• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್‌ನಲ್ಲಿ ಹೊಸ ಮಾದರಿಯ ಟ್ರಾನ್ಸ್‌ಪರೆಂಟ್ ಮಾಸ್ಕ್ ತಯಾರು

|

ಇಸ್ರೇಲ್, ಮೇ 6: ಇಸ್ರೇಲ್‌ನಲ್ಲಿ ವಿಶೇಷ ಚೇತನರಿಗಾಗಿಯೇ ವಿಶೇಷ ಮಾಸ್ಕ್ ತಯಾರಿಸಲಾಗಿದೆ.

ದೇಶ, ವಿದೇಶಗಳೆಲ್ಲೆಡೆ ಕೊರೊನಾ ಆತಂಕ ಮಡುಗಟ್ಟಿದೆ. ಇದರಿಂದ ಕೊಂಚ ರಕ್ಷಣೆ ಪಡೆಯಲು ಜನರು ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಕೈಗವಸು ಇನ್ನಿತರೆ ವಸ್ತುಗಳ ಮೊರೆ ಹೋಗಿದ್ದಾರೆ.

ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!

ಆದರೆ ಮಾತು ಬಾರದ, ಕಿವಿ ಕೇಳಿಸದ ವಿಶೇಷ ಚೇತನರಿಗೆ ಈ ಸಾಮಾನ್ಯ ಮಾಸ್ಕ್‌ನಿಂದ ತೊಂದರೆ ಉಂಟಾಗುತ್ತಿತ್ತು.ಸಾಮಾನ್ಯವಾಗಿ ಅಂತಹ ಮಂದಿ ಲಿಪ್ ರೀಡಿಂಗ್ ಮೂಲಕವೇ ಗ್ರಹಿಸುತ್ತಾರೆ. ಬೇರೆಯವರಿಗೆ ಅರ್ಥ ಮಾಡಿಸುತ್ತಾರೆ. ಆದರೆ ಈ ಮಾಸ್ಕ್ ಧರಿಸುವುದರಿಂದ ಅವರ ಬಾಯಿಯೇ ಮುಚ್ಚಿ ಹೋಗುತ್ತಿತ್ತು.

ಹಾಗಾಗಿ ಬೆನ್ ಗ್ಯೂರಿಯನ್ ವಿಶ್ವ ವಿದ್ಯಾಲಯವು ವಿಶೇಷ ಚೇತನ ಮಕ್ಕಳಿಗಾಗಿಯೇ ಮಾಸ್ಕ್ ತಯಾರಿಸಿದ್ದಾರೆ.

ಇದು ಟ್ರಾನ್ಸಪರೆಂಟ್ ಆಗಿರಲಿದೆ. ಮಾಸ್ಕ್ ಧರಿಸಿದ್ದರೂ ಅವರ ಬಾಯಿ ಕಾಣಿಸಲಿದೆ.ಈ ಮಾಸ್ಕ್ ಅನ್ನು ಜಿನ್ ಮ್ಯಾನ್ ಡಾರ್ಕಾ ಹೈಸ್ಕೂಲ್‌ನಲ್ಲಿ 3ಡಿ ಪ್ರಿಂಟರ್ ಬಳಕೆ ಮಾಡಿ ತಯಾರಿಸಲಾಗಿದೆ.

ಈ ಮಾಸ್ಕ್ ಅನ್ನು ಮರು ಬಳಕೆ ಮಾಡಬಹುದಾಗಿದೆ, ನೀರಿನಲ್ಲಿ ತೊಳೆಯಬಹುದಾಗಿದೆ. ಹಾಗೆಯೇ ಆರಾಮವಾಗಿ ಉಸಿರಾಡಬಹುದಾಗಿದೆ. ಕವಲ ಬೆರಳೆಣಿಕೆಯಷ್ಟು ಮಾಸ್ಕ್ ತಯಾರಿಸಲಾಗಿದ್ದು, ಹೆಚ್ಚಿನ ಮಾಸ್ಕ್ ತಯಾರಿಕೆಗೆ ಬೇಡಿಕೆ ಬಂದಿದೆ.

English summary
Researchers from the Ben-Gurion University of the Negev have designed a new face mask to assist those with hearing disabilities who often read lips as their primary form of communication, as the coronavirus pandemic continues to grip the Israeli nation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X