Israel War: ನಾವು ಯುದ್ಧ ಘೋಷಿಸಿದ್ದೀವಿ, ನೀವು ಕದನಕ್ಕೆ ಸಿದ್ಧರಾಗಿ!

ಹಮಾಸ್ ಬಂಡುಕೋರರ ವಿರುದ್ಧ, ಇಸ್ರೇಲ್ ಯುದ್ಧ ಘೋಷಿಸಿದ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಕ್ರೋಶ ಹೊರಹಾಕಿದ್ದಾರೆ. ಇಂದು ಬೆಳಗ್ಗೆ ಹಮಾಸ್ ಉಗ್ರರಿಂದ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆದು, ಭಾಗಶಃ ಇಸ್ರೇಲ್ ನರಕವಾಗಿತ್ತು. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿದ್ದ ಸಮಯಕ್ಕೆ ಹಿಂದೆ ಮುಂದೆ ಯೋಚನೆ ಮಾಡದ ನೆತನ್ಯಾಹು ಯುದ್ಧ ಘೋಷಿಸಿದ್ದರು. ಈಗ ಇಸ್ರೇಲ್ ಪ್ರಜೆಗಳಿಗೆ ನೆತನ್ಯಾಹು ಧೈರ್ಯ ತುಂಬಿದ್ದು, ಉಗ್ರರ ಹೆಣ ಬೀಳಿಸುವ ಶಪಥ ಮಾಡಿದ್ದಾರೆ.

ವಿಡಿಯೋ ಸಂದೇಶದಲ್ಲಿ ಹಮಾಸ್ ಬಂಡುಕೋರರು & ಇಸ್ರೇಲ್‌ನ ಮೇಲೆ ದಾಳಿ ಮಾಡಿದ ಪ್ರತಿಯೊಬ್ಬರ ವಿರುದ್ಧವೂ ಬೆಂಜಮಿನ್ ನೆತನ್ಯಾಹು ಆಕ್ರೋಶ ಹೊರಹಾಕಿದ್ದಾರೆ. ಇಸ್ರೇಲ್ ಸೇನೆ ಶತ್ರುಗಳನ್ನ ಬಿಡುವುದಿಲ್ಲ, ನಮ್ಮ ಮೇಲೆ ದಾಳಿ ಮಾಡಿದ ಶತ್ರುಗಳು ಇದಕ್ಕೆ ಸೂಕ್ತ ಬೆಲೆ ತೆರಬೇಕಿದೆ. ಅಲ್ಲಿಯವರೆಗೂ ನಾವು ಹೋರಾಡುತ್ತೇವೆ ಹಾಗೂ ನಾವು ಯುದ್ಧವನ್ನು ಘೋಷಿಸಿದ್ದೇವೆ ಎಂದು ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇದು ಹಮಾಸ್ ಉಗ್ರರ ವಿರುದ್ಧ ಇಸ್ರೇಲ್‌ಗೆ ಇರುವ ಸಿಟ್ಟನ್ನು ತಿಳಿಸಿದಂತಿದೆ.

Israel Prime Minister Benjamin Netanyahu warns enemies after ordering for war

ಇಂದು ಬೆಳಗ್ಗೆ ಆಗಿದ್ದು ಏನು?

ಹಮಾಸ್ ಉಗ್ರ ಪಡೆ ಪದೇ ಪದೆ ಇಸ್ರೇಲ್‌ ಮೇಲೆ ಅಟ್ಯಾಕ್ ಮಾಡಿ ಓಡಿ ಹೋಗುತ್ತಿತ್ತು. ಆದರೆ ಹಮಾಸ್ ಉಗ್ರರ ಗ್ರಹಚಾರ ಇವತ್ತು ಸರಿ ಇರಲಿಲ್ಲ ಅಂತಾ ಕಾಣುತ್ತಿದೆ. ಹೀಗಾಗಿಯೇ 5000ಕ್ಕೂ ಹೆಚ್ಚು ರಾಕೆಟ್ ಉಡಾಯಿಸಿದ್ದ ಹಮಾಸ್ ಬಂಡುಕೋರರ ತಿಥಿ ಮಾಡುತ್ತಿದೆ ಇಸ್ರೇಲ್‌ನ ಸೇನೆ. ಉಗ್ರರನ್ನ ಅವರ ನೆಲದಲ್ಲೇ ಹೊಸಕಲು ಇಸ್ರೇಲ್ ಖಡಕ್ ಕಾರ್ಯಾಚರಣೆ ಶುರುಮಾಡಿದೆ. ಈ ಬೆಳವಣಿಗೆ ನಡುವೆ ಬೆಂಜಮಿನ್ ನೆತನ್ಯಾಹು ನೀಡಿರುವ ಸಂದೇಶ ಸಂಚಲನವನ್ನೇ ಸೃಷ್ಟಿ ಮಾಡಿದೆ.

