Israel-Lebanon War: ಲೆಬನಾನ್ ರಾಜಧಾನಿಯಲ್ಲಿ ನರಕ ಸೃಷ್ಟಿ, ನಡುಗುತ್ತಿರುವ ಜನ...
ಲೆಬನಾನ್ ನಡುಗುತ್ತಿದೆ, ಹಿಜ್ಬುಲ್ಲಾ & ಇಸ್ರೇಲ್ ನಡುವಿನ ಘೋರ ಕಾಳಗದಲ್ಲಿ ಈಗ ಅಲ್ಲಿ ಮಹಾನ್ ವಿನಾಶವೇ ಸೃಷ್ಟಿಯಾಗುತ್ತಿದೆ. ಒಂದು ಕಡೆ ದೇಶ ಬಿಟ್ಟು ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣ ಆಗಿದ್ರೆ, ಮತ್ತೊಂದು ಕಡೆ ದೇಶದಲ್ಲಿ ಉಳಿದರೆ ಜೀವ ಇರುತ್ತೋ? ಇಲ್ವೋ? ಎಂಬ ಭಯ ಕೂಡ ಆವರಿಸಿದೆ. ಹೀಗಾಗಿ ಜನರು ಕೂಡ ನಲುಗಿ ಹೋಗಿರುವ ಸಮಯದಲ್ಲೇ ನಿನ್ನೆ ದಿಢೀರ್ ಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ, 22 ಜನರು ಮೃತಪಟ್ಟಿದ್ದರೆ ಈಗ 117 ಜನರಿಗೆ ಗಾಯವಾಗಿದೆ ಎಂಬ ಮಾಹಿತಿ ಸಂಚಲನ ಸೃಷ್ಟಿ ಮಾಡುತ್ತಿದೆ.
ಗಾಜಾ ನಂತರ ಇದೀಗ ಲೆಬನಾನ್ ವಿರುದ್ಧ ಕೂಡ ಇಸ್ರೇಲ್ ಸೇನೆ ರೊಚ್ಚಿಗೆದ್ದು ದಾಳಿಯನ್ನ ನಡೆಸುತ್ತಿದೆ. ಇದಕ್ಕಾಗಿ ಇಸ್ರೇಲ್ ಮಿಲಿಟರಿ ಇದೀಗ ಪಕ್ಕಾ ಪ್ಲಾನ್ ಮಾಡಿ ಮುಂದೆ ನುಗ್ಗಿದೆ. ಇಸ್ರೇಲ್ ಸೇನೆಯ ಆರ್ಭಟದ ಎದುರು ಈಗಾಗಲೇ ಹಿಜ್ಬುಲ್ಲಾದ ಹಲವು ಮುಖಂಡರು ಜೀವ ಬಿಟ್ಟಿದ್ದಾರೆ. ಲೆಬನಾನ್ ವಿರುದ್ಧ ಅದರಲ್ಲೂ ಲೆಬನಾನ್ ರಾಜಧಾನಿ ಮೇಲೆ ಇಸ್ರೇಲ್ ಸೇನೆ ಅತಿ ಭಯಾನಕ ಬಾಂಬ್ & ಮಿಸೈಲ್ ದಾಳಿ ನಡೆಸುತ್ತಿದೆ. ಮತ್ತೊಂದು ಕಡೆ ಇದೀಗ ಅಲ್ಲಿ ಭೂಸೇನೆ ಮುಖಾಂತರ ಕೂಡ ಕಾರ್ಯಾಚರಣೆ ನಡೆಸುತ್ತಿದೆ ಇಸ್ರೇಲ್ ಮಿಲಿಟರಿ.

