ಭಾರತಕ್ಕೆ ಅಮೆರಿಕಾ ರಾಯಭಾರಿಯಾಗಿ ಆಯ್ಕೆಯಾದ ಕೆನ್ನೆಥ್ ಜಸ್ಟರ್
ವಾಷಿಂಗ್ಟನ್ (ಅಮೆರಿಕ), ಜೂನ್ 22: ಅಮೆರಿಕಾ ವೈಟ್ ಹೌಸ್ ನ ಹಿರಿಯ ಅಧಿಕಾರಿ ಕೆನ್ನೆಥ್ ಜಸ್ಟರ್, ಭಾರತಕ್ಕೆ ಮುಂದಿನ ಅಮೆರಿಕಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
'ಈ ಹುದ್ದೆಗೆ ಅತ್ಯಂತ ಅರ್ಹ ವ್ಯಕ್ತಿ ಕೆನ್ನೆಥ್ ಜಸ್ಟರ್' ಎಂದು ವೈಟ್ ಹೌಸ್ ನ ಉಪ ವಕ್ತಾರ ಲಿಂಡ್ಸೆ ಇ ವಾಲ್ಟರ್ಸ್ ಹೇಳಿದ್ದಾರೆ. 'ಜಸ್ಟರ್ ಅವರು, ರಾಷ್ಟ್ರಾಧ್ಯಕ್ಷರಾಧಿಯಾಗಿ ವೈಟ್ ಹೌಸ್ ನ ಎಲ್ಲರೊಂದಿಗೂ ಸೌಹಾರ್ದ ಬಾಂಧವ್ಯ ಹೊಂದಿದ್ದಾರೆ. ಅಲ್ಲದೆ, ಅವರು ಭಾರತಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಆದ್ದರಿಂದ ಈ ಸ್ಥಾನಕ್ಕೆ ಅವರೇ ಸೂಕ್ತ ಆಯ್ಕೆ' ಎಂದು ವಾಲ್ಟರ್ಸ್ ಹೇಳಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಕೆನ್ನೆಥ್, ಜಾರ್ಜ್ ಡಬ್ಲ್ಯು ಬುಷ್ ಅವರ ಅಧಿಕಾರಾವಧಿಯಲ್ಲಿ ವಾಣಿಜ್ಯ ವಿಭಾಗದ ಉಪಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ, ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಹಾಯಕ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.












Click it and Unblock the Notifications