ಥಾಯ್ಲೆಂಡ್ ಗುಹೆ ಸಾಹಸ: ಕೊಂಚ ತಡವಾಗಿದ್ದರೂ ಎದುರಾಗುತ್ತಿತ್ತು ಅಪಾಯ
ಬೆಂಗಳೂರು, ಜುಲೈ, 11: ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿದ್ದ ಮಕ್ಕಳನ್ನು ಮತ್ತು ಕೋಚ್‌ಅನ್ನು ಹೊರತಂದ ಕೆಲವೇ ಗಂಟೆಯಲ್ಲಿ ನೀರನ್ನು ಹೊರಹಾಕುವ ಪಂಪ್ ಕೈಕೊಟ್ಟಿತ್ತು.
ಒಂದು ವೇಳೆ ಇದು ಬಾಲಕರನ್ನು ರಕ್ಷಿಸುವ ಸಂದರ್ಭದಲ್ಲಿ ಆಗಿದ್ದರೆ, ಭಾರಿ ಅಪಾಯ ಎದುರಾಗುವ ಸಾಧ್ಯತೆ ಇತ್ತು.
ಗುಹೆಯಲ್ಲಿ ತುಂಬಿಕೊಳ್ಳುತ್ತಿದ್ದ ಕೆಸರು ನೀರನ್ನು ಹೊರಹಾಕುವ ಕಾರ್ಯವನ್ನು ರಕ್ಷಣಾ ಕಾರ್ಯತಂಡ ನಡೆಸುತ್ತಿತ್ತು. ಬಾಲಕರನ್ನು ಯಶಸ್ವಿಯಾಗಿ ಹೊರಕ್ಕೆ ರವಾನಿಸಿದ ಬಳಿಕವೂ ಗುಹೆಯಲ್ಲಿನ ನೀರನ್ನು ಹೊರಹಾಕಿ ಸ್ವಚ್ಛಗೊಳಿಸುವ ಕಾರ್ಯವನ್ನು ಮುಂದುವರಿಸಲಾಗಿತ್ತು.
ಆಗ, ನೀರು ಹೊರಹಾಕುವ ಮುಖ್ಯ ಪಂಪ್ ಕೈಕೊಟ್ಟಿದ್ದರಿಂದ ಗುಹೆಯೊಳಗೆ ಮತ್ತೆ ನೀರಿನ ಮಟ್ಟ ವೇಗವಾಗಿ ಹೆಚ್ಚತೊಡಗಿತು. ಆಗ ಈ ತಂಡ ಗುಹೆಯ 1.5 ಕಿ.ಮೀ,ಯಷ್ಟು ಒಳಭಾಗದಲ್ಲಿತ್ತು.
| Array |
'ಚೇಂಬರ್ ಥ್ರೀ' ಎಂಬ ನೆಲೆ
ಗುಹೆಯಲ್ಲಿನ ನೆಲೆ 'ಚೇಂಬರ್ ಥ್ರೀ'ನಲ್ಲಿದ್ದ ಮುಳುಗುತಜ್ಞರಿಗೆ ಗುಹೆಯ ಒಳಗಿನಿಂದ ಜೋರಾಗಿ ಕಿರುಚುವ ಸದ್ದು ಕೇಳಿಸಿತು. ಜತೆಗೆ, ತಲೆಗೆ ಕಟ್ಟಿಕೊಂಡ ಚಾರ್ಟ್ ಬೆಳಕು ಹೊತ್ತ ದೇಹಗಳು ಒಣಪ್ರದೇಶದತ್ತ ನುಗ್ಗಲು ಓಡುತ್ತಿರುವುದು ಕಾಣಿಸಿತು.
ಒಳಗೆ ಸಿಲುಕಿದ್ದ ಬಾಲಕರಿಗೆ ಒಂದು ವಾರದಿಂದ ನೆರವು ನೀಡುತ್ತಿದ್ದ ಥಾಯ್ ನೌಕಾಪಡೆಯ ಮೂವರು ಸಿಬ್ಬಂದಿ ಮತ್ತು ಒಬ್ಬ ವೈದ್ಯರನ್ನು ಕೂಡಲೇ ಗುಹೆಯಿಂದ ಹೊರಕ್ಕೆ ಕರೆತರಲಾಯಿತು.
'ವೈಲ್ಡ್ ಬೋರ್' ಫುಟ್ಬಾಲ್ ತಂಡದ ಬಾಲಕರನ್ನು ರಕ್ಷಿಸಲು ಮೂರು ಮಹಾಧೈರ್ಯಶಾಲಿ ರಕ್ಷಣಾ ಕಾರ್ಯಪಡೆಗಳು ಭಾನುವಾರ ಬೆಳಗಿನಿಂದ ಕಾರ್ಯನಿರತವಾಗಿದ್ದವು.
