ನಾಪತ್ತೆಯಾಗಿದ್ದ ನೇಪಾಳ ತಾರಾ ಏರ್ ಸಂಸ್ಥೆ ವಿಮಾನ ಪತ್ತೆ!

ಕಠ್ಮಂಡು ಮೇ 29: ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದ ನೇಪಾಳದ ಪ್ರಯಾಣಿಕ ವಿಮಾನವೊಂದು ಭಾನುವಾರ ನಾಪತ್ತೆಯಾಗಿದ್ದು, ಅಲ್ಲಿನ ಮುಸ್ತಾಂಗ್ ಪ್ರದೇಶದ ಕೋವಾಂಗ್‌ನಲ್ಲಿ ಪತ್ತೆಯಾಗಿದೆ.

ಮುಂಬೈನ ಅಶೋಕ್ ತ್ರಿಪಾಠಿ, ಧನುಶ್ ತ್ರಿಪಾಠಿ, ರಿತಿಕಾ ತ್ರಿಪಾಠಿ ಮತ್ತು ವೈಭವಿ ತ್ರಿಪಾಠಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ನೇಪಾಳದ ತಾರಾ ಏರ್ ಸಂಸ್ಥೆಗೆ ಸೇರಿದ ಚಿಕ್ಕ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇವರೊಂದಿಗೆ ಇಬ್ಬರು ಜರ್ಮನ್‌ ಪ್ರಜೆಗಳು ಮತ್ತು 13 ಮಂದಿ ನೇಪಾಳಿ ಪ್ರಯಾಣಿಕರು ಹಾಗೂ ಮೂವರು ನೇಪಾಳಿ ವಿಮಾನ ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ತಾರಾ ಏರ್ ಸಂಸ್ಥೆಯ ವಕ್ತಾರ ಸುದರ್ಶನ್ ಬರ್ತೌಲಾ ಮಾಹಿತಿ ನೀಡಿದ್ದಾರೆ.

ಪೋಖರಾ ವಿಮಾನ ನಿಲ್ದಾಣದಿಂದ ಟೇಕಾಫ್:
ನೇಪಾಳದ ಪ್ರವಾಸಿ ತಾಣ ಪೋಖರಾ ನಗರದ ವಿಮಾನ ನಿಲ್ದಾಣದಿಂದ ತಾರಾ ಏರ್ ಸಂಸ್ಥೆಗೆ ಸೇರಿದ 9ಎನ್-ಎಇಟಿ ವಿಮಾನವು ಭಾನುವಾರ ಬೆಳಗ್ಗೆ 9.50ಕ್ಕೆ ಟೇಕಾಫ್ ಆಯಿತು. ವಿಮಾನವು ಎರಡು ಎಂಜಿನ್‌ಗಳನ್ನು ಹೊಂದಿದೆ. ನಂತರ ಕಣಿವೆಗಳಿಂದ ಕೂಡಿದ ಮುಸ್ತಾಂಗ್ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲೇ ಸಂಪರ್ಕ ಕಡಿತಗೊಂಡಿದೆ. ವಿಮಾನ ಟೇಕ್ ಆಫ್ ಆದ 15 ನಿಮಿಷದಲ್ಲೇ ನಿಯಂತ್ರಣಾ ಕೊಠಡಿಯೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ತಾರಾ ಏರ್ ಸಂಸ್ಥೆಯ ವಕ್ತಾರರು ತಿಳಿಸಿದರು.

Missing Nepals Tara Air plane found

ವಿಮಾನದಲ್ಲಿ ಇದ್ದ ಇತರ ಪ್ರಯಾಣಿಕರ ವಿವರ ಇಂತಿದೆ:
ಇಂದ್ರ ಬಹದ್ದೂರ್ ಗೋಲೆ, ಪುರುಷೋತ್ತಮ ಗೋಲೆ, ರಾಜನ್ ಕುಮಾರ್ ಗೋಲೆ, ಮಿಕ್ ಗ್ರಾಟ್ ಬಸಂತ್ ಲಾಮಾ, ಗಣೇಶ್, ನಾರಾಯಣ ಶ್ರೇಷ್ಠ, ರವೀನಾ ಶ್ರೇಷ್ಠ, ರಶ್ಮಿ ಶ್ರೇಷ್ಠ, ರೋಜಿನಾ ಶ್ರೇಷ್ಠ, ಪ್ರಕಾಶ್ ಸುನುವಾರ್, ಮಕರ ಬಹುದ್ದೂರ್ ತಮಾಂಗ್, ರಮ್ಯಾ ತಮಾಂಗ್, ಸುಕುಮಯ ತಮಾಂಗ್, ತುಲ್ಸಾವಿ ತಮಾಂಗ್ ಮತ್ತು ತುಲ್ಸಾಯ ತಮಾಂಗ್ ಅವರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಜತೆಗೆ ವಿಮಾನ ಸಿಬ್ಬಂದಿಗಳಾದ ಕ್ಯಾಪ್ಟನ್ ಪ್ರಭಾಕರ್ ಘಿಮಿರೆ, ಸಹ ಪೈಲಟ್ ಉತ್ಸವ್ ಪೋಖರೆಲ್ ಮತ್ತು ಗಗನಸಖಿ ಕಿಸ್ಮಿ ಥಾಪಾ ವಿಮಾನದಲ್ಲಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಮಾನವು ಬೆಳಗ್ಗೆ 10.15ಕ್ಕೆ ನೇಪಾಳದ ಜೋಮ್ ಸಮ್ ವಿಮಾನ ನಿಲ್ದಾಣಕ್ಕೆ ತಲುಪಬೇಕಿತ್ತು. ಪೋಖರಾ-ಜೋಮ್ ಸಮ್ ನಡುವಿನ ಗೋರೆಪಾನಿ ಪ್ರದೇಶದಲ್ಲಿ ನಿಯಂತ್ರಣಾ ಕೊಠಡಿಯೊಂದಿಗೆ ವಿಮಾನದ ಸಂಪರ್ಕ ಕಡಿತಗೊಂಡಿತು ಎಂದು ಮೂಲಗಳು ತಿಳಿಸಿವೆ.

Missing Nepals Tara Air plane found

ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ:
"ನಾಲ್ವರು ಭಾರತೀಯರು ಸೇರಿದಂತೆ 22 ಮಂದಿ ಇದ್ದ ನೇಪಾಳದ ತಾರಾ ಏರ್‌ ವಿಮಾನ ಸಂಸ್ಥೆಗೆ ಸೇರಿದ ವಿಮಾನವು ಭಾನುವಾರ ಬೆಳಗ್ಗೆ 9.55 ಕ್ಕೆ ಟೇಕ್ ಆಫ್ ಆಗಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಪತ್ತೆ ಕಾರ್ಯ ಹಾಗೂ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. ರಾಯಭಾರ ಕಚೇರಿಯು ವಿಮಾನದಲ್ಲಿದ್ದ ಭಾರತೀಯ ಕುಟುಂಬದ ಸಂಪರ್ಕದಲ್ಲಿದೆ. ತುರ್ತು ಕರೆಗಾಗಿ ಸಂಪರ್ಕಿಸಿ: 977-9851107021,'' ಎಂದು ನೇಪಾಳದ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.

Recommended Video

      IPL ಫೈನಲ್ ಪಂದ್ಯದಲ್ಲಿ Hardik Pandya ಗೆ ಶರಣಾದ Sanju Samson ಪಡೆ |#cricket | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+