ಉಪಗ್ರಹ ಆಧಾರಿತ ಮಷಿನ್ ಗನ್ ಬಳಸಿ ಅಣು ವಿಜ್ಞಾನಿ ಹತ್ಯೆ!

ಇರಾನ್‌ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆಗೆ ಉಪಗ್ರಹ ಆಧಾರಿತ ಮಷಿನ್ ಗನ್ ಬಳಸಿದ್ದರು ಎಂಬುದನ್ನ ಇರಾನ್ ಅಧಿಕೃತವಾಗಿ ತಿಳಿಸಿದೆ. ಅಲ್ಲದೆ ಮಷಿನ್ ಗನ್ ನಿಯಂತ್ರಣಕ್ಕಾಗಿ 'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ತಂತ್ರಜ್ಞಾನವನ್ನೂ ಹಂತಕರು ಬಳಸಿದ್ದರು ಎಂದಿದೆ ಇರಾನ್.

ನವೆಂಬರ್ 27ರಂದು ಇರಾನ್ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರ್‌ನಲ್ಲಿ ತೆರಳುತ್ತಿದ್ದಾಗ ಹಂತಕರು ದಾಳಿ ನಡೆಸಿದ್ದರು. ಇರಾನ್‌ನ ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರನ್ನು ಅಡ್ಡಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಈ ವಿಚಾರವಾಗಿ ಸಾಕಷ್ಟು ಮಾಹಿತಿಗಳನ್ನು ಇರಾನ್ ಮುಚ್ಚಿಟ್ಟಿತ್ತು. ಮಾನ ಹರಾಜಾಗುತ್ತದೆ ಎಂಬ ಕಾರಣಕ್ಕೆ ಹಲವು ಸಂಗತಿ ಮರೆಮಾಚಿತ್ತು.

ಈಗ ಒಂದೊಂದೇ ವಿಚಾರವನ್ನು ಇರಾನ್ ತಾನಾಗಿ ರಿವೀಲ್ ಮಾಡುತ್ತಿದೆ. ಈ ಮೊದಲು ಹಂತಕರು ರಿಮೋಟ್ ಕಂಟ್ರೋಲ್ಡ್ ಮಷಿನ್ ಗನ್ ಬಳಸಿದ್ರು ಎನ್ನಲಾಗಿತ್ತು. ಆದರೆ ಉಪಗ್ರಹ ಆಧಾರಿತ ಮಷಿನ್ ಗನ್ ಇದಾಗಿದೆ ಎಂಬುದನ್ನ ಇರಾನ್ ಸೇನಾಧಿಕಾರಿಗಳು ತಿಳಿಸಿದ್ದಾರೆ.

150 ಮೀಟರ್ ಅಂತರದಲ್ಲಿ ಕೊಲೆ ನಡೆದಿದ್ದು, ಫಖ್ರಿಜಾದೆಹ್‌ ಗನ್‌ಮ್ಯಾನ್‌ಗಳು ಫೈರಿಂಗ್‌ಗೆ ಪ್ರತ್ಯುತ್ತರ ನೀಡುವ ಮೊದಲೇ ಹೆಣವಾಗಿ ಬಿದ್ದಿದ್ದರು. ಫಖ್ರಿಜಾದೆಹ್‌ ಹಂತಕರಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿ ಹೆಣವಾಗಿ ಬಿದ್ದಿದ್ದರು. ದಾಳಿಯ ಕ್ರೂರತೆಗೆ ಕಾರು ಛಿದ್ರವಾಗಿ, ರಸ್ತೆ ತುಂಬೆಲ್ಲಾ ರಕ್ತ ಚೆಲ್ಲಾಡಿತ್ತು.

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..!

ಸೇಡಿಗೆ ಸೇಡು, ರಕ್ತಕ್ಕೆ ರಕ್ತ..!

