ಕಮಲಾ ಹ್ಯಾರಿಸ್‌ಗೆ ಭರ್ಜರಿ ಬೆಂಬಲ, ಪ್ರಚಾರ ಕಾರ್ಯದಲ್ಲಿ ಮತ್ತಷ್ಟು ಚುರುಕು!
ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆಲುವಿಗೆ ಮತ್ತಷ್ಟು ಹತ್ತಿರ ಆಗ್ತಿದ್ದಾರೆ. ಈಗಾಗಲೇ, ಡೊನಾಲ್ಡ್ ಟ್ರಂಪ್ ಅವರಿಗಿಂತ ಕಮಲಾ ಹ್ಯಾರಿಸ್ ಸಾಕಷ್ಟು ಮುಂದೆ ಇದ್ದಾರೆ ಎಂಬುದು ಸಮೀಕ್ಷೆಗಳಿಂದ ಗೊತ್ತಾಗುತ್ತಿದೆ. ಇದೇ ಕಾರಣಕ್ಕೆ ಕಮಲಾ ಹ್ಯಾರಿಸ್ ಪರವಾಗಿ ಮತದಾರರು ಕೂಡ ಹೆಚ್ಚಿನ ಸಪೋರ್ಟ್ ಕೂಡ ಮಾಡುತ್ತಿದ್ದು, ಟ್ರಂಪ್ ಗೆಲ್ಲುತ್ತಾರಾ? ಸೋಲುತ್ತಾರಾ? ಎಂಬ ಪ್ರಶ್ನೆ ಈಗ ಭಾರಿ ಕುತೂಹಲ ಕೆರಳಿಸಿದೆ.
ಭಾರತ ಮೂಲದ ಅಮೆರಿಕನ್ನರು ಹಾಗೂ ಆಫ್ರಿಕನ್-ಅಮೆರಿಕನ್ ಮತದಾರರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ, ಕಮಲಾ ಹ್ಯಾರಿಸ್ ಅವರನ್ನ ಗೆಲ್ಲಿಸಬೇಕು ಅಂತ ಪಣತೊಟ್ಟು ನಿಂತಿದ್ದಾರೆ. ಇದೇ ಕಾರಣಕ್ಕೆ ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲು ಗ್ಯಾರಂಟಿ, ಎಂಬ ಚರ್ಚೆಗಳು ಕೂಡ ಇದೀಗ ಶುರು ಆಗಿವೆ. ಇಂತಹ ವಾತಾವರಣ ಎದುರಾದ ಹಿನ್ನೆಲೆ ಅಲರ್ಟ್ ಆಗಿರುವ ಕಮಲಾ ಹ್ಯಾರಿಸ್ ಅವರು, ತಮ್ಮ ಚುನಾವಣಾ ಪ್ರಚಾರ ಕಾರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅಲ್ಲದೆ ಈ ಸಮಯದಲ್ಲೇ ಕಮಲಾ ಹ್ಯಾರಿಸ್ ಪರವಾಗಿ ಚುನಾವಣಾ ನಿಧಿ ಸಂಗ್ರಹ ಸಾಮರ್ಥ್ಯ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ.

100 ಕೋಟಿ ರೂಪಾಯಿ ಸಂಗ್ರಹ?
