ಪೋರ್ಚುಗಲ್, ಸ್ಪೇನ್ ನಲ್ಲಿ ಕಾಡ್ಗಿಚ್ಚಿಗೆ ಹಸುಳೆ ಸೇರಿ 32 ಮಂದಿ ಬಲಿ
ಲಿಸ್ಬನ್, ಅಕ್ಟೋಬರ್ 17: ತಬುವಾ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನ ಭೀಕರತೆಗೆ ಪೋರ್ಚುಗಲ್ ಹಾಗೂ ಸ್ಪೇನ್ ನ ಕೆಲ ಭಾಗದ ಜನತೆ ತತ್ತರಿಸಿದ್ದಾರೆ.
ಲಿಸ್ಬನ್‌ನಿಂದ 200 ಕಿ.ಮೀ ದೂರದಲ್ಲಿರುವ ತಬುವಾ ಅರಣ್ಯ ಪ್ರದೇಶದಲ್ಲಿ ಬೆಂಕಿ, ದಟ್ಟವಾದ ಹೊಗೆ ಆವರಿಸಿದ್ದು, ಏಳು ಜನರು ನಾಪತ್ತೆಯಾಗಿದ್ದು, ಒಂದು ತಿಂಗಳ ಮಗು ಸೇರಿದಂತೆ 32 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಸುಮಾರು 56ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 16 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೋರ್ಚುಗಲ್‌ನ ರಾಷ್ಟ್ರೀಯ ನಾಗರಿಕ ರಕ್ಷಣೆ ಪ್ರಾಧಿಕಾರ ಹೇಳಿದೆ.












Click it and Unblock the Notifications