ಅಮೆರಿಕ 1 ಡಾಲರ್ ಗೆ 1 ಲಕ್ಷ ರಿಯಾಲ್ ದಾಟಿದ ಇರಾನ್ ಕರೆನ್ಸಿ

ಇರಾನ್ ನ ಕರೆನ್ಸಿ ಮೌಲ್ಯವು ಭಾನುವಾರ ಪಾತಾಳ ಕಂಡಿದೆ. ಅಮೆರಿಕ ಡಾಲರ್ ವಿರುದ್ಧ ಇರಾನ್ ನ ಕರೆನ್ಸಿ ಒಂದು ಲಕ್ಷ ರಿಯಾಲ್ ದಾಟಿದೆ. ಆ ದೇಶದ ಮೇಲೆ ಅಮೆರಿಕವು ಆರ್ಥಿಕ ದಿಗ್ಬಂಧನದ ಪರಿಣಾಮ ಇದಾಗಿದೆ. ಇರಾನ್ ನಿಂದ ಆಮದು ಮಾಡಿಕೊಳ್ಳುತ್ತಿರುವ ತೈಲವನ್ನು ತಕ್ಷಣದಿಂದಲೇ ನಿಲ್ಲಿಸಬೇಕು ಎಂದು ಅಮೆರಿಕವು ತಾಕೀತು ಮಾಡಿತ್ತು.

ಒಂದು ಅಮೆರಿಕನ್ ಡಾಲರ್ ಗೆ ಭಾನುವಾರದಂದು 111,500 ರಿಯಾಲ್ ಗೆ ಕುಸಿಯಿತು. ಇದು ಅಧಿಕೃತ ಕರೆನ್ಸಿ ಮಾರುಕಟ್ಟೆಯಲ್ಲೇನೂ ಅಲ್ಲ. ಶನಿವಾರದಂದು 97,500 ರಿಯಾಲ್ ಇತ್ತು. ಮೂಲಗಳ ಪ್ರಕಾರ, ಒಂದು ಡಾಲರ್ ಗೆ ಇರಾನ್ ನ ಕರೆನ್ಸಿಯು 108,500ದಿಂದ 116,000 ರಿಯಾಲ್ ಮಧ್ಯ ವ್ಯವಹಾರ ನಡೆಸುತ್ತಿತ್ತು.

ದುರ್ಬಲ ಆರ್ಥಿಕತೆಯ ಕಾರಣಕ್ಕೆ ಕಳೆದ ಏಪ್ರಿಲ್ ನಿಂದ ಈಚೆಗೆ ಇರಾನ್ ನ ಕರೆನ್ಸಿ ರಿಯಾಲ್ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ತನ್ನ ಮೌಲ್ಯ ಕಳೆದುಕೊಂಡಿದೆ. ಆರ್ಥಿಕ ದಿಗ್ಬಂಧನ, ಸ್ಥಳೀಯ ಬ್ಯಾಂಕ್ ಗಳಲ್ಲಿನ ಸಮಸ್ಯೆಗಳು, ಅಮೆರಿಕ ಡಾಲರ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಈ ಎಲ್ಲವೂ ಇರಾನ್ ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ.

Iran’s currency in free fall, crossed one lakh riyals per dollar

ಇರಾನ್ ನಿಂದ ಅಮೆರಿಕ ಡಾಲರ್ ಖರೀದಿ- ಮಾರಾಟ, ಚಿನ್ನ ಮತ್ತಿತರ ಬೆಲೆಬಾಳುವ ಲೋಹಗಳ ವ್ಯಾಪಾರ, ನೇರ ಹಾಗೂ ಅಪ್ರತ್ಯಕ್ಷ ಮಾರಾಟ, ಇರಾನ್ ಗೆ ಅಥವಾ ಇರಾನ್ ನಿಂದ ಗ್ರಾಫೈಟ್ ಪೂರೈಕೆ ಮತ್ತು ವರ್ಗಾವಣೆ, ಕಚ್ಚಾ ಅಥವಾ ಅರೆ ಪೂರ್ಣ ಲೋಹಗಳು, ಕಲ್ಲಿದ್ದಲು ಮತ್ತು ಕೈಗಾರಿಕೆಗೆ ಸಂಬಂಧಿಸಿದ ಸಾಫ್ಟ್ ವೇರ್ ಮಾರಾಟದ ಮೇಲೆ ಆಗಸ್ಟ್ ಏಳರಿಂದ ಅಮೆರಿಕವು ಇನ್ನಷ್ಟು ಕಠಿಣ ದಿಗ್ಬಂಧನ ಹೇರಲಿದೆ.

ಅಮೆರಿಕಕ್ಕೆ ಆಮದಾಗುವ ಇರಾನ್ ನ ಕಾರ್ಪೆಟ್ ಗಳು, ಆಹಾರ ಪದಾರ್ಥಗಳು ಮತ್ತು ಕೆಲವು ಆರ್ಥಿಕ ವ್ಯವಹಾರಗಳಿಗೂ ದಿಗ್ಬಂಧನ ಅನ್ವಯಿಸುತ್ತದೆ. ಈ ವರ್ಷದ ಕೊನೆ ಹೊತ್ತಿಗೆ ಇರಾನ್ ನ ತೈಲ ಸರಬರಾಜು ಪ್ರಮಾಣವು ಮೂರನೇ ಎರಡು ಭಾಗದಷ್ಟು ಕುಸಿದುಹೋಗುತ್ತದೆ.

ಅಣ್ವಸ್ತ್ರ ತಂತ್ರಜ್ಞಾನ ಅಭಿವೃದ್ಧಿ ವಿಚಾರವಾಗಿ ಇರಾನ್ ವಿರುದ್ಧ ಅಮೆರಿಕ ಸಿಟ್ಟಾಗಿದೆ. ಈ ಬಗ್ಗೆ ಒತ್ತಡ ಹೇರುವ ಉದ್ದೇಶದಿಂದ ಆರ್ಥಿಕ ದಿಗ್ಬಂಧನ ಹೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+