19ನೇ ಸಾರ್ಕ್ ಸಮ್ಮೇಳನ ರದ್ದು, ಪಾಕ್ ಗೆ ಮುಖಭಂಗ

Written By: Ramesh
Subscribe to Oneindia Kannada

ನವದೆಹಲಿ, ಸೆ. 28 : ನವೆಂಬರ್ ನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿದ್ದ 19ನೇ ಸಾರ್ಕ್ ಶೃಂಗಸಭೆ ರದ್ದಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.

ಪಾಕ್ ನಡೆಸುತ್ತಿರುವ ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿದಂತೆ ಪಾಕ್ ವಿರುದ್ಧ ಸಾರ್ಕ್ ರಾಷ್ಟ್ರಗಳು ಒಂದಾಗಿ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು. ಈ ಮೊದಲು ಪಾಕ್ ನಡೆಸಿದ್ದ ಉರಿ ದಾಳಿಯಿಂದ ಬಾರತ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತ್ತು. [ಸಾರ್ಕ್ ಶೃಂಗಸಭೆಯಿಂದ ಭಾರತ, ಬಾಂಗ್ಲಾ, ಭೂತಾನ್ ದೂರ!]

Saarc Summit

ಇದಕ್ಕೆ ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಭೂತಾನ್ ರಾಷ್ಟ್ರಗಳು ಸಹ ಭಾರತ ನಡೆಯನ್ನು ಅನುಸರಿಸಿ ನವೆಂಬರ್ 9 ಮತ್ತು 10ರಂದು ಇಸ್ಲಾಮಾಬಾದ್ ನಲ್ಲಿ ನಿಗದಿಯಾಗಿದ್ದ ಸಾರ್ಕ್ ಸಮ್ಮೇಳನವನ್ನು ಬಹಿಷ್ಕರಿಸಿದ್ದವು.

ಸಾರ್ಕ್ ಶೃಂಗಸಭೆ ನಡೆಸಲು ಯೋಗ್ಯವಾದ ಪರಿಸರವನ್ನು ಪಾಕಿಸ್ತಾನ ಹೊಂದಿಲ್ಲ ಆದ್ದರಿಂದ ಪ್ರಸ್ತುತ ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಭೂತಾನ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ರಾಷ್ಟ್ರಗಳು ಹೇಳಿ ಭಾರತಕ್ಕೆ ಕೈ ಜೋಡಿಸದ್ದವು. ಇದರಿಂದ ಪ್ರಮುಖ ನಾಲ್ಕು ರಾಷ್ಟ್ರಗಳು ಸಮ್ಮೇಳನವನ್ನು ಬಹಿಷ್ಕರಿಸಿರುವುದರಿಂದ ಸಾರ್ಕ್ ಶೃಂಗಸಭೆ ರದ್ದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 19th Saarc Summit to be hosted by Pakistan in November is likely to be postponed with India, Afghanistan, Bangladesh and Bhutan - four of the eight members of the South Asian grouping - deciding to pull out, citing incitement of terrorism in the region.
Please Wait while comments are loading...