿದ್ಧತೆ

ವಾಷಿಂಗ್ಟನ್ ಡಿಸಿ, ಜೂನ್ 22 : ಸುಮಾರು 99 ವರ್ಷಗಳ ನಂತರ ಉತ್ತರ ಅಮೆರಿಕದಲ್ಲಿ ಆಗಸ್ಟ್ 21ರ ಅಮವಾಸ್ಯೆಯಂದು ಖಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದ್ದು, ಈ ಅತ್ಯದ್ಭುತ ಖಗೋಳ ವಿದ್ಯಮಾನಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಭರ್ಜರಿ ತಯಾರಿ ಈಗಿಂದಲೇ ನಡೆಸಿದೆ.

ಸಂಪೂರ್ಣ ಸೂರ್ಯ ಗ್ರಹಣಕ್ಕಿಂತ ಮೊದಲು, ಗ್ರಹಣದ ಸಮಯ ಮತ್ತು ನಂತರದ ಚಿತ್ರಗಳನ್ನು ಸೆರೆಹಿಡಿಯಲು 11 ಬಾಹ್ಯಾಕಾಶ ನೌಕೆ, 3 ನಾಸಾ ವಿಮಾನ, ಎತ್ತರದಲ್ಲಿ ಹಾರಲಿರುವ 50ಕ್ಕೂ ಹೆಚ್ಚು ಏರ್ ಬಲೂನ್ ಗಳು ಸಿದ್ಧಗೊಂಡಿದ್ದು, ಆಕಾಶದಿಂದ ಖಗೋಳ ವಿಜ್ಞಾನಿಗಳು ಕೂಡ ಫೋಟೋ ಸೆರೆಹಿಡಿಯಲಿದ್ದಾರೆ.

NASA Prepares for August 21 Total Solar Eclipse

ಈ ಅಭೂತಪೂರ್ವ ದೃಶ್ಯವನ್ನು ಆಸಕ್ತರಿಗೆ ನೇರವಾಗಿ ತೋರಿಸಲು ಪಾರ್ಕುಗಳು, ಗ್ರಂಥಾಲಯಗಳು, ಸ್ಟೇಡಿಯಂ, ಮ್ಯೂಸಿಯಂಗಳಲ್ಲಿ ಲೈವ್ ವಿಡಿಯೋಗಳನ್ನು ಬಿತ್ತರಿಸಲಿದೆ ನಾಸಾ. ಹಾಗೆಯೆ, ಸೋಷಿಯಲ್ ಮೀಡಿಯಾದಲ್ಲಿ ಕೂಡ ಲೈವ್ ವಿಡಿಯೋ ಸ್ಟ್ರೀಮ್ ಮುಖಾಂತರ ಭೂಮಿಯ ಯಾವುದೇ ಮೂಲೆಯಲ್ಲಿರುವವರು ನೋಡಬಹುದು.

ಎರಡು ಗಂಟೆಗಳ ಅವಧಿಯಲ್ಲಿ ಓರೆಗಾಂವ್ ನಿಂದ ದಕ್ಷಿಣ ಕ್ಯಾಲಿಫೋರ್ನಿಯಾವರೆಗೆ 14 ರಾಜ್ಯಗಳಲ್ಲಿ ಈ ಖಗ್ರಾಸ್ಖಗ್ರಾಸ ಸೂರ್ಯ ಗ್ರಹಣ ಕಂಡುಬರಲಿದ್ದು, ಎರಡು ನಿಮಿಷಗಳ ಕಾಲ ಸೂರ್ಯ ನೋಡುವವರಿಗೆ ಸುಟ್ಟು ಕರಕಲಾದಂತೆ ಕಾಣಿಸಲಿದ್ದಾನೆ. ಆ ಎರಡು ನಿಮಿಷಗಳ ಕಾಲ ಕತ್ತಲು ಆವರಿಸಿಕೊಳ್ಳಲಿದೆ.

ಇನ್ನು ಆ ಡೈಮಂಡ್ ರಿಂಗ್ ನೋಡುವ ಅತ್ಯದ್ಭುತ ಅವಕಾಶ. ವಿಜ್ಞಾನಿಗಳಿಗಂತೂ, ನಾವು ಯುಗಾದಿ, ದೀಪಾವಳಿ, ಗಣೇಶ, ದಸರಾ ಹಬ್ಬಗಳಂದು ಸಂಭ್ರಮಿಸಿದಂತೆ ಸಂಭ್ರಮಿಸಲಿದ್ದಾರೆ. ಸೂರ್ಯನನ್ನು ಮತ್ತಷ್ಟು ಕುತೂಹಲದಿಂದ ಅಧ್ಯಯನ ಮಾಡಲು ಅವರಿಗೆ ಮತ್ತೊಂದು ಅವಕಾಶ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+