ಒಂದು ವರ್ಷ ಬಿಟ್ಟಿಯಾಗಿ ಕೆಎಫ್ ಸಿ ತಿಂದ ಭೂಪ, ಫನ್ನಿ ಟ್ವೀಟ್ಸ್

ಕೇಪ್ ಟೌನ್, ಮೇ 14: ಕೆಎಫ್ ಸಿ ಬ್ರ್ಯಾಂಡ್ ನ ಮುಖ್ಯ ಕಚೇರಿಯ ಉದ್ಯೋಗಿಗೆ ತಿಳಿಯದಂತೆ ಆತನ ಹೆಸರಿನಲ್ಲಿ ವಿದ್ಯಾರ್ಥಿಯೊಬ್ಬ ಒಂದು ವರ್ಷ ಕಾಲ ಪ್ರತಿ ದಿನ ಕೆಎಫ್ ಸಿ ಉತ್ಪನ್ನಗಳನ್ನು ಬಿಟ್ಟಿಯಾಗಿ ತಿಂದು ತೇಗಿರುವ ಘಟನೆ ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ಕ್ವಾಜೂಲು ನಟಾಲ್ ಪ್ರಾಂತ್ಯದ ವಿಶ್ವವಿದ್ಯಾಲಯದ ವಿದ್ಯಾರ್ಥಿಯು ನೇರವಾಗಿ ಕಾಲೇಜ್ ಬಳಿಯ ಕೆಎಫ್ ಸಿ ಮಳಿಗೆಯಿಂದಲೇ ತನಗೆ ಬೇಕಾದ ಆಹಾರ ಪಡೆಯುತ್ತಿದ್ದ. ಕೆಎಫ್ ಸಿ ಮುಖ್ಯ ಕಚೇರಿಯಿಂದ ಬಂದಿದ್ದೇನೆ. ಆಹಾರದ ಗುಣಮಟ್ಟ ಪರೀಕ್ಷಿಸಬೇಕು ಎಂದು ಹೇಳಿ ನಂಬಿಸಿ, ಚೆನ್ನಾಗಿ ತಿನ್ನುತ್ತಿದ್ದ ಎಂದು ತಿಳಿದು ಬಂದಿದೆ.

Man arrested for eating free KFC for 1 year; Twitterati calls him a legend

ಈ ಬಗ್ಗೆ ಕೀನ್ಯಾದ ಪತ್ರಕರ್ತ ಟೆಡ್ಡಿ ಯೂಗೆನ್ ಅವರಿಗೆ ತಿಳಿದು ಬಂದಿದೆ. ಅವರು ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಷಯ ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಒಂದು ವರ್ಷಗಳ ಕಾಲ ಬಿಟ್ಟಿಯಾಗಿ ಕೆಎಫ್ ಸಿ ತಿನ್ನುತ್ತಿದ್ದ ಎಂದು ಟ್ವೀಟ್ ಮಾಡಿದ್ದಾರೆ. ಬಂಧಿತನ ಹೆಸರನ್ನು ಬಹಿರಂಗಪಡಿಸಿಲ್ಲ. 27ವರ್ಷ ವಯಸ್ಸು ಎಂದು ತಿಳಿದು ಬಂದಿದೆ. ಆದರೆ, ಬಂಧಿತನ ಬಗ್ಗೆ ನೆಟಿಜನ್ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+