'ನಾವು ಹೆದರಲ್ಲ, ಎಲ್ಲದಕ್ಕೂ ಸಿದ್ಧರಿದ್ದೇವೆ’: ಇಸ್ರೇಲ್‌ಗೆ ತೊಡೆತಟ್ಟಿದ ಹಮಾಸ್‌- ಮಧ್ಯಪ್ರಾಚ್ಯದಲ್ಲಿ ನದಿಯಾಗಿ ಹರಿಯಲಿದೆ ರಕ್ತ

ಗಾಜಾ, ಅಕ್ಟೋಬರ್‌ 17: ಗಾಜಾ ಪಟ್ಟಿ ಅಕ್ಷರಶಃ ದಿಗ್ಬಂಧನಕ್ಕೆ ಒಳಗಾಗಿದೆ. ಕಳೆದ ವಾರದಿಂದ ವಾಯುದಾಳಿಯಲ್ಲಿ ತೊಡಗಿದ್ದ ಇಸ್ರೇಲ್‌ ಈಗ ನೆಲದ ಮೂಲಕ ದಾಳಿ ನಡೆಸಲು ಮುಂದಾಗಿದೆ. ಇಸ್ರೇಲಿ ಯುದ್ಧ ಟ್ಯಾಂಕರ್‌ಗಳು ಹಾಗೂ ಮಿಲಿಟರಿ ವಾಹನಗಳು ಗಾಜಾ ಪಟ್ಟಿಯ ಗಡಿಯಲ್ಲಿ ಬಂದು ನಿಂತಿವೆ. ಆದರೆ, ಹಮಾಸ್‌ ಮಾತ್ರ ಯಾವುದಕ್ಕೂ ಹೆದರುವುದಿಲ್ಲವೆಂದು ಹೇಳಿದೆ.

ಹಮಾಸ್ ಆಳ್ವಿಕೆಯ ಗಾಜಾ ಪ್ರದೇಶದ ಮೇಲೆ ನೆಲದ ಮೂಲಕ ದಾಳಿ ನಡೆಸಲು ಇಸ್ರೇಲ್ ನಿರ್ಧರಿಸಿದೆ. ಗಾಜಾ ಪಟ್ಟಿಯಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲು ಇಸ್ರೇಲ್‌ ಆದೇಶಿಸಿದೆ. ಅಕ್ಟೋಬರ್‌ 7 ರಂದು ಹಮಾಸ್‌ ಉಗ್ರಗಾಮಿ ಸಂಘಟನೆ ಇಸ್ರೇಲ್‌ ಮೇಲೆ ಅಮಾನುಷ ದಾಳಿ ನಡೆಸಿತ್ತು. ಉಗ್ರಗಾಮಿಗಳು ನಡೆಸಿದ ಹಠಾತ್ ದಾಳಿಯ ವಿರುದ್ಧ ಪ್ರತೀಕಾರದ ಕ್ರಮವಾಗಿ ಇಸ್ರೇಲ್‌ ಪ್ರತಿದಾಳಿಯಲ್ಲಿ ತೊಡಗಿಕೊಂಡಿದೆ.

Israel Hamas War: ‘Don’t scare us, we are ready’: Hamas as Israeli ground assault threat looms

ಇದಕ್ಕೆ ಪ್ರತಿಕ್ರಿಯಿಸಿರುವ ಹಮಾಸ್‌, 'ನಮ್ಮನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ' ಎಂದು ಹೇಳಿಕೊಂಡಿದೆ.

ಇಸ್ರೇಲ್‌ನ ದಕ್ಷಿಣದ ಮೇಲೆ ದಾಳಿಯ ನಡೆಸಿದ ಬಳಿಕ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳು 200 ಇಸ್ರೇಲಿ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಹಮಾಸ್‌ನ ಮಿಲಿಟರಿ ವಿಭಾಗದ ವಕ್ತಾರ ಅಬು ಒಬೇಡೆ ಸೋಮವಾರ ದೂರದರ್ಶನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮನ್ನು ಹೆದರಿಸಲು ಇಸ್ರೇಲ್‌ಗೆ ಸಾಧ್ಯವಿಲ್ಲ. ನಮ್ಮ ಮೇಲೆ ನೆಲದ ಮೂಲಕ ಆಕ್ರಮಣ ಮಾಡುವುದನ್ನು ನಾವು ಎದುರಿಸುತ್ತೇವೆ. ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದು ಅಬು ಒಬೇಡೆ ಹೇಳಿದ್ದಾರೆ.

