ಕಾಬೂಲ್ : ಆತ್ಮಾಹುತಿ ಬಾಂಬ್ ದಾಳಿ, 30 ಸಾವು

ಕಾಬೂಲ್, ಅಕ್ಟೋಬರ್ 20 : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ನಲ್ಲಿನ ಮಸೀದಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. 30ಕ್ಕೂ ಅಧಿಕ ಜನರು ಸ್ಫೋಟದಲ್ಲಿ ಮೃತಪಟ್ಟಿದ್ದು, 45ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಇಮಾನ್ ಝಮಾನ್ ಮಸೀದಿಗೆ ನುಗ್ಗಿದ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಐಎಸ್‌ಐಎಸ್ ಈ ದಾಳಿಯ ಹೊಣೆಯನ್ನು ಹೊತ್ತಿಕೊಂಡಿದೆ. ಮಸೀದಿಯಲ್ಲಿದ್ದ ಜನರು ಛಿದ್ರಗೊಂಡ ಮೃತದೇಹಗಳನ್ನು ಬಟ್ಟೆಯಲ್ಲಿ ಸುತ್ತಿಡುತ್ತಿದ್ದಾರೆ.

afghanistan

ಅಕ್ಟೋಬರ್ 19ರಂದು ಕಂದಹಾರ್ ಪ್ರಾಂತ್ಯದ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 43 ಜನರು ಸಾವನ್ನಪ್ಪಿದ್ದರು. ಒಂದೇ ವಾರದಲ್ಲಿ 4 ಬಾರಿ ಅಫ್ಘಾನಿಸ್ತಾನದಲ್ಲಿ ಬಾಂಬ್ ದಾಳಿ ನಡೆದಿದೆ. ಅಫ್ಘಾನ್‌ನ ದಕ್ಷಿಣ ಭಾಗದ ಮಸೀದಿ ಮೇಲೆಯೂ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಆದರೆ, ಸಾವು-ನೋವಿನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+