ಟೊಮೆಟೊ ಎಸೆಯೋದ್ರಲ್ಲೂ ಅದೇನ್‌ ಸುಖವೋ!

ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಸ್ಪೇನ್‌ ದೇಶದ ಬ್ಯುನೋಲ್ ಎಂಬಲ್ಲಿ 'ಲಾ ಟೊಮೆಟಿನಾ' ಎಂಬ ಹೆಸರಿನ ವಿಚಿತ್ರ ಹಬ್ಬ ನಡೆಯುತ್ತದೆ. ಈ ಹಬ್ಬ ಆರಂಭವಾದದ್ದು 1944 ರಲ್ಲಿ. ಪ್ಲಾಜಾ ಡೆಲ್ ಪೆಬ್ಲೋ ಪಟ್ಟಣದ ಮುಖ್ಯ ಚೌಕದಲ್ಲಿ ಪಡ್ಡೆ ಹುಡುಗರ ಎರಡು ಗುಂಪುಗಳು ಜಗಳವಾಡಿದವು. ಆಗ ಅವರು ಆಯುಧವಾಗಿ ಬಳಸಿದ್ದು ಟೊಮೆಟೊ ಹಣ್ಣುಗಳನ್ನು!

Recommended Video

      SpaceX and NASA completes space mission successfully | Oneindia Kannada

      ಅದರ ಸ್ಮರಣಾರ್ಥವಾಗಿ ಈ ಹಬ್ಬ ಆಚರಣೆಗೆ ಬಂದಿದೆಯಂತೆ. ಈ ಬಾರಿ ಕೊರೊನಾವೈರಸ್ ದೆಸೆಯಿಂದ ಹಲವೆಡೆ ಈ ಆಚರಣೆ ರದ್ದಾಗಿದೆ.

      ಈ ಹಬ್ಬಕ್ಕೂ ಒಂದು ರೀತಿ ನೀತಿ ಇದೆ. ಹಬ್ಬದ ದಿನ ಮುಂಜಾನೆಯಿಂದಲೇ ತಯಾರಿಗಳು‌ ನಡೆಯುತ್ತವೆ. ಮಧ್ಯಾಹ್ನದ ಹೊತ್ತಿಗೆ ದೊಡ್ಡ ಟ್ರಕ್‌ಗಳು ಟನ್‌ಗಟ್ಟಲೆ ಟೊಮೆಟೊಗಳನ್ನು ತಂದು ನೆಲದಲ್ಲಿ ಸುರಿಯುತ್ತವೆ. ಅನಂತರ ಹೊಡೆದಾಟ ಆರಂಭ!... ಸೇರಿದ್ದವರೆಲ್ಲ ಕೈಗೆ ಸಿಕ್ಕ ಟೊಮೆಟೊಗಳನ್ನು ಎದುರಿದ್ದವರ ಮೇಲೆ ಎಸೆಯುತ್ತಾರೆ.

      La tomatina tradition festival in August

      ಕ್ಷಣಮಾತ್ರದಲ್ಲಿ ಸುತ್ತಲೂ ಟೊಮೆಟೊ ರಸದ ಕೆಂಪು ಕೊಳವೇ ನಿರ್ಮಾಣವಾಗುತ್ತದೆ. ಅದರ ಮೇಲೇ ಜನರು ಹೊರಳಾಡಿ ಖುಷಿ‌ಪಡುತ್ತಾರೆ. ನಿಯಮದಂತೆ ಚೆನ್ನಾಗಿ ಕಳಿತ ಟೊಮೆಟೊಗಳನ್ನು ಮಾತ್ರ ಕೈಯಿಂದ ಮುದ್ದೆಮಾಡಿ ಎಸೆಯಬೇಕು. ಎದುರಿದ್ದವರಿಗೆ ಪೆಟ್ಟಾಗುವಂತೆ ರಭಸದಿಂದ ಎಸೆಯಬಾರದು. ಈ ಎಲ್ಲಾ ನಿಯಮಗಳನ್ನು ಪಾಲಿಸುವುದಾದರೆ ಯಾರು ಬೇಕಿದ್ದರು ಟೊಮೆಟೊ ಎಸೆಯೋ ಹಬ್ಬದಲ್ಲಿ ಪಾಲ್ಗೊಳ್ಳಬಹುದು.

      La tomatina tradition festival in August

      ಕೇವಲ ಒಂದು ಗಂಟೆ ಹೊತ್ತು ನಡೆಯುವ ಈ ಹಬ್ಬವನ್ನು ನೋಡಲು ಜಗತ್ತಿನ ಮೂಲೆ ಮೂಲೆಯಿಂದ ಪ್ರವಾಸಿಗರು ಬರುತ್ತಾರೆ. ಟೊಮೆಟೊ ಎಸೆಯೋದ್ರಲ್ಲೂ ಅದೇನ್‌ ಸುಖವೋ...!

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+