Narendra Modi China Visit: ಭಾರತ & ಚೀನಾ ಮತ್ತಷ್ಟು ಹತ್ತಿರ, ಗಡಿಯಲ್ಲಿ ಪರಿಸ್ಥಿತಿ ಸುಧಾರಣೆಗೆ ಒಪ್ಪಿಗೆ!

ಚೀನಾ & ಭಾರತ ಮತ್ತೆ ತಮ್ಮ ಸಂಬಂಧ ಸುಧಾರಣೆಗೆ ಮುಂದಾಗಿವೆ, ಅಮೆರಿಕ ವಿರುದ್ಧ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವ ಚೀನಾ & ಭಾರತ ತಮ್ಮ ಶಕ್ತಿ ಏನು ಅನ್ನೋದನ್ನ ಕೂಡ ಸೂಕ್ಷ್ಮವಾಗಿ ಜಗತ್ತಿಗೇ ತಿಳಿಸಲು ಮಹತ್ವದ ಸಭೆ ನಡೆಸುತ್ತಿವೆ. ಅದರಲ್ಲೂ ಖುದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ಇದೀಗ ಚೀನಾ ನೆಲಕ್ಕೆ ಹೋಗಿದ್ದು, ಅಮೆರಿಕದ ಕಣ್ಣು ಕೆಂಪಾಗುವಂತೆ ಮಾಡಿದೆ. ಇದರ ಜೊತೆಗೆ ಜಾಗತಿಕವಾಗಿ ಅಮೆರಿಕದ ಶಕ್ತಿ ಇನ್ನಷ್ಟು ಕುಗ್ಗಿ ಹೋಗುವ ಎಲ್ಲಾ ಲಕ್ಷಣಗಳು ಇದೀಗ ಗೋಚರಿಸುತ್ತಿವೆ.

ಅಕ್ಕಪಕ್ಕದಲ್ಲೇ ಇದ್ದರೂ ಚೀನಾ & ಭಾರತದ ನಡುವೆ ದೊಡ್ಡ ಶತ್ರುತ್ವ ಬೆಳೆದು ಹೋಗಿತ್ತು. ಹೀಗಾಗಿಯೇ ಎರಡೂ ದೇಶಗಳು ಪದೇ ಪದೇ ಗಡಿ ಭಾಗದಲ್ಲಿ ಕಿತ್ತಾಡುವ ಘಟನೆಗಳು ನಡೆದಿದ್ದವು. ಆದರೆ ಅಮೆರಿಕದ ಆಟಕ್ಕೆ ತಕ್ಕಪಾಠ ಕಲಿಸಲು ಮುಂದಾಗಿರುವ ಚೀನಾ & ಭಾರತ ಮತ್ತೊಂದು ಶಾಕ್ ಕೊಟ್ಟಿವೆ. ಡೊನಾಲ್ಡ್ ಟ್ರಂಪ್ ಪ್ರಯೋಗ ಮಾಡಿರುವ ತೆರಿಗೆ ಅಸ್ತ್ರಕ್ಕೆ ವಿರುದ್ಧವಾಗಿ ಭಾರತ ಕೂಡ ಹೊಸ ಅಸ್ತ್ರ ಪ್ರಯೋಗವನ್ನ ಮಾಡುತ್ತಿದೆ. ಚೀನಾ ಜೊತೆಗೆ ಕೈಜೋಡಿಸುವ ಮೂಲಕ ತನ್ನ ಶಕ್ತಿ ಏನು ಅನ್ನೋದನ್ನ ತೋರಿಸೋದಕ್ಕೆ ವೇದಿಕೆ ರೆಡಿ ಮಾಡಿಕೊಂಡಿದೆ. ಇಂತಹ ಸಂದರ್ಭದಲ್ಲೇ ಭಾರತವನ್ನು ಹಾಡಿ ಹೊಗಳಿದ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಹೇಳಿದ್ದೇನು ಗೊತ್ತಾ?

Modi Affirms Commitment to Strengthen India-China Relations with Xi Jinping

ಚೀನಾ & ಭಾರತ ಮತ್ತಷ್ಟು ಹತ್ತಿರ!

ಹೌದು, ಇದೀಗ ಪ್ರಧಾನಿ ಮೋದಿ ಅವರ ಚೀನಾ ಭೇಟಿ ಸಮಯದಲ್ಲಿ ಹಲವು ಒಪ್ಪಂದಗಳಿಗೆ ಈ ಎರಡು ದೇಶಗಳು ಒಪ್ಪಿಗೆಯನ್ನು ಸೂಚಿಸಿವೆ. ಪ್ರಮುಖವಾಗಿ ಚೀನಾ & ಭಾರತ ನಡುವಿನ ನೇರ ವಿಮಾನ ಹಾರಾಟ ಕೂಡ ಕೆಲವೇ ದಿನಗಳಲ್ಲಿ ಶುರುವಾಗಲಿದೆ, ಇದರ ಜೊತೆಗೆ ಗಡಿ ಭಾಗದಲ್ಲಿ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲು ಎರಡೂ ದೇಶಗಳ ನಾಯಕರು ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿಯೇ ಇದೀಗ ಚೀನಾ & ಭಾರತ ಮಹತ್ವದ ಸಭೆ ನಡೆಸಿದೆ. ಇದರ ಜೊತೆಗೆ ಪರಸ್ಪರ ವಿಶ್ವಾಸ, ಗೌರವ ಮತ್ತು ಭಾಗವಹಿಸುವಿಕೆಯ ಆಧಾರದ ಮೇಲೆ ನಮ್ಮ ಸಂಬಂಧ ಮುಂದುವರೆಸಲು ನಾವು ಬದ್ಧ ಎಂಬ ಸಂದೇಶವನ್ನು ಭಾರತ ಈಗ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಎದುರು ರವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+