ಈಗಿನ ಪರಿಸ್ಥಿತಿ ನೋಡಿದರೆ ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್ ಅವರ ಪರವಾಗಿ ಹೆಚ್ಚಿನ ಬೆಂಬಲ ಸಿಗುತ್ತಿದೆ. ಅಮೆರಿಕದ ಸ್ಯಾನ್‌ಫ್ರ್ಯಾನ್ಸಿಸ್ಕೊ ರಾಜ್ಯದಲ್ಲಿ ಕಮಲಾ ಹ್ಯಾರಿಸ್ ಅವರು ಚುನಾವಣಾ ನಿಧಿ ಸಂಗ್ರಹಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ ಅವರು, ಇದೇ ವರ್ಷದ ನವೆಂಬರ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ನನ್ನ ಗೆಲುವು ಪಕ್ಕಾ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ರಂಪ್ ವಿರುದ್ಧ ನಾನು ಗೆದ್ದೇ ಗೆಲ್ಲುತ್ತೇನೆಂಬ ಘೋಷಣೆ ಕೂಡ ಹೊರಡಿಸಿದ್ದಾರೆ ಕಮಲಾ ಹ್ಯಾರಿಸ್ ಅವರು. ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಈಗ ಕಮಲಾ ಹ್ಯಾರಿಸ್ ಅವರ ಪರವಾಗಿ ಸುಮಾರು 100 ಕೋಟಿ ರೂಪಾಯಿ ಸಂಗ್ರಹ ಆಗಿದ್ದು, ಈ ರೀತಿ ಚುನಾವಣೆಗಾಗಿ ನಿಧಿ ಸಂಗ್ರಹ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಸಮೀಕ್ಷೆಗಳ ಪ್ರಕಾರ ಕಮಲಾಗೆ ಮುನ್ನಡೆ
ಒಟ್ನಲ್ಲಿ ಕಮಲಾ ಹ್ಯಾರಿಸ್ ಅವರು ಇನ್ನೇನು ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸುವ ಸಿದ್ಧತೆಯಲ್ಲಿ ಇದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಮತ್ತೊಂದು ಭಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಲು ಬೇಕಾದ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎಂಬುದನ್ನು ಮತದಾರ ಪ್ರಭು ಇನ್ನೇನು ಚುನಾವಣೆ ಅಖಾಡದಲ್ಲಿ ನಿರ್ಧಾರ ಮಾಡಲಿದ್ದಾನೆ. ಕಮಲಾ ಹ್ಯಾರಿಸ್ ಈಗಿನ ಸ್ಥಿತಿಯಲ್ಲಿ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ & ಮಿಚಿಗನ್ ರಾಜ್ಯಗಳಲ್ಲಿ ಶೇಕಡಾ 4 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ರೊಚ್ಚಿಗೆದ್ದರು ಡೊನಾಲ್ಡ್ ಟ್ರಂಪ್!
ಅಮೆರಿಕ ಮಾಜಿ ಅಧ್ಯಕ್ಷ ಹಾಗೂ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆದ ಡೊನಾಲ್ಡ್ ಟ್ರಂಪ್ ಮತ್ತೆ ರೊಚ್ಚಿಗೆದ್ದಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿದ್ದು ಅವರ ಮೇಲೆ ಕೆಲವು ದಿನಗಳ ಹಿಂದೆ ನಡೆದಿದ್ದ ದಾಳಿ. ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ನಡೆಸುವಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಹೀಗಿದ್ದಾಗಲೇ ತಕ್ಷಣ ಅಲರ್ಟ್ ಆಗಿದ್ದ ಭದ್ರತಾ ಸಿಬ್ಬಂದಿ, ಕೂಡಲೇ ವೇದಿಕೆ ಸಮೀಪ ಓಡಿ ಬಂದು ಟ್ರಂಪ್ ಅವರನ್ನ ರಕ್ಷಣೆ ಮಾಡಿ ಜೀವ ಉಳಿಸಿದ್ದರು. ಆ ಭಯಾನಕ ಕ್ಷಣಗಳ ಬಗ್ಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಎಲಾನ್ ಮಸ್ಕ್ ಅವರ ಜೊತೆಗಿನ ಸಂದರ್ಶನದ ವೇಳೆ ಮಾಹಿತಿ ಹಂಚಿಕೊಂಡು ಮರುಗಿದ್ದಾರೆ. ಅಲ್ಲದೆ ದಾಳಿಯ ಬಗ್ಗೆ ಆಕ್ರೋಶ ಹೊರ ಹಾಕಿ ರೊಚ್ಚಿಗೆದ್ದಿದ್ದಾರೆ ಟ್ರಂಪ್.












Click it and Unblock the Notifications