19 ಮುಳುಗುತಜ್ಞರ ತಂಡ ಸುಮಾರು 3.2 ಕಿ.ಮೀ ದೂರದವರೆಗೆ ಕೆಸರು ಮಿಶ್ರಿತ ನೀರಿನೊಳಗೆ ಸಾಗಿ ಮಕ್ಕಳು ಹಾಗೂ ಕೋಚ್‌ಅನ್ನು ರಕ್ಷಿಸಿತ್ತು.
| Array |
ಕೆಸರು ತೆಗೆಯಲೇ ಒಂದು ವಾರ
ಆರಂಭದಲ್ಲಿ ಗುಹೆಯ ದ್ವಾರದಿಂದ ಒಳಭಾಗಕ್ಕೆ ತೆರಳುವುದಕ್ಕಾಗಿಯೇ ನಿತ್ಯ ನಾಲ್ಕೈದು ಗಂಟೆ ಬೇಕಾಗುತ್ತಿತ್ತು. ಆದರೆ, ಸಲಿಕೆ, ಗುದ್ದಲಿಗಳನ್ನು ಬಳಸಿ ಕೆಸರು ತೆಗೆದು ಹೊರಹಾಕುವ ಒಂದು ವಾರದ ಕೆಲಸದ ಬಳಿಕ ಒಂದು ಗಂಟೆಯೊಳಗೇ ಅಲ್ಲಿಗೆ ತಲುಪುವಂತೆ ಮಾಡಲಾಗಿತ್ತು.
ಆಸ್ಟ್ರೇಲಿಯಾದ ಮುಳುಗುತಜ್ಞರು ತಮ್ಮ ಜತೆ 46 ಕೆ.ಜಿ. ತೂಕದ ಡೈವಿಂಗ್ ಗೇರ್ಅನ್ನು ಕೊಂಡೊಯ್ದಿದ್ದರು. ಅದರಲ್ಲಿ ರೇಡಿಯೋ, ಆಮ್ಲಜನಕದ ಸಿಲಿಂಡರ್‌ಗಳು ಮತ್ತು ಇತರೆ ಉಪಕರಣಗಳು ಇದ್ದವು. ಆದರೆ, ಅವುಗಳು ತುಂಬಾ ದೊಡ್ಡದಾಗಿದ್ದರಿಂದ ಮೂರನೇ ಚೇಂಬರ್‌ನಾಚೆ ಸಾಗಿಸಲು ಸಾಧ್ಯವಾಗಲಿಲ್ಲ.
| Array |
ಮೀಟರ್‌ಗೂ ಚಿಕ್ಕ ಗಾತ್ರದ ಕಿಂಡಿ
ಒಂದು ಮೀಟರ್‌ಗೂ ಚಿಕ್ಕ ಗಾತ್ರದ ಕಿಂಡಿಯೊಳಗಿನಿಂದ ಆ ಸಾಧನಗಳನ್ನು ಹೊತ್ತುಕೊಂಡು ಮೂವರು ಒಳಗೆ ಪ್ರವೇಶಿಸುವುದು ಸಾಧ್ಯವಿರಲಿಲ್ಲ.
ಪರಿಣತ ಮುಳುಗುತಜ್ಞರು ಮತ್ತು ಬಾಲಕರು ಉಸಿರಾಟದ ಸಿಲಿಂಡರ್‌ಗಳು ಮತ್ತು ಇತರೆ ಸಾಧನಗಳನ್ನು ಬೆನ್ನಿನ ಬದಲು ದೇಹದ ಪಕ್ಕಕ್ಕೆ ಕಟ್ಟಿಕೊಂಡು ಸಾಗಬೇಕಾಗಿತ್ತು.
|
ನಾಲ್ಕು ಭಾಷೆ ಬಲ್ಲ ಬಾಲಕ
ಥಾಯ್ ಗುಹೆಯೊಳಗೆ ಸಿಲುಕಿದ್ದ ಹದಿಮೂರು ಮಂದಿಯ ಪೈಕಿ ಅದುಲ್ ಎಂಬ 14 ವರ್ಷ ಬಾಲಕನಿಗೆ ಒಟ್ಟು ನಾಲ್ಕು ಭಾಷೆಗಳು ತಿಳಿದಿವೆ. ಗುಹೆಯಲ್ಲಿ ಸಿಲುಕಿದ್ದವರ ಪೈಕಿ ನಾಲ್ಕು ಭಾಷೆಗಳನ್ನು ಬಲ್ಲ ಏಕೈಕ ಬಾಲಕ ಆತ. ತಮ್ಮನ್ನು ರಕ್ಷಿಸಲು ಬಂದ ತಂಡದೊಂದಿಗೆ ಇಂಗ್ಲಿಷ್‌ನಲ್ಲಿ ಸಂವಹಿಸುವ ಮೂಲಕ ಆತ ಎಲ್ಲರಿಗೂ ನೆರವಾಗಿದ್ದ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications