ಕನ್ನಡಿಗರ ‘ಕೆಜಿಎಫ್’ ಬೆಡಗಿಯ ಮಿಂಚಿನ ಬಟ್ಟೆ ಮೋಡಿ!
ಫ್ರಾನ್ಸ್: ಕೇನ್ಸ್ ಚಿತ್ರೋತ್ಸವ ದಿನದಿಂದ ದಿನಕ್ಕೆ ಕಲರ್ಫುಲ್ ಆಗುತ್ತಿದೆ. ಅದರಲ್ಲೂ ಭಾರತೀಯ ನಟಿಯರು ಈ ಬಾರಿ ಕೇನ್ಸ್ ಚಿತ್ರೋತ್ಸವದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದಾರೆ. ಹೀಗೆ ಕನ್ನಡಿಗರ 'ಕೆಜಿಎಫ್' ಬೆಡಗಿ ಕೂಡ ತನ್ನ ವಿಭಿನ್ನ ಸ್ಟೈಲ್‌ನ ವಸ್ತ್ರದ ಮೂಲಕ ಗಮನ ಸೆಳೆದಿದ್ದಾರೆ. ಹಾಗಾದ್ರೆ ಯಾರದು 'ಕೆಜಿಎಫ್' ಸುಂದರಿ? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿ ತಿಳಿಯೋಣ.
ಈ ಬಾರಿ ಕೇನ್ಸ್ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿಯರ ದಂಡೇ ಕಾಣಿಸಿಕೊಂಡಿದೆ. ಹಾಗೇ ಒಬ್ಬರಿಗಿಂತ ಒಬ್ಬರು ಬಹಳ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಜಗತ್ತಿನ ದೊಡ್ಡ ಚಿತ್ರೋತ್ಸವಗಳಲ್ಲಿ ಕೇನ್ಸ್ ಕೂಡ ಒಂದು, ಜಗತ್ತಿನ ಮೂಲೆ ಮೂಲೆಯಿಂದ ನಟ, ನಟಿಯರು ಇಲ್ಲಿ ಭಾಗವಹಿಸುತ್ತಾರೆ. ಅದೇ ರೀತಿಯಾಗಿ ಕನ್ನಡಿಗರ 'ಕೆಜಿಎಫ್' ಬೆಡಗಿ & ಬಾಲಿವುಡ್ ಸುಂದರಿ ಮೌನಿ ರಾಯ್ ಕೂಡ ಕೇನ್ಸ್ ಚಿತ್ರೋತ್ಸವಕ್ಕೆ ಎಂಟ್ರಿ ಕೊಟ್ಟಿದ್ದರು. ತಮ್ಮ ಮೊದಲ ಎಂಟ್ರಿಯಲ್ಲೇ ಹಾಲಿವುಡ್ ಮಂದಿಯನ್ನ ಫಿದಾ ಮಾಡಿದ್ರು.

ಮೌನಿ ರಾಯ್ ಸಖತ್ ಸ್ಟೈಲ್ ಮಗಾ!
ಸಿನಿಮಾ ಮಂದಿ ಅಂದ್ರೆ ಸ್ಟೈಲ್‌ಗೆ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ಅದರಲ್ಲೂ ಸಿನಿಮಾ ಕಾರ್ಯಕ್ರಮ ಅಂದ್ರೆ ಕೇಳಬೇಕಾ? ಇನ್ನೂ ಹೆಚ್ಚಿನದ್ದಾಗಿ ಇದು ಅಂತಾರಾಷ್ಟ್ರೀಯ ಚಿತ್ರೋತ್ಸವ. ಹೀಗಾಗಿ ಬಾಲಿವುಡ್ ಬೆಡಗಿ, ಕೆಜಿಎಫ್ ನಟಿ ಮೌನಿ ರಾಯ್ ಮಿಂಚಿನ ಬಟ್ಟೆ ಮೂಲಕ ಮಿಂಚು ಹರಿಸಿದ್ರು. ಕೇನ್ಸ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಜುಹ್ರಾ ಗರಿಗಳಿರುವ ಗೌನ್‌ನಲ್ಲಿ ಮಿಂಚು ಹರಿಸಿದ್ರು. ಇದೀಗ ಸೋಷಿಯಲ್ ಮೀಡಿಯಾ ತುಂಬಾ ಮೌನಿ ರಾಯ್ ಕೇನ್ಸ್ ಎಂಟ್ರಿ ಬಗ್ಗೆ ಚರ್ಚೆ ಮುಂದುವರಿದಿದೆ. ಅದರಲ್ಲೂ ಮೌನಿ ಅಭಿಮಾನಿಗಳು ಆಕೆಯ ಲುಕ್‌ಗೆ ಫಿದಾ ಆಗಿದ್ದಾರೆ.