ಇನ್ನು ಘಟನೆ ಸಂಬಂಧ ಇರಾನ್ ರೊಚ್ಚಿಗೆದ್ದಿದೆ. ಇದು ಇಸ್ರೇಲ್ ಕೃತ್ಯ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಬಹಿರಂಗವಾಗಿಯೇ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿದ್ದಾರೆ. ಫಖ್ರಿಜಾದೆಹ್‌ ಹತ್ಯೆಯಿಂದ ಇರಾನ್‌ನ ಪರಮಾಣು ಯೋಜನೆ ನಿಂತು ಹೋಗಲ್ಲ. ಆದರೆ ಈ ಕೊಲೆಯ ಹಿಂದೆ ಇರುವ ಶತ್ರುಗಳಿಗೆ ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ. ಈ ಹೇಳಿಕೆ ಇರಾನ್ ಶತ್ರು ರಾಷ್ಟ್ರಗಳಿಗೆ ಬೆವರಿಳಿಯುವಂತೆ ಮಾಡಿದೆ.

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಲೆಕ್ಕವಿಲ್ಲದಷ್ಟು ವಿಜ್ಞಾನಿಗಳ ಕೊಲೆ

ಅಂದಹಾಗೆ ದಶಕದ ಹಿಂದೆ ಇರಾನ್‌ ಪರಮಾಣು ಯೋಜನೆ ಪ್ರಾರಂಭಿಸಿದ ನಂತರ ಫಖ್ರಿಜಾದೆಹ್‌ ರೀತಿ ಹಲವು ವಿಜ್ಞಾನಿಗಳನ್ನ ಕೊಂದು ಹಾಕಲಾಗಿದೆ. ಎಲ್ಲಾ ಕೊಲೆಗಳ ಹಿಂದೆ ಇಸ್ರೇಲ್‌ ಕೈವಾಡವಿದೆ ಎಂಬುದು ಇರಾನ್‌ ಆರೋಪ. ಆದರೆ ಫಖ್ರಿಜಾದೆಹ್‌ ಹತ್ಯೆ ಬಗ್ಗೆ ಇಸ್ರೇಲ್‌ ಇನ್ನೂ ರಿಯಾಕ್ಟ್ ಮಾಡಿಲ್ಲ. ಏಕೆಂದರೆ ಸದ್ಯ ಇಸ್ರೆಲ್‌ನಲ್ಲೂ ಆತಂಕರಿಕ ಕಚ್ಚಾಟ ನಡೆಯುತ್ತಿದೆ.

ಇಸ್ರೇಲ್‌ ಆಡಳಿತದ ವಿರುದ್ಧ ಅಲ್ಲಿನ ಜನರು ದಂಗೆ ಎದ್ದಿದ್ದಾರೆ. ಹೀಗಾಗಿ ಇಸ್ರೇಲ್‌ ತಟಸ್ಥ ಧೋರಣೆ ಅನುಸರಿಸುತ್ತಿದೆ ಎನ್ನಲಾಗಿದೆ. ಫಖ್ರಿಜಾದೆಹ್‌ ಇರಾನ್‌ನ ಉನ್ನತ ಪರಮಾಣು ಮತ್ತು ರಕ್ಷಣಾ ವಿಭಾಗದ ವಿಜ್ಞಾನಿಯಾಗಿದ್ದರು. ಫಖ್ರಿಜಾದೆಹ್‌ ಮಾಡಿದವರಿಗೆ ಹಾಗೂ ಹತ್ಯೆಯಲ್ಲಿ ಭಾಗಿಯಾಗಿದ್ದವರಿಗೆ ತಕ್ಕೆ ಶಿಕ್ಷೆ ನೀಡುವುದು ಇರಾನ್‌ನ ಆದ್ಯತೆ ಎಂದು ಖಮೇನಿ ಗುಡುಗಿದ್ದಾರೆ. ಈ ಮೂಲಕ ಇರಾನ್‌ನ ಬದ್ಧ ವೈರಿ ಇಸ್ರೇಲ್‌ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಖಮೇನಿ.

ಇಸ್ರೇಲ್ ಜೊತೆ ಕೈಜೋಡಿಸಿತಾ ಅಮೆರಿಕ..?

ಇಸ್ರೇಲ್ ಜೊತೆ ಕೈಜೋಡಿಸಿತಾ ಅಮೆರಿಕ..?

