ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿ ಹತ್ಯೆ
ಮಂಗಳೂರು ಮೂಲದ ದಂಪತಿಯನ್ನು ಅಮೆರಿಕದ ಸಾನ್ ಜೋಸ್ ಎಂಬಲ್ಲಿ ದುಷ್ಕರ್ಮಿಯೋರ್ವ ಗುಂಡಿಕ್ಕಿ ಕೊಂದ ಘಟನೆ ಮೇ 4 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಮೆರಿಕ, ಮೇ 06: ಮಂಗಳೂರು ಮೂಲದ ದಂಪತಿಯನ್ನು ಅಮೆರಿಕದ ಸಾನ್ ಜೋಸ್ ಎಂಬಲ್ಲಿ ದುಷ್ಕರ್ಮಿಯೋರ್ವ ಗುಂಡಿಕ್ಕಿ ಕೊಂದ ಘಟನೆ ಮೇ 4, ಗುರುವಾರದಂದು ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರೇಮ ವೈಫಲ್ಯವೇ ಘಟನೆಗೆ ಕಾರಣ ಎನ್ನಲಾಗಿದೆ

ಪುತ್ರಿಯನ್ನು ನೋಡುವುದಕ್ಕೆಂದು ಅಮೆರಿಕಕ್ಕೆ ತೆರಳಿದ್ದ ಮಂಗಳೂರು ಮೂಲದ ನರೇನಾ ಪ್ರಭು ಮತ್ತು ರಾಯಲ್ ಸಿಕ್ವೇರಾ ಪ್ರಭು ಎಂಬುವವರೇ ಕೊಲೆಯಾದ ದುರ್ದೈವಿಗಳು.

ಪುತ್ರಿಯ ಮಾಜಿ ಪ್ರಿಯಕರ ಮಿರ್ಜಾ ಟಾಟ್ಲಿಕ್(24) ಎಂಬುವವನೇ ಈ ಕೃತ್ಯ ಮಾಡಿದ್ದು, ಪೊಲೀಸರ ಗುಂಡಿಗೆ ಟಾಟ್ಲಿಕ್ ಬಲಿಯಾಗಿದ್ದಾನೆಂಬ ಮಾಹಿತಿ ಲಭ್ಯವಾಗಿದೆ. ಟಾಟ್ಲಿಕ್ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ












Click it and Unblock the Notifications