Get Updates
Get notified of breaking news, exclusive insights, and must-see stories!

ಮುಂದಿನ ವರ್ಷ ಮಂಗಳನ ಮೇಲೆ 'ರಷ್ಯಾ' ಮಂಗಗಳ ಸಂಸಾರ

ಮಾಸ್ಕೋ, ಅಕ್ಟೋಬರ್. 28: ಮಂಗಳ ಗ್ರಹದ ಮೇಲೆ, ಮಂಗಳನ ಮೇಲ್ಮೈ ವಾತಾವರಣದ ಮೇಲೆ ವಿವಿಧ ದೇಶಗಳು ನಿರಂತರ ಸಂಶೋಧನೆ ನಡೆಸುತ್ತಲೇ ಇವೆ. ಅದೆಲ್ಲಕ್ಕೂ ಮೀರಿ ರಷ್ಯಾ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.

ಮಂಗಳನ ಅಂಗಳಕ್ಕೆ ಮಂಗಗಳನ್ನು ಕಳಿಸಿ ಜೀವ ಸಂಕುಲ ಬದುಕಲು ಸಾಧ್ಯಾಸಾಧ್ಯತೆಗಳನ್ನು ಎಂದು ಪರೀಕ್ಷಿಸಲು ರಷ್ಯಾ ನಿರ್ಧರಿಸಿದೆ. ವಿಜ್ಞಾನಿಗಳು ನಡೆಸುವ ಎಲ್ಲ ಪ್ರಯೋಗಗಳು ಯಶಸ್ವಿಯಾದಲ್ಲಿ ಮುಂದಿನ 2 ವರ್ಷದಲ್ಲಿ ಮಂಗಳ ಗ್ರಹದಲ್ಲಿ ಮಂಗಗಳು ಇಳಿಯಲಿವೆ.[ಮಂಗಳನ ಅಂಗಳದಲ್ಲಿ ಬುದ್ಧನ ವಿಗ್ರಹ ಇಟ್ಟವರು ಯಾರು?]

Monkeys are on training to land on Mars by Russian Scientists

2017ರಲ್ಲಿ ಮಂಗಳ ಗ್ರಹಕ್ಕೆ 4 ಮಂಗಗಳನ್ನು ಕಳುಹಿಸಲು ರಷ್ಯಾ ತಯಾರಾಗಿದ್ದು ಮಾಸ್ಕೋದಲ್ಲಿರುವ ರಷ್ಯನ್ ಅಕಾಡೆಮಿ ಆಫ್ ಸೈನ್ಸ್ ವಿಜ್ಞಾನಿಗಳು ಮಂಗಗಳಿಗೆ ತರಬೇತಿ ನೀಡಲು ಆರಂಭಿಸಿದ್ದಾರೆ.[ಬಾಹ್ಯಾಕಾಶದಿಂದ ಕಂಡ ಭಾರತ-ಪಾಕಿಸ್ತಾನ ಗಡಿಭಾಗ]

ಬುದ್ಧಿವಂತ ಮಂಗಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ಒಂದೊಂದು ಬಗೆಯ ತರಬೇತಿಗಳನ್ನು ನೀಡಲಾಗುತ್ತಿದೆ. ಮಂಗಗಳು ನೆನಪಿಟ್ಟುಕೊಳ್ಳುವ ಕೆಲ ಕೆಲಸಗಳನ್ನು ನೀಡಲಾಗುತ್ತದೆ. ಕೆಲವೊಮ್ಮೆ ಅದನ್ನೇ ಪುಮರಾವರ್ತನೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಮಂಗಳ ಗ್ರಹಕ್ಕೆ ಜೀವಂತ ಮಂಗಗಳು ಪ್ರಯಾಣ ಬೆಳೆಸಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+