NASA Artemis II: ಬಾಹ್ಯಾಕಾಶಯಾನ ಯಶಸ್ವಿ, 4 ಗಗನಯಾನಿಗಳು ಮರಳಿ ಭೂಮಿಗೆ, ಅವರೊಂದಿಗೆ ಹಾರಿದ್ದ 'ಡಲ್ಕೋಫ್ಲೆಕ್ಸ್' ಮಾತ್ರೆ
ನವದೆಹಲಿ: ಮನುಷ್ಯನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸಿದ ನಾಸಾದ (NASA) ಐತಿಹಾಸಿಕ 'ಆರ್ಟೆಮಿಸ್ 2' ಬಾಹ್ಯಾಕಾಶಯಾನ ಪೂರ್ಣಗೊಂಡಿದ್ದು, ಗಗನಯಾನಿಗಳು ಭೂಮಿಗೆ ಬಂದಿಳಿದಿದ್ದಾರೆ. ಒಟ್ಟು ಈ 10 ದಿನಗಳ ರೋಮಾಂಚನಕಾರಿ ಈ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ರಕ್ಷಣೆಯೂ ಮುಖ್ಯವಾಗಿರುತ್ತದೆ. ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ 'ಡಲ್ಕೋಲಾಕ್ಸ್' ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ ಈ ಔಷಧಿಯನ್ನು 'ಡಲ್ಕೋಫ್ಲೆಕ್ಸ್' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಗಗನಯಾನಿಗಳಿಗೆ ಬ್ಯಾಹ್ಯಾಕಾಶದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಗೆ ಇದ್ದು ಮದ್ದಿನ ರೀತಿ ಕೆಲಸ ಮಾಡುತ್ತದೆ.
ನಾಸಾದ ಆರ್ಟೆಮಿಸ್-II ಮಿಷನ್ ಯಶಸ್ವಿ
ನಾಸಾದ ಆರ್ಟೆಮಿಸ್-II ಮಿಷನ್ ಯಶಸ್ವಿಯಾಗಿ ಮುಗಿದೆ. ಲ್ವರು ಗಗನಯಾತ್ರಿಗಳು ಏಪ್ರಿಲ್ 11, 2026 ರಂದು ಚಂದ್ರನ ಕಕ್ಷೆಯಲ್ಲಿ ಸುತ್ತು ಹಾಕಿ ಪೆಸಿಫಿಕ್ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ. ಐದು ದಶಕಗಳ ನಂತರದ ಈ ಮಾನವಸಹಿತ ಚಂದ್ರಯಾನವು ಆರ್ಟೆಮಿಸ್-3 ರ ಮೂಲಕ ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವ ನಾಸಾದ ಮಹತ್ವಾಕಾಂಕ್ಷೆಯ ಯೋಜನೆಗೆ ಬುನಾದಿ ಹಾಕಿದಂತಾಗಿದೆ. ಅವರ ಆರೋಗ್ಯ, ಪ್ರಥಮ ಚಿಕಿತ್ಸೆಗೆ ಏನೆಲ್ಲ ಒಯ್ದಿರುತ್ತಾರೆ ಎಂಬುದರ ಬಗ್ಗೆ ಚರ್ಚೆ ಆಗುತ್ತಿದ್ದು, ಮಹತ್ವದ ಔಷಧಿ ಬಗ್ಗೆ ರಿವೀಲ್ ಮಾಡಲಾಗಿದೆ.

ಬಾಹ್ಯಾಕಾಶದಲ್ಲಿ ಮಲಬದ್ಧತೆ ಸಮಸ್ಯೆ ಕಾಡುವುದೇಕೆ?
ಬಾಹ್ಯಾಕಾಶ ಪ್ರಯಾಣ ಎಷ್ಟೇ ಅದ್ಭುತವಾಗಿದ್ದರೂ, ಅಲ್ಲಿಯೂ ಮನುಷ್ಯನ ಹೊಟ್ಟೆ ಮತ್ತು ಜೀರ್ಣಕ್ರಿಯೆ ಭೂಮಿಯಲ್ಲಿಂದೆಯೇ ಸ್ಪಂದಿಸುತ್ತದೆ. ಹೊಟ್ಟೆ ವಿಚಾರದಲ್ಲಿ ಜೀಣಕ್ರಿಯೆ ಪ್ರಕ್ರಿಯೆ ಬದಲಾಗದು. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಇದರಿಂದಾಗಿ ಕರುಳಿನ ಚಲನೆ ತುಂಬಾ ನಿಧಾನವಾಗುತ್ತದೆ. ಜೊತೆಗೆ ಗಗನಯಾತ್ರಿಗಳಿಗೆ ಅಲ್ಲಿ ಓಡಾಡಲು ಜಾಗ ಕಡಿಮೆ. ಹೀಗಾಗಿ ಅವರು ವಿಶೇಷ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು ಸಾಮಾನ್ಯ. ಹೀಗಾಗಿಯೇ ನಾಸಾ ಅತ್ಯಂತ ಗುಣಮಟ್ಟದ, ಆರೋಗ್ಯಕ್ಕೆ ಸಹಾಯ ಮಾಡಬಲ್ಲ ಔಷಧಿ/ಮಾತ್ರೆಯನ್ನು ಗಗಯಾನಿಗಳ ಜೊತೆ ಕಳುಹಿಸುತ್ತದೆ.
