ಶಾಂತಿದೂತ, ನೊಬೆಲ್ ಪುರಸ್ಕೃತ ಮಂಡೇಲಾ ನಿಧನ
ಜೊಹಾನ್ಸ್ ಬರ್ಗ್ (ದಕ್ಷಿಣ ಆಫ್ರಿಕ), ಡಿ.6: ಶಾಂತಿದೂತ, ನೋಬೆಲ್ ಪುರಸ್ಕೃತ, ಭಾರತ ರತ್ನ ನೆಲ್ಸನ್ ಮಂಡೇಲಾ ಅವರು ಇಂದು ಬೆಳಗಿನ ಜಾವ ಇಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
ದಕ್ಷಿಣ ಆಫ್ರಿಕಾದ ಮೊದಲ ನೀಗ್ರೋ ಅಧ್ಯಕ್ಷ, ವರ್ಣಭೇದ ವಿರೋಧಿ ಚಳವಳಿಯ ಅಗ್ರ ನಾಯಕ 95 ವರ್ಷದ ನೆಲ್ಸನ್ ಮಂಡೇಲಾ ಅವರು ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ ತೀವ್ರ ಅಸ್ವಸ್ಥರಾದ ಅವರು ಕೊನೆಯುಸಿರೆಳೆದರು ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಪ್ರಕಟಿಸಿದ್ದಾರೆ.

ದೇಶದ್ರೋಹ ಆಪಾದನೆಯಲ್ಲಿ 27 ವರ್ಷ ಕಾಲ ಜೈಲಿನ ಕತ್ತಲೆ ಕೋಣೆಯಲ್ಲಿ ಜೀವನ ದೂಡಿದ ಆಫ್ರಿಕಾದ ಗಾಂಧಿ ಎಂದೇ ಜನಜನಿತರಾಗಿದ್ದ ಮಂಡೇಲಾ ಅವರ ಅಗಲಿಕೆಗೆ ವಿಶ್ವ ನಾಯಕರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಮಂಡೇಲಾ ಅವರಿಂದ ಅಪಾರವಾಗಿ ಪ್ರಭಾವಿತರಾಗಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಂಡೇಲಾರ ನಿಧನಕ್ಕೆ ಅಪಾರ ಶೋಕ ವ್ಯಕ್ತಪಡಿಸಿದ್ದಾರೆ. ಅವರು ಸರ್ವ ಕಾಲಕ್ಕೂ, ಸರ್ವ ಜನಕ್ಕೂ ಸಲ್ಲುವಂತಹ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜುಮಾ ಅವರು 'ಮಂಡೇಲಾ ಅವರ ನಿಧನದಿಂದ ದೇಶದ ಅಪ್ರತಿಮ ಪುತ್ರನನ್ನು ಕಳೆದುಕೊಂಡಿದ್ದೇವೆ. ರಾಷ್ಟ್ರಪಿತನ ಸಾವಿನಿಂದ ದೇಶವು ರೋದಿಸುತ್ತಿದೆ' ಎಂದು ದುಃಖಿಸಿದ್ದಾರೆ. ರೋಲಿಲಾಲಾ ಮಂಡೇಲಾ ಅವರು 1918 ಜುಲೈ 18ರಂದು ಈಸ್ಟರ್ನ್ ಕೇಪ್ ಪ್ರಾಂತ್ಯದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದರು.
ನೆಲ್ಸನ್ ಮಂಡೇಲಾ ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ 1942 ರಲ್ಲಿ ಕಾನೂನು ಪದವಿಯನ್ನು ಪಡೆದರು. 1944ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು 1956ರಿಂದ 1961 ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನೆಡೆಸಿ, 1961ಲ್ಲಿ ಜಯಗಳಿಸಿದರು.
ಮೊದಲಿಗೆ 'ಅಹಿಂಸಾ ನೀತಿ'ಯನ್ನು ಅಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು 'ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ಧ ಪ್ರಬಲ ಎದುರಾಳಿಯಾದರು. 1990ರವರೆಗಿನ ಅವರ 27 ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿ ಉಂಟು ಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಯಿತು. 1993ರಲ್ಲಿ ಮಂಡೇಲಾ ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು.
ಮೊದಲ ಪತ್ನಿ, ನರ್ಸ್ ಎವೆಲಿನ್ ಮೇಸ್ ಜತೆಗೆ ಅವರಿಗೆ ನಾಲ್ಕು ಮಕ್ಕಳಿದ್ದರು. ಇವರಲ್ಲಿ ಮೂವರು ಮಕ್ಕಳು ಅಕಾಲ ಮರಣಕ್ಕೆ ತುತ್ತಾಗಿದ್ದರು. 1957ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಂಡದ್ದರು. 2004ರಲ್ಲಿ ಎವೆಲಿನ್ ನಿಧನರಾದರು.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications