• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಶ್ಮೀರ ವಿಚಾರ ICJ ಮುಂದಿಡಲು ಸೂಕ್ತ ಸಾಕ್ಷ್ಯವಿಲ್ಲ ಎಂದ ಪಾಕ್ ವಕೀಲ

|

ಇಸ್ಲಾಮಾಬಾದ್, ಸೆಪ್ಟೆಂಬರ್ 3: "ಸೂಕ್ತ ಸಾಕ್ಷ್ಯ ಇಲ್ಲವಾದ್ದರಿಂದ ಕಾಶ್ಮೀರದಲ್ಲಿ ನರಮೇಧ ನಡೆದಿರುವುದನ್ನು ಸಾಬೀತು ಪಡಿಸಲು 'ವಿಪರೀತ ಕಷ್ಟ'" ಎಂದು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಪಾಕಿಸ್ತಾನ ಪರ ವಕೀಲರಾದ ಖವರ್ ಖುರೇಷಿ ಹೇಳಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಭಾರೀ ಮುಜುಗರ ಆದಂತಾಗಿದೆ.

ಭಾರತ ಸರಕಾರವು ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದನ್ನು ಪ್ರಶ್ನಿಸಿ ಪಾಕಿಸ್ತಾನವು ಐಸಿಜೆಗೆ ತೆರಳುವುದಾಗಿ ಬೆದರಿಸುತ್ತಿತ್ತು. ಇಂಥ ಸನ್ನಿವೇಶದಲ್ಲಿ ಖವರ್ ಖುರೇಷಿ ಅವರ ಹೇಳಿಕೆ ಗಮನ ಸೆಳೆದಿದೆ.

ಕಾಶ್ಮೀರದ ಬೀದಿ ನಿಶ್ಯಬ್ದವಾಗಿದೆ ಎಂದರೆ ಸಹಜ ಸ್ಥಿತಿ ಅಂತಲ್ಲ: ಶ್ರೀನಗರ ಮೇಯರ್

ವಕೀಲ ಖುರೇಷಿ ಮಾತನಾಡಿ, ಸಾಮೂಹಿಕ ಹತ್ಯೆ ಒಪ್ಪಂದ 1948 ಎಂಬ ಒಡಂಬಡಿಕೆಯೊಂದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ಸಹಿ ಹಾಕಿವೆ. ಸಾಮೂಹಿಕ ನರಮೇಧ ನಡೆಸುವುದು ಅಥವಾ ನರಮೇಧವನ್ನು ತಡೆಯಲು ವಿಫಲವಾದಲ್ಲಿ ಅಂತರರಾಷ್ಟ್ರೀಯ ಕೋರ್ಟ್ ಗೆ ಈ ವಿಚಾರವನ್ನು ಒಯ್ಯಬಹುದು ಎಂದು ಹೇಳಿದ್ದಾರೆ.

ಆದರೆ, ಯಾವುದೇ ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವು ಕಾಶ್ಮೀರ ವಿಚಾರವನ್ನು ಅಂತರರಾಷ್ಟ್ರೀಯ ಕೋರ್ಟ್ ಗೆ ಒಯ್ಯುವುದು ವಿಪರೀತ ಕಷ್ಟ ಎಂದು ಅವರು ಹೇಳಿದ್ದಾರೆ.

English summary
After India scrapped article 370 in Jammu and Kashmir. Pakistan wanted to raise issue in ICJ. But, Pak lawyer said, it is difficult prove Kashmir genocide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X