ನಾಸಾದ ಏಕೈಕ ಆಯ್ಕೆ ಡಲ್ಕೋಲಾಕ್ಸ್
ಬಾಹ್ಯಾಕಾಶದಲ್ಲಿ ತಮ್ಮದೇ ಆದ ಸಂಶೋಧನೆಗಳಲ್ಲಿ ತೊಡಗಿರುವ ಗಗನಯಾನಿಗಳಿಗೆ ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳು ಎದುರಾದಾಗ ಅದೆಲ್ಲದಕ್ಕೂ ಪರಿಹಾರ ನೀಡಲು ನಾಸಾದ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿರುವ ಏಕೈಕ ಔಷಧ ಈ 'ಡಲ್ಕೋಲಾಕ್ಸ್' (ಭಾರತದಲ್ಲಿ ಡಲ್ಕೋಫ್ಲೆಕ್ಸ್). ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಹಲವು ದಶಕಗಳಿಂದ ಗಗನಯಾತ್ರಿಗಳು ಇದನ್ನು ಬಳಸುತ್ತಿದ್ದಾರೆ.
ಇದರಲ್ಲಿರುವ 'ಬಿಸಾಕೋಡಿಲ್' ಎಂಬ ಅಂಶವು ಕರುಳಿನ ಸಹಜ ಚಲನೆಯನ್ನು ಉತ್ತೇಜಿಸಿ, ಕೇವಲ 6 ಗಂಟೆಗಳಲ್ಲಿ ನಿರಾಳತೆ ನೀಡುತ್ತದೆ. ಇದು ಚಟವಾಗುವ ಔಷಧಿ ಅಲ್ಲದೇ ಇರುವುದರಿಂದ ಇದು ಬಳಕೆಗೆ ಅತ್ಯಂತ ಸುರಕ್ಷಿತವಾಗಿದೆ.
ಈ ಬಗ್ಗೆ ಮಾತನಾಡಿರುವ ಒಪೆಲ್ಲಾ ಇಂಡಿಯಾ ಕಂಪನಿಯ ನಿರ್ದೇಶಕಿ ನೂಪುರ್ ಗುರ್ಬಕ್ಸಾನಿ, "ನಾಸಾದ ಈ ಮಹತ್ವದ ಯೋಜನೆಯಲ್ಲಿ ನಮ್ಮ ಬ್ರ್ಯಾಂಡ್ ಸೇರ್ಪಡೆಯಾಗಿರುವುದು ವೈದ್ಯರು ಮತ್ತು ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷ, ಮನೆಯಿಂದ ಹಿಡಿದು ಬಾಹ್ಯಾಕಾಶದವರೆಗೂ, ಎಲ್ಲೆಡೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ವಿವರಿಸಿದರು.
ಭೂಮಿಯ ಮೇಲಿರುವಾಗಲೂ ಒತ್ತಡ, ದೀರ್ಘಕಾಲದ ಪ್ರಯಾಣ ಅಥವಾ ದಿನಚರಿಯಲ್ಲಿ ಬದಲಾವಣೆಯಾದಾಗ ಜನರಿಗೆ ಮಲಬದ್ಧತೆ ಕಾಡುತ್ತದೆ. ಇಂತಹ ಸಮಯದಲ್ಲಿಯೂ ಇದು ಅತ್ಯುತ್ತಮ ಪರಿಹಾರವಾಗಿದೆ ಎಂದು ತಿಳಿಸಿದರು.
ಭಾರತದಲ್ಲಿಯೂ ಲಭ್ಯ 'ಡಲ್ಕೋಫ್ಲೆಕ್ಸ್'
ಭಾರತದಲ್ಲಿ 2017ರಲ್ಲಿ 'ಡಲ್ಕೋಲಾಕ್ಸ್' ಹೆಸರನ್ನು 'ಡಲ್ಕೋಫ್ಲೆಕ್ಸ್' ಎಂದು ಬದಲಾಯಿಸಲಾಯಿತು. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಇದು ವಿವಿಧ ರೂಪಗಳಲ್ಲಿ ಲಭ್ಯವಿದೆ:
ಮಾತ್ರೆಯ ಕಾರ್ಯ ಹೇಗೆ?
5 ಎಂಜಿ ಮಾತ್ರೆ: ರಾತ್ರಿ ಸೇವಿಸಿದರೆ 6-8 ಗಂಟೆಗಳಲ್ಲಿ ಅಂದರೆ ಬೆಳಗಾಗುವಷ್ಟರಲ್ಲಿ ಸುಗಮ ಪರಿಹಾರ ನೀಡುತ್ತದೆ. 5 ಎಂಜಿ ಸಪೊಸಿಟರಿ: 0 ದಿಂದ 10 ವರ್ಷದೊಳಗಿನ ಮಕ್ಕಳಿಗೆ ಇದು ಶೀಘ್ರ ಪರಿಹಾರ ನೀಡುತ್ತದೆ. ಇನ್ನು10 ಎಂಜಿ ಸಪೊಸಿಟರಿ: 10 ವರ್ಷ ಮೇಲ್ಪಟ್ಟವರಿಗೆ ಹಾಗೂ ವಯಸ್ಕರಿಗೆ ತಕ್ಷಣದ ಪರಿಹಾರ ನೀಡಲು ಇದು ಉಪಯುಕ್ತವಾಗಿದೆ.












Click it and Unblock the Notifications