ಸೇಡಿಗೆ ಸೇಡು.. ರಕ್ತಕ್ಕೆ ರಕ್ತ..

ಸಂಜೆ ಕೂಡ ವಿಶೇಷ ಸುದ್ದಿಗೋಷ್ಠಿ ನಡೆಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಸೇನೆಯ ಕಾರ್ಯಾಚರಣೆ ಬಗ್ಗೆ ವಿವರಿಸಿದ್ದಾರೆ. ಹಾಗೇ ಮತ್ತೊಮ್ಮೆ ಶತ್ರುಗಳು ತಾವು ಮಾಡಿದ ತಪ್ಪಿಗೆ ಬೆಲೆ ತೆರಬೇಕು ಎಂಬ ಮಾತನ್ನು ಪ್ರಸ್ತಾಪ ಮಾಡಿದ್ದಾರೆ. ಈ ಮೂಲಕ ಹಮಾಸ್ ಬಂಡುಕೋರರ ವಿರುದ್ಧ ಘೋರ ಕಾಳಗಕ್ಕೆ ಇಸ್ರೇಲ್ ಸಜ್ಜಾದಂತೆ ಕಾಣುತ್ತಿದೆ.

ಒಟ್ನಲ್ಲಿ ಇಸ್ರೇಲ್ ಪುಟಾಣಿ ದೇಶ ಆಗಿದ್ರೂ ಅದರ ಸೇನಾ ಶಕ್ತಿ ಬಲಶಾಲಿ ದೇಶಗಳನ್ನೇ ಮೀರಿಸಿ ನಿಲ್ಲುತ್ತದೆ. ಹೀಗಾಗಿಯೇ ಇಸ್ರೇಲ್ ಸೇನೆ ಬಳಿ ಭಯಾನಕ ಫೈಟರ್ ಜೆಟ್ ಎನ್ನಲಾಗುವ F-35s ಮಾದರಿಯ 75 ಯುದ್ಧ ವಿಮಾನಗಳು ಇವೆ. ಇಷ್ಟೇ ಅಲ್ಲದೆ ಡ್ರೋನ್‌ಗಳು ಸೇರಿ ಒಟ್ಟಾರೆ 684 ಯುದ್ಧ ವಿಮಾನಗಳು ಇಸ್ರೇಲ್ ವಾಯು ಸೇನೆಯಲ್ಲಿ ಇವೆ. ಇದನ್ನು ನಿಭಾಯಿಸಲು 34,000 ಸೈನಿಕರು ಸಿದ್ಧವಾಗಿದ್ದು, 55,000 ಮೀಸಲು ಪಡೆ ಸೈನಿಕರಿಗೂ ಇದೀಗ ಕರೆ ಹೋಗಿದೆ. ಈ ಮೂಲಕ ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್ ಉಗ್ರರ ರಕ್ತಪಾತ ಮಾಡಲು ಇಸ್ರೇಲ್ ನುಗ್ಗುತ್ತಿದೆ. ಇನ್ನು ಇಸ್ರೇಲ್ ಭೂ ಸೇನೆ ಕೂಡ ಬಲವಾಗಿದ್ದು, 2,500 ಯುದ್ಧ ಟ್ಯಾಂಕರ್ ಹಾಗೂ 5,000 ಶಸ್ತ್ರಾಸ್ತ್ರ ಸಾಗಿಸುವ ವಾಹನಗಳು ಕೂಡ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+