ಇಸ್ರೇಲ್‌ಗೆ ಇರಾನ್ ಕಂಡರೆ ಅದೆಷ್ಟು ಕೋಪವೋ ಅಷ್ಟೇ ದ್ವೇಷ ಅಮೆರಿಕಕ್ಕೂ ಇದೆ. ಎರಡೂ ರಾಷ್ಟ್ರಗಳಿಗೂ ಇರಾನ್ ಸಮಾನವಾದ ಶತ್ರು. ಹೀಗಾಗಿಯೇ ಇರಾನ್‌ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆಯಲ್ಲಿ ಇಸ್ರೇಲ್ ಜೊತೆ ಅಮೆರಿಕ ಕೂಡ ಕೈಜೋಡಿಸಿದೆ ಎಂದು ಇರಾನ್ ಆರೋಪಿಸುತ್ತಿದೆ. ಆದರೆ ಇರಾನ್‌ನ ಈ ಎಲ್ಲಾ ಆರೋಪಗಳಿಗೂ ಬಲವಾದ ಸಾಕ್ಷ್ಯ ಇಲ್ಲ. ಹೀಗಾಗಿಯೇ ಇರಾನ್ ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆ ನಂತರ ಖಮೇನಿ ಮತ್ತು ಟೀಂ ಹಲ್ಲು ಮಸೆಯುತ್ತಿದೆ. ನಮಗೂ ಟೈಂ ಬರಲಿ, ನಮ್ಮ ತಾಕತ್ತು ಏನೆಂದು ತೋರಿಸುತ್ತೇವೆ ಎಂದು ಅಮೆರಿಕ ಹಾಗೂ ಇಸ್ರೇಲ್‌ಗೆ ಪರೋಕ್ಷ ಎಚ್ಚರಿಕೆ ರವಾನಿಸಿದೆ ಇರಾನ್.

Recommended Video

    Team India ಕಡೇ ಟಿ20 ಸೋಲಲು ಈ ಆಟಗಾರರೇ ಕಾರಣ | Oneindia Kannada
    ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

    ನ್ಯೂಕ್ಲಿಯರ್ ಕಂಪ್ಯೂಟರ್ಸ್ ಹೈಜಾಕ್

    ಕೆಲ ತಿಂಗಳ ಹಿಂದೆ ಇರಾನ್ ಮೂಲದ ಹ್ಯಾಕರ್ಸ್ ಗ್ಯಾಂಗ್ ಇಸ್ರೇಲ್‌ನ ಅಣುಸ್ಥಾವರದ ಮೇಲೆ ಸೈಬರ್ ಅಟ್ಯಾಕ್ ಮಾಡಿತ್ತು. ಆದರೆ ದಾಳಿಯಲ್ಲಿ ವಿಫಲವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಇಸ್ರೇಲ್‌ ಕೌಂಟರ್ ಕೊಟ್ಟಿತ್ತು. ಆದರೆ ಇಸ್ರೇಲ್‌ ಹ್ಯಾಕರ್ಸ್ ನಡೆಸಿದ ದಾಳಿ ಫಲ ನೀಡಿ, ಇರಾನ್‌ನ ಪರಮಾಣು ಸ್ಥಾವರಗಳಲ್ಲಿ ಘೋರ ದುರಂತ ನಡೆದಿತ್ತು. ಇದ್ದಕ್ಕಿದ್ದಂತೆ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡು ಇರಾನ್ ಬೆಚ್ಚಿಬಿದ್ದಿತ್ತು. ಈ ದಾಳಿಯನ್ನು ನಡೆಸಿದ್ದು ಇಸ್ರೇಲ್ ಎಂಬ ಆರೋಪವನ್ನ ಅಂದಿನಿಂದಲೂ ಇರಾನ್ ಮಾಡುತ್ತಾ ಬಂದಿದೆ. ಆದರೆ ಈವರೆಗೂ ಅದಕ್ಕೆ ಸಾಕ್ಷಿಗಳು ಸಿಕ್ಕಲ್ಲ. ಇಷ್ಟೆಲ್ಲದರ ಮಧ್ಯೆ ಇರಾನ್‌ನ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆ ನಡೆದುಹೋಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+