ಜೀವಕೋಶಗಳ ಸ್ವಯಂಭಕ್ಷಣೆ ಸಂಶೋಧಕನಿಗೆ ನೊಬೆಲ್!
ಸ್ಟಾಕ್ ಹೋಮ್, ಅಕ್ಟೋಬರ್ 04: ಜೀವಕೋಶಗಳ ಸ್ವಯಂಭಕ್ಷಣೆ (ಆಟೋಫಗಿ) ಕುರಿತು ಸಂಶೋಧನೆ ಮಾಡಿರುವ ಜಪಾನ್ ವಿಜ್ಞಾನಿ ಯಾಶಿನೊರಿ ಒಹ್ಸುಮಿ (71) ಅವರನ್ನು 2016 ನೇ ಸಾಲಿನ ವೈದ್ಯಕೀಯ ನೊಬೆಲ್ ಪಾರಿತೋಷಕಕ್ಕೆ ಆಯ್ಕೆ ಮಾಡಲಾಗಿದೆ.
ನೊಬೆಲ್ ಪಾರಿತೋಷಕವು 6.22 ಕೋಟಿ ರು (9,36,000 ಡಾಲರ್) ಮೊತ್ತ ಒಳಗೊಂಡಿದೆ. ಪ್ರಸ್ತುತ ಒಹ್ಸುಮಿ ಅವರು ಪ್ರಸ್ತುತ ಟೋಕಿಯೊದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಜೀವಕೋಶಗಳ ವಿಜ್ಞಾನದಲ್ಲಿ ಸ್ವಯಂಭಕ್ಷಣೆ ಮೂಲ ಪ್ರಕ್ರಿಯೆಯಾಗಿದೆ. ಜೀವಕೋಶಗಳು ತಮ್ಮನ್ನು ತಾವೇ ತಿಂದುಕೊಳ್ಳುವುದರಿಂದ ಅನೇಕ ರೋಗ ರುಜಿನಗಳನ್ನು ದೂರ ಇರಿಸಬಹುದು. ಈ ಪ್ರಕ್ರಿಯೆ ಏರು ಪೇರಾದರೆ ಪಾರ್ಕಿನ್‌ಸನ್ ಹಾಗೂ ಮಧುಮೇಹ ಉಂಟಾಗುವ ಸಂಭವವಿರುತ್ತದೆ.
ಕ್ಯಾನ್ಸರ್ ಮತ್ತು ನರರೋಗಗಳು ಸ್ವಯಂಭಕ್ಷಣೆ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಜೀವಕೋಶಗಳು ಪುನರ್ ರೂಪುಗೊಳ್ಳುವ ಪ್ರಕ್ರಿಯೆ ಅರ್ಥೈಸಿಕೊಳ್ಳಲು ಅವರ ಸಂಶೋಧನೆಯಿಂದ ಹೊಸ ಮಾರ್ಗ ದೊರಕಿದೆ ಎಂದು ಸ್ವೀಡನ್ನಿನ ಕರೊಲಿಂಸ್ಕಾ ಸಂಸ್ಥೆಯ ನೊಬೆಲ್ ಅಸೆಂಬ್ಲಿ ಅಭಿಪ್ರಾಯಪಟ್ಟಿದೆ.












Click it and Unblock the Notifications