ಇಮ್ರಾನ್ ಖಾನ್ ಬೆಂಬಲಿಗರಿಗೆ ಬಿಡುಗಡೆ ಭಾಗ್ಯ!
ಲಾಹೋರ್: ಮತ್ತೊಮ್ಮೆ ಅರೆಸ್ಟ್ ಆಗಿ ಕಂಬಿ ಎಣಿಸುವ ಭಯದಲ್ಲಿರುವ ಇಮ್ರಾನ್ ಖಾನ್‌ಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. ಪಾಕಿಸ್ತಾನದಲ್ಲಿ ಗಲಾಟೆ ಮಾಡಿದ್ದ ಬೆಂಬಲಿಗರನ್ನ ಬಿಡುಗಡೆ ಮಾಡಲು ಲಾಹೋರ್ ಹೈಕೋರ್ಟ್ ಆದೇಶಿಸಿದ್ದು, 120ಕ್ಕೂ ಹೆಚ್ಚು ಖಾನ್ ಬೆಂಬಲಿಗರು ರಿಲೀಸ್ ಆಗಲಿದೆ. ಆದ್ರೆ ಇವರ ಮೇಲೆ ಭಯೋತ್ಪಾದನೆ ಆರೋಪ ಇರುವಾಗ ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ಕಾಡ್ತಿದೆ.
ಪಾಕಿಸ್ತಾನದಲ್ಲಿ ನ್ಯಾಯಾಂಗ ಒಂದು ತೀರ್ಪು ನೀಡಿದರೆ, ಸರ್ಕಾರ ಇನ್ನೊಂದು ನಿರ್ಧಾರ ಮಾಡುತ್ತಿದೆ. ಇದು ಪಾಕ್‌ನಲ್ಲಿ ಏನೂ ಸರಿಯಿಲ್ಲ ಎಂಬುದನ್ನ ಸಾರಿ ಸಾರಿ ಹೇಳುತ್ತಿದೆ. ಅದರಲ್ಲೂ ಉಗ್ರರ ವಿಚಾರದಲ್ಲಿ ಅಲ್ಲಿನ ಕೋರ್ಟ್ ಒಂದು ತೀರ್ಪು ನೀಡಿದ್ರೆ, ಪೊಲೀಸರು ಮತ್ತು ಸರ್ಕಾರ ಇನ್ನೊಂದು ರೀತಿ ನಡೆದುಕೊಳ್ಳುತ್ತಿದೆ. ಈ ಲೆಕ್ಕಾಚಾರದಲ್ಲಿ ಯಾರನ್ನ ಉಗ್ರರು, ಯಾರನ್ನ ನಾಯಕರು ಅಂತಾ ಕರೆಯೋದೆ ಗೊಂದಲ ಸೃಷ್ಟಿಸಿದೆ.

ಉಗ್ರರನ್ನೇ ಹೊರಗೆ ಬಿಡಲು ಹೇಳಿದ್ರಾ?
ಅಂದಹಾಗೆ ಮೊನ್ನೆಯಷ್ಟೇ ಇಮ್ರಾನ್ ಮನೆ ಒಳಗೆ 40 ಉಗ್ರರು ಅಡಗಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಕಾರಣಕ್ಕೆ ಪಾಕ್‌ನ ಪಂಜಾಬ್ ಪ್ರಾಂತ್ಯದ ಸಾವಿರಾರು ಪೊಲೀಸರು ಇಮ್ರಾನ್ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿಯ ವೇಳೆ 8 ಉಗ್ರರು ಲಾಕ್ ಆಗಿದ್ರು. ಇವರೆಲ್ಲಾ ಮೇ 9ರ ನಂತರ ಪಾಕಿಸ್ತಾನದಲ್ಲಿ ಗಲಾಟೆ ಮಾಡಿದ್ದರು ಎಂಬ ಆರೋಪ ಇತ್ತು. ಆದರೆ ಇದೀಗ ಭಯೋತ್ಪಾದನೆ ಆರೋಪ ಹೊತ್ತವರನ್ನೇ ರಿಲೀಸ್ ಮಾಡಲು ಪಾಕ್ ಹೈಕೋರ್ಟ್ ಆದೇಶ ನೀಡಿದೆ.
ಇಮ್ರಾನ್ ಮನೆಯಲ್ಲಿ ಉಗ್ರರು?
ಪಂಜಾಬ್ ಪೊಲೀಸರು ಇಮ್ರಾನ್ ಖಾನ್‌ನ ಮನೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದ್ದು ಆಘಾತಕಾರಿ ಸಂಗತಿ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಸಿ, 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಮಾಡಿರುವ ಉಗ್ರರ ಪಡೆ ಖಾನ್ ಮನೆಯಲ್ಲೇ ಜಾಗ ಪಡೆದಿತ್ತು. ಹಿಂಸಾಚಾರ ನಡೆಸಿದ್ದವರಿಗೆ ಇಮ್ರಾನ್ ಮನೆಯ ಕಾಂಪೌಂಡ್ ಆವರಣದಲ್ಲಿ ಟೆಂಟ್ ಹಾಕಿ, ರಾಜಾಥಿತ್ಯ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅಲರ್ಟ್ ಆದ ಪಂಜಾಬ್ ಪೊಲೀಸರು ವಿಡಿಯೋ ಮಾಡಿದ್ದಾರೆ. ಆದ್ರೆ ಈಗ ಪೊಲೀಸ್ ಪಡೆಗೆ ಶಾಕ್ ಸಿಕ್ಕಿದೆ, ಲಾಹೋರ್ ಹೈಕೋರ್ಟ್ ಉಲ್ಟಾ ತೀರ್ಪು ಕೊಟ್ಟಿದೆ.

