ಕಮಲಾ ಹ್ಯಾರಿಸ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಭಾರತ ಮೂಲದ ಮಹಿಳೆಗೆ ಹಾಲಿವುಡ್ ಬೆಂಬಲ!
ಕಮಲಾ ಹ್ಯಾರಿಸ್.. ಕಮಲಾ ಹ್ಯಾರಿಸ್.. ಕಮಲಾ ಹ್ಯಾರಿಸ್.. ಹೀಗೆ ಅಮೆರಿಕ ದೇಶದಲ್ಲಿ ನೀವು ಈಗ ಎಲ್ಲೇ ಹೋಗಿ ಕಮಲಾ ಹ್ಯಾರಿಸ್ ಅವರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಯಾಕಂದ್ರೆ ಕಮಲಾ ಹ್ಯಾರಿಸ್ ಈಗ ಆ ರೇಂಜ್‌ಗೆ ಹವಾ ಇಟ್ಟಿದ್ದಾರೆ. ಅದರಲ್ಲೂ ಭಾರತದ ಮೂಲ ಹೊಂದಿರುವ ಕಮಲಾ ಹ್ಯಾರಿಸ್‌ಗೆ ಅಮೆರಿಕದಲ್ಲಿ ಭಾರಿ ಬೆಂಬಲ ಸಿಗುತ್ತಿದೆ. ಇಷ್ಟು ದಿನ ಸಾಮಾನ್ಯ ಜನರ ಬೆಂಬಲ ಪಡೆಯುವಲ್ಲಿ ಸಕ್ಸಸ್ ಆಗಿದ್ದ ಕಮಲಾ ಹ್ಯಾರಿಸ್ ಅವರಿಗೆ ಈಗ, ಅಮೆರಿಕದ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಸಪೋರ್ಟ್ ಕೂಡ ಸಿಗುತ್ತಿದೆ!
ಅಮೆರಿಕದಲ್ಲಿ ವರ್ಣಬೇಧ ನೀತಿ & ವಲಸಿಗರ ಬಗ್ಗೆ ಅಸಹ್ಯ ಪಡೆಯುವ ಸಂಪ್ರದಾಯ, ಈ ಹಿಂದೆಯಿಂದ ಕೂಡ ಮುಂದುವರಿದಿದೆ. ಪರಿಸ್ಥಿತಿ ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಈಗಲೂ ಬಾಯಿಗೆ ಬಂದ ರೀತಿ ಮಾತನಾಡುತ್ತಾ, ಅಮೆರಿಕದಲ್ಲಿ ಟಾರ್ಗೆಟ್ ಆಗುತ್ತಿದ್ದಾರೆ. ಅದ್ರಲ್ಲೂ ಅಮೆರಿಕದ ಹಾಲಿವುಡ್ ನಟ & ನಟಿಯರಿಂದ ಹಿಡಿದು ಬಹುತೇಕ ಸೆಲೆಬ್ರಿಟಿಗಳು ಬಿಳಿಯರ ಪರ ಅಂದ್ರೆ, ಡೊನಾಲ್ಡ್ ಟ್ರಂಪ್ ಹೊಂದಿರುವ ರಾಜಕೀಯ ಮೌಲ್ಯಗಳ ಪರವೇ ನಿಂತಿದ್ದಾರೆ. ಆದರೂ ಅಮೆರಿಕದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದೀಗ, ಅಮೆರಿಕದ ಭವ್ಯ ಭವಿಷ್ಯಕ್ಕಾಗಿ ಯಾರನ್ನ ಆಯ್ಕೆ ಮಾಡಿದ್ದಾರೆ ಗೊತ್ತೆ?

ನಡುಗಿದ ಟ್ರಂಪ್ & ನಗುತ್ತಿರುವ ಕಮಲಾ!
ಅಂದಹಾಗೆ ಡೊನಾಲ್ಡ್ ಟ್ರಂಪ್ ಜೊತೆಗಿನ ಕಮಲಾ ಹ್ಯಾರಿಸ್ ಅವರ ಮೊದಲ ಮುಖಾಮುಖಿ ಚರ್ಚೆಯ ನಂತರ, ಅಮೆರಿಕದ ಖ್ಯಾತ ಸಿಂಗರ್ ಟೇಲರ್ ಸ್ವಿಫ್ಟ್ ಮಹತ್ವದ ಹೇಳಿಕೆ ನೀಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಖ್ಯಾತ ಹಾಡುಗಾರ್ತಿ ಟೇಲರ್ ಸ್ವಿಫ್ಟ್ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನ ಈ ಸಮಯದಲ್ಲಿ ನಾನು ಬೆಂಬಲಿಸುತ್ತೇನೆ ಎಂದು, ಸಿಂಗರ್ ಟೇಲರ್ ಸ್ವಿಫ್ಟ್ ಬಹಿರಂಗವಾಗಿ ಘೋಷಿಸಿದ್ದಾರೆ. ಈ ಹೇಳಿಕೆಯ ನಂತರ ಡೊನಾಲ್ಡ್ ಟ್ರಂಪ್‌ಗೆ ಭಾರಿ ಹಿನ್ನಡೆ ಆಗುತ್ತಿದೆ.
ಟ್ರಂಪ್ ಸೋಲುವುದು ಗ್ಯಾರಂಟಿ?
ಖ್ಯಾತ ಹಾಡುಗಾರ್ತಿ ಟೇಲರ್ ಸ್ವಿಫ್ಟ್ ಮಾತ್ರ ಅಲ್ಲ, ಬಹುತೇಕ ಸೆಲೆಬ್ರಿಟಿಗಳು ಈಗ ಕಮಲಾ ಹ್ಯಾರಿಸ್ ಅವರ ಪರವಾಗಿ ನಿಲ್ಲುತ್ತಿದ್ದಾರೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಸೋಲಿಗೆ ರಣ ಕಹಳೆ ಮೊಳಗಿದಂತೆ ಆಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ ಡೊನಾಲ್ಡ್ ಟ್ರಂಪ್ ಗೆಲುವು ತುಂಬಾ ಕಷ್ಟವಾಗಲಿದೆ. ಅಲ್ಲದೆ ಭಾರತ ಮೂಲದ ಕಮಲಾ ಹ್ಯಾರಿಸ್‌ಗೆ, ಗೆಲುವಿನ ಸಿಹಿ ಮತ್ತಷ್ಟು ಹತ್ತಿರ ಆಗಲಿದೆ. ಈಗಾಗಲೇ ಕಮಲಾ ಹ್ಯಾರಿಸ್ ಅವರ ಪರವಾಗಿ ಕೋಟಿ ಕೋಟಿ ಅನಿವಾಸಿ ಭಾರತೀಯರು ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.












Click it and Unblock the Notifications