Get Updates
Get notified of breaking news, exclusive insights, and must-see stories!

ಮಂಗಳನ ಅಂಗಳದಲ್ಲಿ ನೀರಿನ ಅಂಶ ಪತ್ತೆ

ಲಂಡನ್‌ ಏ. 14: ಮಂಗಳನ ಮೇಲ್ಪದರದಲ್ಲಿ ನೀರಿನ ಅಂಶ ಪತ್ತೆಯಾಗಿದೆ ಎಂದು ನಾಸಾದ ಕ್ಯೂರಿಯಾಸಿಟಿ ರೋವರ್ ಹೇಳಿದೆ. ಮಾನವನ ವಾಸದ ಸಾಧ್ಯತೆ ಬಗ್ಗೆ ಸಮಗ್ರ ಅಧ್ಯಯನ ನಡೆಸುತ್ತಿರುವ ಕ್ಯೂರಿಯಾಸಿಟಿ ಮಹತ್ವದ ಅಂಶ ಬಹಿರಂಗ ಮಾಡಿದೆ.

ಮೊದಲು ಮಂಗಳ ಗ್ರಹದಲ್ಲಿ ಅಪಾರ ಪ್ರಮಾಣದ ಮಂಜುಗಡ್ಡೆ ಪದರಗಳಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ ಇದೀಗ ದ್ರವ ರೂಪದಲ್ಲಿಯೇ ನೀರು ಪತ್ತೆಯಾಗಿದೆ. ಮಣ್ಣಿನಲ್ಲಿ ನೀರಿನ ಅಂಶ ಪತ್ತೆಯಾಗಿದ್ದು ಇದು ಅಪಾರ ಪ್ರಮಾಣದ ಲವಣಾಂಶದಿಂದ ಕೂಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.[ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ]

nasa

ಮಂಗಳನಲ್ಲಿರುವ ಮಂಜುಗಡ್ಡೆ ಪ್ರಮಾಣ 15 ಸಾವಿರ ಕೋಟಿ ಕ್ಯುಬಿಕ್‌ ಮೀಟರ್‌ಗಳಷ್ಟಾಗಬಹುದು. ಮಂಗಳ ಮೇಲ್ಮೈಯಲ್ಲಿ ಇದನ್ನು ಹರಡಿದರೆ ಹೊಸ ಪದರವನ್ನೇ ಸೃಷ್ಟಿಸಬಹುದು ಎಂದು ಹೇಳಿದ್ದಾರೆ.[ಮಂಗಳನ ಅಂಗಳದಲ್ಲಿ ಕೆರೆ ಕಂಡ ಕ್ಯೂರಿಯಾಸಿಟಿ]

ಮಂಜುಗಡ್ಡೆ ಪದರಗಳ ಮೇಲೆ ದಪ್ಪ ಧೂಳಿನ ಪದರ ಇದೆ. ಈ ಪದರ ಮೇಲಿನಿಂದ ನಮಗೆ ಕಾಣುತ್ತಿದೆ. ಆದರೆ ಕೆಳಭಾಗದಲ್ಲಿ ಮಂಜುಗಡ್ಡೆಯಿದೆ. ಮಣ್ಣಿನಲ್ಲೂ ನೀರಿನ ಅಂಶ ಹೇರಳವಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ದೊಡ್ಡ ಸರೋವರವೊಂದು ಮಂಗಳನ ಮೇಲ್ಮೈ ಮೇಲಿತ್ತು ಎಂಬ ಕುರಿತಾಗಿಯೂ ದಾಖಲೆಗಳು ಲಭ್ಯವಾಗಿವೆ.[ರ್ರಿ.. ನಂಗೂ ಮಂಗಳ ಗ್ರಹಕ್ಕ ಕರಕೊಂಡ ಹೋಗರಿ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+