ಗನ್ ಹಿಡಿದು ನುಗ್ಗಿದ ಪೊಲೀಸ್ ಪಡೆ
ಜಮಾನ್ ಪಾರ್ಕ್ ಬಳಿ ಯಾವುದೇ ಸಮಯದಲ್ಲಿ ಹಿಂಸಾಚಾರ ಸ್ಫೋಟವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪೊಲೀಸ್ ಪಡೆ ಶಸ್ತ್ರಸಜ್ಜಿತರಾಗಿ ಸಿದ್ಧವಾಗಿದ್ದಾರೆ. ಇಮ್ರಾನ್ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಬಂದ್ ಮಾಡಲಾಗಿದೆ. ಸ್ಥಳಗಳಲ್ಲಿ ಜಾಮರ್ ಅಳವಡಿಸಲಾಗಿದೆ. ಪೊಲೀಸರು ಕೆಲ ಶಂಕಿತ ಉಗ್ರರನ್ನು ಬಂಧೀಸಿದ್ದು, ಈ ಪೈಕಿ ಹಲವರು ಉಗ್ರರು ಎಂದು ಆರೋಪಿಸಲಾಗಿದೆ. ಆದರೆ ಇಮ್ರಾನ್ ಖಾನ್ ಪಕ್ಷದ ನಾಯಕರು ಈ ಆರೋಪ ಅಲ್ಲಗಳೆದಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ಪಿತೂರಿ?
ಈಗಾಗಲೇ ಪಾಕಿಸ್ತಾನ ಸೇನೆ & ಪಾಕಿಸ್ತಾನ ಕೇಂದ್ರಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಹಲವು ಪಿತೂರಿ ಮಾಡಿದೆ. ಅದರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆಯ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೇ ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ತಂತ್ರ ಅಡಗಿರಬಹುದು. ಹೀಗೆ ಪಾಕಿಸ್ತಾನ ತಾನು ಎಂತಹ ದೇಶ ಅನ್ನೋದನ್ನ ಮತ್ತೊಮ್ಮೆ ಜಗತ್ತಿಗೇ ತೋರಿಸುತ್ತಿದೆ.

ಒಟ್ನಲ್ಲಿ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಅನ್ನೋದು ಬಹುಶಃ ಅಲ್ಲಿನ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಇಷ್ಟೆಲ್ಲಾ ಗೊಂದಲಗಳ ನಡುವೆ ಉಗ್ರರು ಮಾತ್ರ ಗಡಿ ಭಾಗದಲ್ಲಿ ಬೇರೆ ಬೇರೆ ದೇಶಗಳಿಗೆ ಕಿರುಕುಳ ನೀಡುತ್ತಾ ಹಾಯಾಗಿ ಇದ್ದಾರೆ. ಆದರೆ ಪಾಕ್ ಸರ್ಕಾರ ಮಾತ್ರ ತನ್ನೊಳಗೆ ಶಾಂತಿ ಕಾಪಾಡಿಕೊಳ್ಳಲು ಆಗದೆ ಪರದಾಡುತ್ತಿರುವುದು ವಿಪರ್ಯಾಸವೇ ಸರಿ.












Click it and Unblock the Notifications