- #Photocall instant#Photocall📸 Instantané
THE IDOL de SAM LEVINSON
Avec / With Abel 'The Weeknd' Tesfaye, Lily-Rose Depp, Jennie Kim & Sam Levinson#Cannes2023 #HorsCompétition #OutOfCompetition pic.twitter.com/1jv9gmWuYW — Festival de Cannes (@Festival_Cannes) May 23, 2023
ದೇಸಿ ಉಡುಗೆಯಲ್ಲಿ ಮಿಂಚಿದ್ದ ಸಾರಾ
ಇನ್ನು 'ಕೇನ್ಸ್' ಆರಂಭದಲ್ಲಿ ಸಾರಾ ಅಲಿ ಖಾನ್ ದೇಸಿ ಉಡುಗೆಯಲ್ಲಿ ಕಾಣಿಸಿಕೊಂಡು, ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಭಾರತೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ನಟಿ ಸಾರಾ ಅಲಿ ಖಾನ್ ಅವರ ಬಗ್ಗೆ ಫ್ಯಾನ್ಸ್ ಅದ್ರಲ್ಲೂ ಪ್ರಮುಖವಾಗಿ ಭಾರತೀಯ ಅಭಿಮಾನಿಗಳು ಹೆಮ್ಮೆಯ ಮಾತನ್ನಾಡಿದ್ದರು. ಸಾಮಾನ್ಯವಾಗಿ ನಟಿಯರು ಇಂತಹ ಚಿತ್ರೋತ್ಸವದಲ್ಲಿ ಪಾಶ್ಚಿಮಾತ್ಯ ಉಡುಗೆ ತೊಟ್ಟು ಬರುತ್ತಾರೆ, ಆದರೆ ಸಾರಾ ಅಲಿ ಖಾನ್ ಮಾತ್ರ ದೇಸಿ ಉಡುಗೆ ತೊಟ್ಟು ಮಿಂಚಿದ್ದರು.
ಚಿತ್ರೋತ್ಸವಕ್ಕೆ 76 ವರ್ಷಗಳ ಇತಿಹಾಸ
ಕೇನ್ಸ್ ಚಿತ್ರೋತ್ಸವ ಶುರುವಾಗಿದ್ದು 76 ವರ್ಷಗಳ ಹಿಂದೆ. ಹೀಗೆ ಸುಮಾರು ಮುಕ್ಕಾಲು ಶತಮಾನಗಳ ಇತಿಹಾಸ ಕೇನ್ಸ್ ಚಿತ್ರೋತ್ಸವಕ್ಕೆ ಇದೆ. 1946ರ ಸೆಪ್ಟೆಂಬರ್ 20ರಂದು ಮೊದಲ ಬಾರಿಗೆ ಕೇನ್ಸ್ ಚಿತ್ರೋತ್ಸವದ ಸಮಾರಂಭ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಸುಮಾರು 76 ವರ್ಷಗಳಿಂದ ಕೇನ್ಸ್ ಚಿತ್ರೋತ್ಸವ ನಡೆದುಕೊಂಡು ಬರುತ್ತಿದೆ. ಕೇವಲ ಸಿನಿಮಾ ಸೆಲೆಬ್ರಿಟಿಗಳು ಮಾತ್ರವಲ್ಲ, ಅಭಿಮಾನಿಗಳಿಗೂ ಕೇನ್ಸ್ ಚಿತ್ರೋತ್ಸವ ಅಂದ್ರೆ ಪ್ರಾಣ. ಯಾಕಂದ್ರೆ ಸಾಕಷ್ಟು ಗಮನ ಸೆಳೆಯುವ ಕೇನ್ಸ್ ಚಿತ್ರೋತ್ಸವದಲ್ಲಿ ನಟ, ನಟಿಯರ ಉಡುಗೆ ಸಖತ್ ಹೈಲೈಟ್.












Click it and Unblock the Notifications