ಲಂಡನ್ ನ ಮಸೀದಿಯೊಂದರ ಬಳಿ ಭಯೋತ್ಪಾದಕ ದಾಳಿ: ಓರ್ವ ಸಾವು
ಲಂಡನ್, ಜೂನ್ 19: ಲಂಡನ್ನಿಗಂತೂ ಇತ್ತೀಚೆಗೆ ಸಾಲು ಸಾಲು ಆಘಾತ! ಸಂಗೀತ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟ, ನಂತರ ಅಪಾರ್ಟ್ ಮೆಂಟ್ ವೊಂದಕ್ಕೆ ಬೆಂಕಿಬಿದ್ದ ಪ್ರಕರಣ ಸೇರಿದಂತೆ ಲಂಡನ್ನಿನ ಜನರು ಆಘಾತಕ್ಕಿಂತ ಚೇತರಿಸಿಕೊಳ್ಳುವ ಮೊದಲೇ ಇಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 12: 20 ರ ಸಮಯದಲ್ಲಿ ಲಂಡನ್ನಿನ ಫಿನ್ಸ್ ಬರಿ ಪಾರ್ಕ್ ಮಸೀದಿ ಬಳಿಯ ಸೆವೆನ್ ಸಿಸ್ಟರ್ಸ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ವ್ಯಾನ್ ಹರಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, 8 ಜನರು ಗಂಭೀರ ಗಾಯಗೊಡಿದ್ದಾರೆ.

ಇದೊಂದು ಭಯೋತ್ಪಾದಕ ಕೃತ್ಯವೆಂದು ಅಂದಾಜಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ರಂಜಾನ್ ಉಪವಾಸದ ನಂತರ ಉದ್ದೇಶಪೂರ್ವಕವಾಗಿಯೇ ಭಕ್ತರ ಮೇಲೆ ವ್ಯಾನ್ ಹರಿಸಲಾಗಿದೆ ಎನ್ನಲಾಗುತ್ತಿದ್ದು, ಮತ್ತಷ್ಟು ತನಿಖೆ ನಡೆಯುತ್ತಿದೆ.












Click it and Unblock the Notifications