Israel Hamas War: ‘Don’t scare us, we are ready’: Hamas as Israeli ground assault threat looms

ಗಾಜಾದ ಮೇಲೆ ನೆಲದ ಮೂಲಕ ದಾಳಿಗೆ ಸಿದ್ಧವಾದ ಇಸ್ರೇಲ್‌

ಹಮಾಸ್ ಭಯೋತ್ಪಾದಕರು ಇಸ್ರೇಲ್ ಅನ್ನು ಬೆಚ್ಚಿಬೀಳಿಸಿದ ನಂತರ ಮಧ್ಯಪ್ರಾಚ್ಯದಲ್ಲಿ ರಕ್ತದೋಕಳಿಯೇ ನಡೆಯುತ್ತಿದೆ. ಹತ್ತು ದಿನಗಳ ಕಾಲ ವೈಮಾನಿಕ ದಾಳಿ ನಡೆಸಿದ ಇಸ್ರೇಲ್‌ ಈಗ ನೆಲದ ಮೂಲಕ ದಾಳಿ ನಡೆಸಲು ಮುಂದಾಗಿದೆ.

ಹಮಾಸ್‌ನ ಹಠಾತ್ ದಾಳಿಯನ್ನು ಇಸ್ರೇಲ್ ಕಠಿಣವಾಗಿ ಎದುರಿಸಲು ಮುಂದಾಗಿದೆ. ಈ ದಾಳಿಗೆ ಶತ್ರುಗಳು ಬೆಲೆ ತೆರುವುದು ನಿಶ್ಚಿತವೆಂದು ಇಸ್ರೇಲ್‌ ಹೇಳಿಕೊಂಡಿದೆ. ಹಮಾಸ್‌ ಉಗ್ರಗಾಮಿ ಸಂಘಟನೆಯನ್ನು ನಾಶ ಮಾಡುವುದಾಗಿ ಇಸ್ರೇಲ್‌ ಪ್ರತಿಜ್ಞೆ ಮಾಡಿದೆ. ವೈಮಾನಿಕ ದಾಳಿ ಬಳಿಕ ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ಮುತ್ತಿಗೆ ಹಾಕುವುದಾಗಿ ಇಸ್ರೇಲ್ ಘೋಷಿಸಿದೆ.

ಇಸ್ರೇಲಿ ಪಡೆಗಳು ಈಗ ಗಾಜಾ ಪಟ್ಟಿಯ ಗಡಿಯ ಬಳಿ ಹಲವಾರು ಟ್ಯಾಂಕ್‌ಗಳು ಮತ್ತು ಮಿಲಿಟರಿ ವಾಹನಗಳನ್ನು ನಿಯೋಜಿಸಲು ಪ್ರಾರಂಭಿಸಿವೆ. ನೆಲದ ಮೂಲಕ ಆಕ್ರಮಣ ಮಾಡಲು ಇಸ್ರೇಲ್‌ ಮುಂದಾಗಿದೆ. ಒತ್ತೆಯಾಳುಗಳನ್ನು ಮುಕ್ತಗೊಳಿಸುವಂತೆ ಹಮಾಸ್‌ ಉಗ್ರರಿಗೆ ಇಸ್ರೇಲ್‌ ಒತ್ತಾಯಿಸಿದೆ.

ಅಕ್ಟೋಬರ್‌ 7 ರಂದು ನಡೆದ ಹಮಾಸ್‌ ದಾಳಿ ಜಗತ್ತನ್ನೇ ಚಕಿತಗೊಳಿಸಿದೆ. ಇಸ್ರೇಲ್‌ಗೆ ಅಮೆರಿಕ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ. ಯುದ್ಧ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಇಸ್ರೇಲ್‌ ಪ್ರಧಾನಿಯ ಜೊತೆ ಮಾತುಕತೆ ನಡೆಸಲಿದ್ದಾರೆ.

ಹಮಾಸ್‌ಗೆ ಮುಸ್ಲಿಂ ರಾಷ್ಟ್ರಗಳು ಬೆಂಬಲ ನೀಡಿವೆ. ಅದರಲ್ಲೂ ಇರಾನ್‌ ಹಮಾಸ್‌ ಉಗ್ರರ ಪರವಾಗಿ ಬಹಿರಂಗವಾಗಿಯೇ ಬ್ಯಾಟ್‌ ಬೀಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+