ಹೀಗಾಗಿಯೇ ಪರಿಸ್ಥಿತಿ ಕೂಡ ಸೂಕ್ಷ್ಮವಾಗಿದ್ದು ಯಾವ ಕ್ಷಣದಲ್ಲಿ ಎಲ್ಲೆಲ್ಲಿ ದಾಳಿ ನಡೆಯುತ್ತೋ? ಅಂತಾ ಜನ ಕೂಡ ಯೋಚಿಸುವ ಸ್ಥಿತಿ ಇದೆ. ಮತ್ತೊಂದು ಕಡೆ ದಿಢೀರ್ ಲೆಬನಾನ್ ಕ್ಯಾಪಿಟಲ್ ಸಿಟಿ ಅಂದ್ರೆ ರಾಜಧಾನಿ ಬೈರೂತ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಸೇನೆ 22 ಜನರ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಈ ಘಟನೆಯಲ್ಲಿ 117 ಜನರಿಗೆ ಈಗ ಗಾಯವಾಗಿದ್ದು, ಆಸ್ಪತ್ರೆಗಳಲ್ಲಿ ನರಳುತ್ತಿದ್ದಾರೆ. ಅಲ್ಲದೆ ಈಗಾಗಲೇ ಲಕ್ಷಾಂತರ ಜನರು ಈ ಬೆಳವಣಿಗೆ ಹಿನ್ನೆಲೆ ಲೆಬನಾನ್ ದೇಶ ಬಿಟ್ಟು ಹೋಗಿದ್ದಾರೆ.
ಹಿಜ್ಬುಲ್ಲಾ ಮುಖಂಡರ ಜಾಗಗಳು ಪತ್ತೆ?
ಇಸ್ರೆಲ್ ಸೇನೆ ಇದೀಗ ಹಿಜ್ಬುಲ್ಲಾ ಮುಖಂಡರು ಅಂದರೆ, ಹಿಜ್ಬುಲ್ಲಾದ ಕಮಾಂಡರ್‌ಗಳು & ಮುಂಚೂಣಿ ನಾಯಕರನ್ನ ಟಾರ್ಗೆಟ್ ಮಾಡಿ ಈ ದಾಳಿ ನಡೆಸುತ್ತಿದೆ ಎನ್ನಲಾಗಿದೆ. ಹೀಗಿದ್ದರೂ ಲೆಬನಾನ್ ದೇಶದ ಅಪಾರ್ಟ್‌ಮೆಂಟ್ ಅಂದ್ರೆ ಜನರು ವಾಸ ಮಾಡುವ ಜಾಗಗಳ ಮೇಲೆಯೇ ಹೆಚ್ಚಿನ ಪ್ರಮಾಣದ ದಾಳಿ ನಡೆಯುತ್ತಿದೆ. ಹೀಗಾಗಿ ಸಾಮಾನ್ಯ ಜನರು ಸಾಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಸ್ರೇಲ್ ಸೇನೆ ತನ್ನ ದಾಳಿಯನ್ನು ನಿಲ್ಲಿಸಬೇಕು. ಸಾಮಾನ್ಯ ಜನರು ಅಲ್ಲಿಂದ ಹೋಗಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಈ ಗೊಂದಲ ಹೆಚ್ಚಾದ ಹಿನ್ನೆಲೆ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಅನಿಶ್ಚಿತ ವಾತಾವರಣ
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಆದಷ್ಟು ಬೇಗ ಯುದ್ಧಕ್ಕೆ ಬ್ರೇಕ್ ಬೀಳಬೇಕಿದೆ. ಇಲ್ಲವಾದ್ರೆ ದಾಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹಾಗೇ ಇನ್ನೊಂದು ಕಡೆ ಈ ದಾಳಿ ಇದೇ ರೀತಿ ಮುಂದುವರಿದರೆ ಪರಿಸ್ಥಿತಿ ಕೈಮೀರಿ ಹೋಗಿ, ಇರಾನ್ ಕೂಡ ಯುದ್ಧಕ್ಕೆ ನೇರ ಎಂಟ್ರಿ ತೆಗೆದುಕೊಂಡರೆ ಪರಮಾಣು ಬಾಂಬ್ ಬಳಕೆ ಆಗುತ್ತಾ? ಎಂಬ ಭೀತಿ ಎದುರಾಗಿದೆ. ಇದು ಮಧ್ಯಪ್ರಾಚ್ಯ ದೇಶಗಳಲ್ಲಿ ಇದೀಗ ಅನಿಶ್ಚಿತ ವಾತಾವರಣ ಸೃಷ್ಟಿ ಮಾಡಿದೆ.












Click it and Unblock the Notifications