ಕುವೈತ್ ಆಡಳಿತಗಾರ ಶೇಖ್ ಸಬಾಹ್ ಅಲ್ ಅಹ್ಮದ್ ನಿಧನ
ದುಬೈ, ಸೆಪ್ಟೆಂಬರ್ 29: ಕುವೈತ್ನ ಆಡಳಿತಗಾರ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಮಂಗಳವಾರ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 1990ರ ಗಲ್ಫ್ ಯುದ್ಧದ ಬಳಿಕ ಅವರು ಇರಾಕ್ ಜತೆಗಿನ ಸಂಬಂಧ ವೃದ್ಧಿಸುವುದರಲ್ಲಿ ಮತ್ತು ಇತರೆ ಪ್ರಾದೇಶಿಕ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಪ್ರಮುಖ ರಾಜತಾಂತ್ರಿಕ ಕಾರ್ಯ ನಿರ್ವಹಿಸಿದ್ದರು. ದಶಕಗಳ ಆಡಳಿತದಲ್ಲಿ ಅವರು ಮಧ್ಯಪ್ರಾಚ್ಯ ಭಾಗದಲ್ಲಿ ಅನೇಕ ಮಹತ್ವದ ಕಾರ್ಯಗಳ ನೇತೃತ್ವ ವಹಿಸಿದ್ದರು.
ಹಿರಿಯ ಆಡಳಿತಗಾರರೇ ತುಂಬಿರುವ ಮಧ್ಯಪ್ರಾಚ್ಯದಲ್ಲಿ ಕತಾರ್ ಹಾಗೂ ಇತರೆ ಅರಬ್ ದೇಶಗಳ ನಡುವೆ ಮುಂದುವರಿದಿರುವ ವಿವಾದಗಳನ್ನು ಪರಿಹರಿಸಲು ರಾಜತಾಂತ್ರಿಕ ನೀತಿಗಳನ್ನು ಅನುಸರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.
ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಸಬಾಹ್ ಅವರ ಪೂರ್ವಾಧಿಕಾರಿ ಶೇಖ್ ಸಾದ್ ಅಲ್ ಅಬ್ದುಲ್ಲಾ ಅಲ್ ಸಬಾಹ್ ಅವರನ್ನು ಕೇವಲ ಒಂಬತ್ತು ದಿನಗಳ ಅಡಳಿತದ ಬಳಿಕ ಸಂಸತ್ತು ಸರ್ವಾನುಮತದಿಂದ ಕೆಳಕ್ಕಿಳಿಸಿತ್ತು. 2006ರಲ್ಲಿ ಶೇಖ್ ಸಬಾಹ್ ಅಧಿಕಾರಕ್ಕೆ ಬಂದಿದ್ದರು.

ಕುವೈತ್ನ ಆಡಳಿತಾರೂಢ ಎಮಿರ್ ಆಗಿ ಅವರು ಅನೇಕ ಆಂತರಿಕ ರಾಜಕೀಯ ವಿವಾದಗಳನ್ನು ಎದುರಿಸಬೇಕಾಗಿತ್ತು. 2011ರಲ್ಲಿ ಅರಬ್ ಸ್ಪ್ರಿಂಗ್ ಪ್ರತಿಭಟನೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತದಿಂದ ರಾಷ್ಟ್ರೀಯ ಬಜೆಟ್ ಮೇಲೆ ಉಂಟಾದ ಒತ್ತಡದಂತಹ ಸನ್ನಿವೇಶಗಳು ಅವರಿಗೆ ಸವಾಲೊಡ್ಡಿದ್ದವು.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications